Home Entertainment Vartur santosh : ಬಿಗ್ ಬಾಸ್’ನಿಂದ ಹೊರ ಬರುತ್ತಿದ್ದಂತೆ ಬಿಗ್ ಗುಡ್ ನ್ಯೂಸ್ ಕೊಟ್ಟ ವರ್ತೂರು...

Vartur santosh : ಬಿಗ್ ಬಾಸ್’ನಿಂದ ಹೊರ ಬರುತ್ತಿದ್ದಂತೆ ಬಿಗ್ ಗುಡ್ ನ್ಯೂಸ್ ಕೊಟ್ಟ ವರ್ತೂರು ಸಂತೋಷ್!!

Hindu neighbor gifts plot of land

Hindu neighbour gifts land to Muslim journalist

Vartur santosh: ಕನ್ನಡ ಬಿಗ್ ಬಾಸ್ ಸೀಸನ್-10ರ ಆಟ ಮುಗಿದಿದೆ. ಅಭಿಮಾನಿಗಳು ಎನಿಸಿದಂತೆ ಕಾರ್ತಿಕ್ ಮಹೇಶ್ ಈ ಸಲದ ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಡ್ರೋನ್ ಪ್ರತಾಪ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ. ಇದಕ್ಕೂ ಮುಂಚೆ ವರ್ತೂರು ಸಂತೋಷ್(Vartur santosh) ಬಿಗ್‌ ಬಾಸ್ ಟಾಪ್‌ 5 ಫೈನಲಿಸ್ಟ್‌ ಗಳಲ್ಲಿ ಒಬ್ಬರಾಗಿದ್ದರು. ಅಲ್ಲದೆ 5ನೇ ರನ್ನರ್ ಅಪ್ ಆಗಿ ಹೊರಬಂದರು. ಹೀಗೆ ಮನೆಯಿಂದ ಹೊರ ಬಂದ ಆ ಸಂದರ್ಭದಲ್ಲಿ ವರ್ತೂರ್ ಅವರು ತನ್ನ ಅಭಿಮಾನಿಗಳೆಲ್ಲರಿಗೂ ಭರ್ಜರಿ ಗುಡ್ ನ್ಯೂಸ್ ನೀಡಿದ್ದಾರೆ.

ಹೌದು, ವರ್ತುರ್ ಸಂತೋಷ್ ಅವರು ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಂತೆ ಅವರ ಅಭಿಮಾನಿಗಳೆಲ್ಲರೂ ಅಲ್ಲಿ ಕಾದು ಕುಳಿತಿದ್ದರು. ಅವರು ಬಂದ ತಕ್ಷಣ ವರ್ತೂರ್ ಅಣ್ಣ, ವರ್ತೂರು ಅಣ್ಣ ಎಂದು ಎಲ್ಲರೂ ಸಂತೋಷದಿಂದ ಅವರನ್ನು ಬರಮಾಡಿಕೊಂಡು ಹಳ್ಳಿಕಾರ್ ಒಡೆಯನಿಗೆ ಜೈಕಾರವನ್ನು ಕೂಡ ಕೂಗಿದರು. ಈ ಸಂದರ್ಭದಲ್ಲಿ ತುಂಬಾ ಸಂತೋಷ ಪಟ್ಟ ವರ್ತೂರು ಸಂತೋಷ್ ಅವರು ಅಭಿಮಾನಿಗಳೆಲ್ಲರಿಗೂ ಶಾಂತ ರೀತಿಯಲ್ಲಿ ಇರಲು ವಿನಂತಿಸಿದರು.

ಬಳಿಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ಅವರು ಮುಂಬರುವ ಮಾರ್ಚ್ ತಿಂಗಳಿನಲ್ಲಿ ಭಾರೀ ಅದ್ದೂರಿಯಾಗಿ ರೇಸ್ ಮಾಡೋಣ. ಇದನ್ನು ಅದ್ದೂರಿಯಾಗಿ ಆಚರಿಸೋಣ ಎಲ್ಲರೂ ಕೂಡ ಇದಕ್ಕೆ ಸಹಕಾರ ನೀಡಿ, ನಾನಿದ್ದೇನೆ ಎಂದು ಘೋಷಣೆಯನ್ನು ಮಾಡಿದರು. ಇದರಿಂದ ಅಭಿಮಾನಿಗಳು ಇನ್ನೂ ಸಂತೋಷಗೊಂಡು ಜೋರಾಗಿ ಜೈಕಾರವನ್ನು ಹಾಕಲು ಶುರು ಮಾಡಿದರು.

ಅಂದಹಾಗೆ ವರ್ತೂರು ಸಂತೋಷ್ ಅವರಿಗೆ ಈ ಹಳ್ಳಿಕಾರ್ ಒಡೆಯ ಎಂಬ ಹೆಸರು ಬಂದದ್ದೇ ಈ ರೇಸ್ ಕಾರಣಕ್ಕಾಗಿ. ಬಹಳ ವರ್ಷಗಳಿಂದಲೂ ಕೂಡ ಅವರು ಹಲವಾರು ದನಗಳ ತಳಿಯನ್ನು ಸಾಕುವುದರೊಂದಿಗೆ ಹೆಚ್ಚು ಹಳ್ಳಿಕಾರ್ ತಳಿಗಳಿಗೆ ಒತ್ತು ನೀಡುವುದರೊಂದಿಗೆ ಅವರು ಗೋವುಗಳ ಮೇಲಿನ ಪ್ರೀತಿಯನ್ನು ತೋರುತ್ತಿದ್ದಾರೆ. ಜೊತೆಗೆ ಬಿಗ್ ಬಾಸ್ ಗೆ ಬರುವ ಮುನ್ನ ಕೂಡ ಗೆದ್ದ ಹಣದಲ್ಲಿ ನಾನು ರೇಸನ್ನು ನಡೆಸುತ್ತೇನೆ ಎಂದು ಹೇಳಿದ್ದರು. ಅಂತಿಯೇ ಇದೀಗ ಅವರು ಐದನೇ ವಿನ್ನರ್ ಆಗಿ ಹೊರಬಂದಿದ್ದು, ರೇಸ್ ಮಾಡುವುದಾಗಿ ಘೋಷಣೆ ಮಾಡಿದ್ದಾರೆ.