Home Food ಶಿಕ್ಷಣ ಸಂಸ್ಥೆಗಳಲ್ಲಿ ಚಹಾದ ಬದಲು ಲಸ್ಸಿ ಸೇವಿಸುವಂತೆ ಸುತ್ತೋಲೆ !!?

ಶಿಕ್ಷಣ ಸಂಸ್ಥೆಗಳಲ್ಲಿ ಚಹಾದ ಬದಲು ಲಸ್ಸಿ ಸೇವಿಸುವಂತೆ ಸುತ್ತೋಲೆ !!?

Hindu neighbor gifts plot of land

Hindu neighbour gifts land to Muslim journalist

ಇತ್ತೀಚಿಗಷ್ಟೇ ಚಹಾ ಕಡಿಮೆ ಸೇವಿಸುವಂತೆ ಹೇಳಿದ್ದ ಪಾಕಿಸ್ತಾನ ಸರ್ಕಾರ ಇದೀಗ ಚಹಾದ ಬದಲು ಇನ್ನಿತರ ಪಾನೀಯ ಸೇವಿಸುವಂತೆ ಕೇಳಿಕೊಂಡಿದೆ. ಚಹಾ ಆಮದು ಮೇಲಿನ ವೆಚ್ಚವನ್ನು ಕಡಿತಗೊಳಿಸಿದ ನಂತರ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗವು (ಎಚ್‌ಇಸಿ) ಚಹಾದ ಚಟವನ್ನು ಕಡಿಮೆ ಮಾಡಿ ಲಸ್ಸಿ ಸೇವಿಸುವಂತೆ ಆದೇಶ ಹೊರಡಿಸಿದೆ.

ಮಾಧ್ಯಮ ವರದಿಗಳ ಪ್ರಕಾರ, ಉನ್ನತ ಶಿಕ್ಷಣ ಆಯೋಗವು ದೇಶದಲ್ಲಿರುವ ಎಲ್ಲಾ ಕಾಲೇಜುಗಳ ಉಪಕುಲಪತಿಗಳಿಗೆ ಚಹಾದ ಬದಲಿಗೆ ಲಸ್ಸಿ ಮತ್ತು ಸಟ್ಟು ಎನಿರ್ಜಿ ಡ್ರಿಂಕ್ಸ್ ಗಳಂತಹ ಸ್ಥಳೀಯ ಪಾನೀಯಗಳನ್ನು ಪ್ರೋತ್ಸಾಹಿಸಲು ಸಲಹೆ ನೀಡಿದೆ. ಈ ರೀತಿ ಮಾಡುವುದರಿಂದ ಉದ್ಯೋಗಾವಕಾಶ ಹೆಚ್ಚುವುದಲ್ಲದೆ, ದೇಶದಲ್ಲಿ ನಡೆಯುತ್ತಿರುವ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಸಾರ್ವಜನಿಕರಿಗೆ ಆದಾಯವನ್ನೂ ನೀಡುತ್ತದೆ ಎಂದು ಎಚ್‌ಇಸಿ ಹೇಳಿದೆ.

ಪಾಕಿಸ್ತಾನದ ಆರ್ಥಿಕ ಬಿಕ್ಕಟ್ಟನ್ನು ಉಲ್ಲೇಖಿಸಿ ಮಾತನಾಡಿರುವ ಉನ್ನತ ಶಿಕ್ಷಣ ಆಯೋಗದ ಹಂಗಾಮಿ ಅಧ್ಯಕ್ಷರು, ಈ ತೊಂದರೆಯಿಂದ ಹೊರಬರಲು ಮತ್ತು ಕಡಿಮೆ ಆದಾಯದ ಗುಂಪುಗಳಿಗೆ ಪರಿಹಾರ ಒದಗಿಸಲು ಹೊಸ ಮಾರ್ಗಗಳ ಕುರಿತು ಯೋಚಿಸಲು ನಾಯಕತ್ವದ ಪಾತ್ರ ವಹಿಸುವಂತೆ ಉಪಕುಲಪತಿಗಳಿಗೆ ಮನವಿ ಮಾಡಿದ್ದಾರೆ. ಲಸ್ಸಿ ಮತ್ತು ಸಟ್ಟು ಎನರ್ಜಿ ಡ್ರಿಂಕ್ಸ್ ಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಸಮಸ್ಯೆಯನ್ನು ಎದುರಿಸಲು ಆಯೋಗವು ಇತರ ಕೆಲವು ಕ್ರಮಗಳನ್ನು ಸೂಚಿಸಿದೆ. ಇವುಗಳ ಪೈಕಿ ಒಂದು ಸ್ಥಳೀಯ ಚಹಾ ತೋಟಗಳ ಪ್ರಚಾರ, ಸ್ಥಳೀಯ ಚಹಾ ತೋಟಗಳನ್ನು ಉತ್ತೇಜಿಸಲು ಅವರು ಮನವಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಪಾಕಿಸ್ತಾನದ ಯೋಜನಾ ಸಚಿವರು ಚಹಾ ಸೇವನೆಯನ್ನು ಕಡಿಮೆ ಮಾಡುವಂತೆ ತಮ್ಮ ದೇಶದ ಜನರಿಗೆ ಒತ್ತಾಯಿಸಿದ್ದರು. ಇದಾದ ಕೆಲವೇ ದಿನಗಳ ನಂತರ ಪಾಕಿಸ್ತಾನದ ಉನ್ನತ ಶಿಕ್ಷಣ ಆಯೋಗದಿಂದ ಈ ಸಲಹೆ ಬಂದಿದೆ. ಪಾಕಿಸ್ತಾನವು ಪ್ರಸ್ತುತ ಚಹಾವನ್ನು ಆಮದು ಮಾಡಿಕೊಳ್ಳಲು ಹಣವನ್ನು ಎರವಲು ಅಂದರೆ ಸಾಲ ಪಡೆಯಬೇಕಾಗಿದೆ.