Home Entertainment ಸಿನಿಲೋಕದ ಖ್ಯಾತ ನಟ ನಿಧನ | ಸಿಎಂ ಟ್ವೀಟ್

ಸಿನಿಲೋಕದ ಖ್ಯಾತ ನಟ ನಿಧನ | ಸಿಎಂ ಟ್ವೀಟ್

Hindu neighbor gifts plot of land

Hindu neighbour gifts land to Muslim journalist

ಮುಂಬೈ: ಖ್ಯಾತ ಮರಾಠಿ ಚಿತ್ರ ನಟ ಪ್ರದೀಪ್ ಪಟವರ್ಧನ್ ಹೃದಯಾಘಾತದಿಂದ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಪಟವರ್ಧನ್ ಅವರಿಗೆ 65 ವರ್ಷ ವಯಸ್ಸಾಗಿದ್ದು, ದಕ್ಷಿಣ ಮುಂಬೈನ ಗಿರ್ಗಾಂವ್‌ನಲ್ಲಿರುವ ತಮ್ಮ ನಿವಾಸದಲ್ಲಿ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.

ಚಷ್ಮೆ ಬಹದ್ದಾರ್, ಏಕ್ ಶೋಧ್ ಮತ್ತು ಮೀ ಶಿವಾಜಿರಾಜೆ ಭೋಸ್ಲೆ ಬೋಲ್ಟಾಯ್ ಚಿತ್ರಗಳಲ್ಲಿನ ಅಭಿನಯಕ್ಕಾಗಿ ಪ್ರದೀಪ್ ಹೆಸರುವಾಸಿಯಾಗಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಪಟವರ್ಧನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. “ಮರಾಠಿ ಚಿತ್ರರಂಗದಲ್ಲಿ ತಮ್ಮ ಆಕರ್ಷಕ ನಟನೆಯಿಂದ ಪ್ರೇಕ್ಷಕರ ಹೃದಯವನ್ನು ಆಳಿದ ಎವರ್ ಗ್ರೀನ್ ನಟ ಪ್ರದೀಪ್ ಪಟವರ್ಧನ್ ಅವರು ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಮರಾಠಿ ಕಲಾ ಜಗತ್ತು ಒಬ್ಬ ಮಹಾನ್ ಕಲಾವಿದನನ್ನು ಕಳೆದುಕೊಂಡಿದೆ” ಎಂದು ಸಿಎಂ ಟ್ವಿಟ್ಟರ್‌ನಲ್ಲಿ ಮರಾಠಿಯಲ್ಲಿ ಬರೆದಿದ್ದಾರೆ.