Home Health Men Health: ವಯಾಗ್ರ ಮಾತ್ರೆ ಸೇವನೆಯಿಂದ ಸಾವು ಆಗುತ್ತಾ?

Men Health: ವಯಾಗ್ರ ಮಾತ್ರೆ ಸೇವನೆಯಿಂದ ಸಾವು ಆಗುತ್ತಾ?

Hindu neighbor gifts plot of land

Hindu neighbour gifts land to Muslim journalist

Men Health: ಕೆಲ ಪುರುಷರಿಗೆ ಕಾಮಾಸಕ್ತಿ ಕಡಿಮೆ ಇದ್ದಾಗ, ಅವರು ವಯಾಗ್ರ ಮಾತ್ರೆಗಳನ್ನು ತೆಗೆದುಕೊಳ್ಳಲು ನಿರ್ಧಾರ ಮಾಡುತ್ತಾರೆ. ಆದ್ರೆ ಈ ಮಾತ್ರೆಗಳ ಸೇವನೆಯಿಂದ ಅಪಾಯ ಇದೆಯೇ ಎನ್ನುವ ಪ್ರಶ್ನೆ ಹೆಚ್ಚಿನವರಲ್ಲಿ ಇದೆ. ಹೌದು, ಅತಿಯಾದ್ರೆ ಅಮೃತವೂ ವಿಷವಾಗುತ್ತೆ. ಈ ಮಾತ್ರೆಗಳ ಸೇವನೆ ದೀರ್ಘಾವಧಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ ಎಂದು ಆರೋಗ್ಯ (Men Health) ತಜ್ಞರು ಹೇಳುತ್ತಾರೆ.

ವಯಾಗ್ರ ಸೇವನೆಯ ಅಡ್ಡಪರಿಣಾಮಗಳೇನು?

1.ಹೃದಯಾಘಾತ

ನಿರಂತರವಾಗಿ ವಯಾಗ್ರ ಮಾತ್ರೆಗಳನ್ನು ಸೇವಿಸುವ ಪುರುಷರಲ್ಲಿ ಹೃದಯಸಂಬಂಧಿ ಸಮಸ್ಯೆಗಳು ಕಂಡು ಬರುತ್ತವೆ. ವಯಾಗ್ರ ಸೇವನೆಯಿಂದ ಹೃದಯಬಡಿತ ಹೆಚ್ಚಾಗಿ ಸಾವಿಗೆ ಕಾರಣವಾಗಬಹುದು.

2.ಲೋ ಬಿಪಿ

ವಯಾಗ್ರ ಮಾತ್ರೆ ಸೇವಿಸಿದ ಎರಡು ಗಂಟೆ ನಂತ್ರ ಅದು ಕೆಲಸ ಮಾಡಲು ಆರಂಭಿಸುತ್ತದೆ. ಆದ್ರೆ ಕೆಲವರು ಮಾತ್ರೆ ಸೇವಿಸಿದ ತಕ್ಷಣವೇ ಮೂಡ್‌ಗೆ ಹೋಗುತ್ತಾರೆ. ಮಾತ್ರೆ ಕೆಲಸ ಮಾಡ್ತಿಲ್ಲ ಎಂದು ಒಂದಾದ ನಂತರ ಮತ್ತೊಂದರಂತೆ ಮಾತ್ರೆ ಸೇವಿಸುತ್ತಾರೆ. ಹೈಡೋಸ್ ಆಗಿ ಲೋ ಬಿಪಿ ಉಂಟಾಗಿ ಸಾವು ಸಂಭವಿಸುತ್ತೆ ಎಂದು ವೈದ್ಯರು (Dr. Stone’s Mens clinic) ಹೇಳುತ್ತಾರೆ.

3.ವಾಕರಿಕೆ

ನಿರಂತರ ಮಾತ್ರೆಗಳ ಸೇವನೆಯಿಂದ ವಾಕರಿಕೆ ಅಥವಾ ವಾಂತಿ ಬಂದಂತಹ ಫೀಲ್ ಆಗುತ್ತದೆ. ಈ ಸಮಸ್ಯೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಮೆದಳು, ಅನ್ನನಾಳ ಸೇರಿದಂತೆ ಯಕೃತ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

4.ತಲೆನೋವು

ಕೆಲವು ಸಂದರ್ಭದಲ್ಲಿ ಮಾತ್ರೆಗಳ ಅಡ್ಡ ಪರಿಣಾಮದಿಂದ ದೀರ್ಘಕಾಲದ ತಲೆನೋವು ಕಾಣಿಸಿಕೊಳ್ಳುತ್ತದೆ. ಅತಿಯಾದ ಡೋಸ್‌ನಿಂದ ನಿಮಿರುವಿಕೆ ಸೇರಿದಂತೆ ಹೊಸ ಹೊಸ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ.

5.ಇತರೆ ಅಡ್ಡಪರಿಣಾಮಗಳು

ವಯಾಗ್ರ ಸೇವನೆಯಿಂದ ದೃಷ್ಟಿ ಸಮಸ್ಯೆಯೂ ಉಂಟಾಗಬಹುದು ಎಂದು ವೈದ್ಯರು ಎಚ್ಚರಿಸುತ್ತಾರೆ. ಇದರ ಜೊತೆ ಕಿವಿ ಕೇಳುವಿಕೆ ಮಂದವಾಗಬಹುದು, ನಿಶ್ಯಕ್ತಿ, ಮಾನಸಿಕ ಖಿನ್ನತೆ, ಒತ್ತಡದಂತಹ ಸಮಸ್ಯೆಗಳಿಗೆ ಈ ಮಾತ್ರೆಗಳು ಕಾರಣವಾಗಬಹುದು. ಹಾಗಾಗಿ ಯಾವುದೇ ಮಾತ್ರೆ ಅಥವಾ ಔ‍ಷಧಿ ಸೇವಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಲಾಗುತ್ತದೆ.