Home Food ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಬಾಳೆಹಣ್ಣು ತುಂಬಾ ಉತ್ತಮ

ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಬಾಳೆಹಣ್ಣು ತುಂಬಾ ಉತ್ತಮ

Hindu neighbor gifts plot of land

Hindu neighbour gifts land to Muslim journalist

ಆರೋಗ್ಯ ಅನ್ನುವುದು ಮನುಷ್ಯನ ಆಸ್ತಿಯೂ ಹೌದು. ಯಾಕೆಂದರೆ ಆರೋಗ್ಯ ಇದ್ದರೆ ಮನುಷ್ಯ ಪರಿಪೂರ್ಣ ಅನಿಸಿಕೊಳ್ಳುತ್ತಾನೆ. ಆದರೆ ಪ್ರಸ್ತುತ ಮನುಷ್ಯ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿರುವುದು ನಮಗೆ ಗೊತ್ತಿರುವ ವಿಚಾರ. ಬಿಡುವಿಲ್ಲದ ಸ್ಪರ್ಧಾತ್ಮಕ ಬದುಕಿನಲ್ಲಿ ಕೆಲವೊಂದು ಸಣ್ಣ ಸಮಸ್ಯೆಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬ ಗೊಂದಲ ಎಲ್ಲರಿಗೂ ಕಾಡಬಹುದು.

ಅಂತಹ ಸಮಸ್ಯೆಯಲ್ಲಿ ಮೂಲವ್ಯಾದಿ ಯು ಒಂದಾಗಿದೆ. ಹೌದು ನಮ್ಮ ಗಮನಕ್ಕೆ ಬಾರದೆ ಈ ವ್ಯಾದಿಯು ಉಲ್ಬಣಗೊಂಡ ನಂತರ ನಮಗೆ ಗೊತ್ತಾಗುತ್ತದೆ. ಮುಖ್ಯವಾಗಿ ಯಾರಿಗೆ ಮೂಲವ್ಯಾಧಿ ಸಮಸ್ಯೆ ಇರುತ್ತದೆ ಅಂತಹವರಿಗೆ ಗುದದ್ವಾರದ ಭಾಗದಲ್ಲಿ ನೋವು ಮತ್ತು ಊತ ಕಂಡು ಬರುತ್ತದೆ. ಏಕೆಂದರೆ ಇಲ್ಲಿ ರಕ್ತನಾಳಗಳಲ್ಲಿ ಅತಿಯಾಗಿ ರಕ್ತ ಶೇಖರಣೆ ಆಗಿರುತ್ತದೆ. ಹಾಗಾಗಿ ಗುದದ್ವಾರದ ಭಾಗದಲ್ಲಿ ರಕ್ತಸ್ರಾವ ಉಂಟಾಗುತ್ತದೆ ಮತ್ತು ಮಲಬದ್ಧತೆ ಸಮಸ್ಯೆ ಕೂಡ ಹೆಚ್ಚಾಗಿ ಕಾಡುತ್ತದೆ.

ಪ್ರಸ್ತುತ ಮೂಲವ್ಯಾಧಿ ಸಮಸ್ಯೆಯನ್ನು ವೈದ್ಯಕೀಯ ಲೋಕದಲ್ಲಿ ನಾಲ್ಕು ವಿಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲನೆಯ ವಿಭಾಗದಲ್ಲಿ ಕೇವಲ ನೋವು, ಊತ ಮತ್ತು ರಕ್ತಸ್ರಾವ ಇದ್ದರೆ ನಾಲ್ಕನೆಯ ವಿಭಾಗದಲ್ಲಿ ಆಪರೇಷನ್ ಮಾಡಬೇಕಾದ ಅವಶ್ಯಕತೆ ಇರುತ್ತದೆ. ಅಂದರೆ ಯಾವಾಗ ಮೂಲವ್ಯಾಧಿಯ ಮೊಳಕೆ ಗುರುದ್ವಾರದಿಂದ ಹೊರಗೆ ಬಂದು ಅದನ್ನು ವಾಪಸ್ ಒಳಗೆ ತಳ್ಳಲು ಸಾಧ್ಯವಾಗದೇ ಇರುತ್ತದೆ ಅಂತಹ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುತ್ತದೆ. ಈ ರೀತಿಯ ಕಷ್ಟಕರ ಸಂದರ್ಭಗಳನ್ನು ಎದುರಿಸುತ್ತಿರುವ ಜನರು ಸಾಧ್ಯವಾದಷ್ಟು ತಮ್ಮ ಜೀವನ ಶೈಲಿಯಲ್ಲಿ ಬದಲಾವಣೆಗಳನ್ನು ತಂದುಕೊಂಡು ಮೂಲವ್ಯಾಧಿಯ ರೋಗ ಲಕ್ಷಣಗಳು ಹೆಚ್ಚಾಗದಂತೆ ಜಾಗೃತಿ ವಹಿಸಬೇಕಾಗುತ್ತದೆ.

ಹಾಗಿದ್ದರೆ ಈ ಮೂಲವ್ಯಾದಿಗೆ ಪರಿಹಾರ ತಿಳಿದುಕೊಳ್ಳೋಣ:

  • ಮೂಲವ್ಯಾದಿ ಇರುವವರು ದಿನದಲ್ಲಿ ಆಗಾಗ ನೀರು ಕುಡಿಯುವುದು ಸೂಕ್ತ. ಇದರಿಂದ ನಿಮ್ಮ ದೇಹ ನಿರ್ಜಲೀಕರಣ ಸಮಸ್ಯೆಗೆ ಒಳಗಾಗುವುದು ತಪ್ಪುತ್ತದೆ ಜೊತೆಗೆ ಮಲಬದ್ಧತೆ ಸಮಸ್ಯೆ ಕೂಡ ದೂರಾಗುತ್ತದೆ. ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.
  • ಮುಖ್ಯವಾಗಿ ಚೆನ್ನಾಗಿ ಮಾಗಿದ ಬಾಳೆಹಣ್ಣು ತಿನ್ನುವುದರಿಂದ ಮಲಬದ್ಧತೆ ಸಮಸ್ಯೆಯಿಂದ ಸಂಪೂರ್ಣವಾಗಿ ಮುಕ್ತಿ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೆ ಮಲ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಉಂಟಾಗುವ ರಕ್ತ ಸ್ರಾವ ಮತ್ತು ನೋವು ಕೂಡ ಕಡಿಮೆಯಾಗುತ್ತದೆ. ಮೂಲವ್ಯಾಧಿ ಸಮಸ್ಯೆ ಇರುವವರು ರಾತ್ರಿ ಮಲಗುವ ಮುಂಚೆ ಎರಡು ಬಾಳೆಹಣ್ಣು ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಆದರೆ ಗಮನವಿರಲಿ ಯಾವುದೇ ಕಾರಣಕ್ಕೂ ಹಣ್ಣಾಗದ ಅಂದರೆ ಬಾಳೆಕಾಯಿ ತಿನ್ನುವುದು ಬೇಡ. ಸಾಧ್ಯವಾದಷ್ಟು ಮಾಗಿದ ಬಾಳೆಹಣ್ಣು ಆಯ್ಕೆ ನಿಮ್ಮದಾಗಿರಲಿ. ಇದರಲ್ಲಿ ನಿಮಗೆ ನಾರಿನ ಅಂಶ ಹೆಚ್ಚು ಸಿಗುತ್ತದೆ ಹಾಗಾಗಿ ನೀವು ಸೇವಿಸಿದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.

ಮೂಲವ್ಯಾದಿ ಎನ್ನುವುದು ನಿಧಾನವಾಗಿ ಮನುಷ್ಯನನ್ನು ಆವರಿಸಿಕೊಳ್ಳುತ್ತದೆ. ಆದ್ದರಿಂದ ನಾವು ನಮ್ಮ ಆರೋಗ್ಯ ಕಡೆ ಗಮನ ಹರಿಸಿ ಉತ್ತಮ ಆಹಾರ ಸೇವನೆ ಮಾಡುವುದು ಸೂಕ್ತ.