Home Entertainment ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಅಶ್ಲೀಲವಾಗಿ ಚುಡಾಯಿಸಿದ ಯುವಕ | ಮಾಡಿದ ತಪ್ಪಿಗೆ 20 ಸೆಕೆಂಡ್​ಗಳಲ್ಲಿ...

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯನ್ನು ಅಶ್ಲೀಲವಾಗಿ ಚುಡಾಯಿಸಿದ ಯುವಕ | ಮಾಡಿದ ತಪ್ಪಿಗೆ 20 ಸೆಕೆಂಡ್​ಗಳಲ್ಲಿ 40 ಚಪ್ಪಲಿ ಏಟು ತಿಂದ!

Hindu neighbor gifts plot of land

Hindu neighbour gifts land to Muslim journalist

ಹುಡುಗಿಯರನ್ನು ದೇವತೆ ಸ್ಥಾನದಲ್ಲಿ ಕಂಡು ಕೆಲವೊಂದಷ್ಟು ಜನ ಗೌರವಿಸಿದರೆ, ಇನ್ನೂ ಕೆಲವೊಂದಷ್ಟು ಜನ ಹೆತ್ತವಳು ಕೂಡ ಹೆಣ್ಣೆಂದು ಯೋಚಿಸಿದೆ ಚಿತ್ರ ಹಿಂಸೆ ನೀಡುತ್ತಾರೆ. ಹುಡುಗಿ ಒಬ್ಬಂಟಿಯಾಗಿ ಹೊರ ನಡೆಯಬೇಕಾದರೂ ಒಂದು ಬಾರಿ ಯೋಚಿಸುವಂತೆ ಆಗಿದೆ. ಯಾಕೆಂದರೆ ದಿನೇ ದಿನೇ ಅತ್ಯಾಚಾರ, ಚುಡಾಯಿಸುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಆದ್ರೆ, ಇದಕ್ಕೆಲ್ಲ ಮುಕ್ತಿ ನೀಡಬೇಕಾದವಳು ಒಬ್ಬಾಕೆ ಹೆಣ್ಣೇ. ಯಾಕೆಂದರೆ ಹೆಣ್ಣು ಧೈರ್ಯದಿಂದ ಮುಂದೆ ಬಂದರಷ್ಟೇ ಇಂತಹ ದುಷ್ಕರ್ಮಿಗಳಿಗೆ ಬುದ್ಧಿ ಕಲಿಸಲು ಸಾಧ್ಯ. ಅದರಂತೆ ಇಲ್ಲೊಂದು ಕಡೆ ಯುವತಿಯೊಬ್ಬಳನ್ನು ಅಶ್ಲೀಲವಾಗಿ ಯುವಕನೊಬ್ಬ ಚುಡಾಯಿಸಿದ್ದಾನೆ. ಇದರಿಂದಾಗಿ ಕುಪಿತಗೊಂಡ ಯುವತಿ ‘ಹೆಣ್ಣು ಮುನಿದರೆ’ ಏನಾಗಬಹುದು ಎಂಬುದು ತೋರಿಸಿದ್ದಾಳೆ.

ಹೌದು. ಯುವತಿಯೊಬ್ಬಳನ್ನು ಅಶ್ಲೀಲವಾಗಿ ಚುಡಾಯಿಸಿದ ಯುವಕನಿಗೆ ಆ ಹುಡುಗಿ ಚಪ್ಪಲಿ ಏಟನ್ನೇ ನೀಡಿದ್ದಾಳೆ. ಕಾಲಿಗಿದ್ದ ಶೂಗಳನ್ನು ಕೈಗಳಿಗೆ ತೆಗೆದುಕೊಂಡು, ಚುಡಾಯಿಸಿದ ವ್ಯಕ್ತಿಯ ತಲೆ-ಮುಖಕ್ಕೆಲ್ಲ ರಪರಪನೇ 20 ಸೆಕೆಂಡ್​ಗಳಲ್ಲಿ 40 ಏಟುಗಳನ್ನು ಕೊಟ್ಟಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ಜಲೌನ್​​ ಜಿಲ್ಲೆಯಲ್ಲಿ ಓರೈ ಎಂಬಲ್ಲಿ ನಡೆದಿದೆ. ಇದರ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅಷ್ಟಕ್ಕೂ ಅಲ್ಲಿ ನಡೆದಿದ್ದೇನೆಂದು ಮುಂದೆ ಓದಿ..

ಹುಡುಗಿಯೊಬ್ಬಳು ರಸ್ತೆಯ ಮೇಲೆ ಹೋಗುತ್ತಿದ್ದಾಗ ಕಂಠಮಟ್ಟ ಕುಡಿದುಕೊಂಡಿದ್ದ ಈ ವ್ಯಕ್ತಿ ಅಲ್ಲೇ ರಸ್ತೆಬದಿಯಲ್ಲಿ ಕುಳಿತು ಆಕೆಯನ್ನು ಅಶ್ಲೀಲವಾಗಿ ಚುಡಾಯಿಸಿದ್ದ. ಹುಡುಗಿ ಅದಕ್ಕೆಲ್ಲ ಹೆದರದೆ, ಕಾಲಲ್ಲಿದ್ದ ಚಪ್ಪಲಿಯನ್ನು ಕೈಯಿಗೆ ತೆಗೆದುಕೊಂಡು, ಆತನಿಗೆ ಹೊಡೆದಿದ್ದಾಳೆ. ಅಷ್ಟು ಹೊಡೆದರೂ ಆ ವ್ಯಕ್ತಿ ಮಾತ್ರ ಕುಕ್ಕರಗಾಲಿನಲ್ಲಿ, ತಲೆತಗ್ಗಿಸಿ ಕುಳಿತುಕೊಂಡು ಅಷ್ಟೂ ಹೊಡೆತ ತಿಂದಿದ್ದಾನೆ. ತಪ್ಪಿಸಿಕೊಳ್ಳುವ ಸಣ್ಣ ಯತ್ನವನ್ನೂ ಮಾಡಲಿಲ್ಲ.

ಈ ವೇಳೆ ಈ ಗಲಾಟೆ ನೋಡಿ ಅಲ್ಲಿಗೆ ಬಂದ ಸ್ಥಳೀಯರು ನಂತರ ಅವನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ’ ಎಂದು ಹೇಳಲಾಗಿದೆ.ವಿಡಿಯೋ ನೋಡಿದ ನೆಟ್ಟಿಗರು ಹುಡುಗಿಯ ಧೈರ್ಯವನ್ನು ಹೊಗಳಿದ್ದಾರೆ. ‘ಕಿರುಕುಳ ನೀಡುವವರಿಗೆ ಹೀಗೇ ಮಾಡಬೇಕು. ಅವರನ್ನೆಲ್ಲ ಹೊಡೆದು ಕೊಲ್ಲಬೇಕು’ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ‘ಆ ವ್ಯಕ್ತಿಗೆ ಹುಡುಗಿ ತಕ್ಕ ಪಾಠವನ್ನೇ ಕಲಿಸಿದ್ದಾಳೆ. ಪ್ರತಿಯೊಬ್ಬ ಹುಡುಗಿಯೂ ಇಂಥ ಧೈರ್ಯವನ್ನು ತೋರಬೇಕು. ಆಗಲೇ ಅತ್ಯಾಚಾರ, ದೌರ್ಜನ್ಯಗಳೆಲ್ಲ ಕೊನೆಗಾಣುತ್ತವೆ’ ಎಂದು ಇನ್ನೊಬ್ಬರು ಹೇಳಿದ್ದಾರೆ. ಒಟ್ಟಾರೆ, ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಪ್ರತಿಯೊಂದು ಹೆಣ್ಣಿಗೂ ಮಾರ್ಗದರ್ಶನವಾಗಿದ್ದಾಳೆ ಈಕೆ…