

Actress Jyotika: ತಮಿಳಿನ ನಟಿ ಜ್ಯೋತಿಕಾ ಈ ಬಾರಿ ಆನ್ಲೈನ್ ಮುಖಾಂತರ ವೋಟ್ ಮಾಡಿದ್ದಾರಂತೆ. ಜ್ಯೋತಿಕಾ ರಾಜ್‌ಕುಮಾರ್ ರಾವ್ ನಿರ್ದೇಶನದ ಹಿಂದಿ ‘ಶ್ರೀಕಾಂತ್’ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಆನ್‌ಲೈನ್ ಮೂಲಕ ಮತದಾನ ಮಾಡಿದ್ದೇನೆ ಎಂದು ಹೇಳಿಕೆ ನೀಡುವ ಮೂಲಕ ಸೂರ್ಯ ಪತ್ನಿ ಜ್ಯೋತಿಕಾ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಾರೆ.
ಇದನ್ನೂ ಓದಿ: Bantwala : ಬಿಸಿಲ ಝಳಕ್ಕೆ ಬಸ್ ಗಾಜು ಪುಡಿ ಪುಡಿ- ಇಬ್ಬರು ಮಕ್ಕಳು ಸೇರಿ ಚಾಲಕನಿಗೆ ಗಾಯ !!
ಸಂದರ್ಶಕರು ಜ್ಯೋತಿಕಾಗೆ, ‘ಈ ಬಾರಿ ವೋಟ್ ಮಾಡಲು ಯಾಕೆ ಬರಲಿಲ್ಲ? ನಿಮ್ಮನ್ನು ಓಟಿನ ದಿನ ಎಲ್ಲೂ ನೋಡೇ ಇಲ್ಲವಲ್ಲ’ ಎಂದು ಕೇಳಿದ್ದರು. ಆಗ ಆಕೆ ನೀಡಿದ ಉತ್ತರ ಇದೀಗ ತಮಾಷೆಗೆ ಮತ್ತು ವ್ಯಾಪಕ ಟ್ರೊಲ್ಗೆ ಒಳಗಾಗುತ್ತಿದೆ. ಮೊದಲಿಗೆ ಆಕೆ, ‘ನಾನು ಪ್ರತಿ ವರ್ಷ ವೋಟ್ ಮಾಡುತ್ತೇನೆ’ ಎಂದಿದ್ದಾರೆ. ಆಗ ‘ಮತದಾನ ಪ್ರತಿ ವರ್ಷ ನಡೆಯಲ್ಲ ಅಲ್ಲವೇ?’ಎಂದು ಸಂದರ್ಶಕರು ಕೇಳಿದ್ದಾರೆ. ಇದನ್ನು ಜ್ಯೋತಿಕಾ ಒಪ್ಪಿಕೊಂಡಿದ್ದಾರೆ. ಆದರೆ ಮುಂದಕ್ಕೆ ಆಕೆ ಕೊಟ್ಟ ಉತ್ತರ ಇನ್ನಷ್ಟು ಹಾಸ್ಯಾಸ್ಪದವಾಗಿದೆ.
“ಮತದಾನದ ಸಂದರ್ಭದಲ್ಲಿ ನಾವು ನಮ್ಮ ರಾಜ್ಯದಲ್ಲಿ ಇಲ್ಲದೆ ಇರಬಹುದು, ನಮಗೆ ಅನಾರೋಗ್ಯ ಉಂಟಾಗಿರಬಹುದು. ಅದು ನಮ್ಮ ಖಾಸಗಿ ವಿಚಾರ. ಕೆಲವೊಮ್ಮೆ ಖಾಸಗಿಯಾಗಿ ವೋಟ್ ಮಾಡಿರುತ್ತೇವೆ. ಆನ್‌ಲೈನ್‌ನಲ್ಲಿ ವೋಟ್ ಮಾಡಿರಬಹುದು. ಎಲ್ಲವೂ ಪಬ್ಲಿಶ್ ಆಗಬೇಕೆಂದಿಲ್ಲ” ಎಂದಿದ್ದಾರೆ ಒಂದು ಕಾಲದ ತುಂಬಿದ ಕೆನ್ನೆಗಳ ಗ್ಲಾಮರ್ ನಟಿ ಜ್ಯೋತಿಕಾ. ನಮ್ಮಜೀವನಕ್ಕೆ ಕೂಡಾ ಒಂದು ಖಾಸಗಿ ಭಾಗವಿದೆ ಅಲ್ಲವೇ ? ಎಂದಿದ್ದಾರೆ ಜ್ಯೋತಿಕಾ.
ಆಕೆಯ ಉತ್ತರಕ್ಕೆ ಟ್ವಿಟ್ಟರ್ ನಲ್ಲಿ ಹಲವಾರು ಮಂದಿ ತೀಕ್ಷ್ಣವಾಗಿ ಸ್ಪಂದಿಸಿದ್ದಾರೆ. ಒಬ್ಬರು, ಆನ್‌ಲೈನ್‌ನಲ್ಲಿ ಮತದಾನ ಮಾಡುವ ಅವಕಾಶವಿದ್ದರೆ ನಮಗೂ ಹೇಳಿ, ನಾವೂ ಮಾಡುತ್ತೇವೆ ಎಂದಿದ್ದರೆ, ಮತ್ತೊಬ್ಬ ನೆಟ್ಟಿಗ ನಟಿಯ ಜನರಲ್ ನಾಲೆಜ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಜ್ಯೋತಿಕಾರವರು ಯಾವ ವೋಟಿನ ಬಗ್ಗೆ ಮಾತನಾಡುತ್ತಿದ್ದಾರೆ? ಬಹುಶ: ಅವರು ಬಿಗ್ ಬಾಸ್ ವೋಟಿಂಗ್ ಬಗ್ಗೆ ಮಾತನಾಡುತ್ತಿರಬಹುದು ಎಂದು ಇನ್ನೋರ್ವರು ಕಾಲೆಳೆದಿದ್ದಾರೆ. ವೋಟ್ ಮಾಡಿಲ್ಲ ಎಂದು ನೇರವಾಗಿಯೇ ಒಪ್ಪಿಕೊಳ್ಳಬಹುದಲ್ಲ. ಯಾಕೆ ಹೀಗೆ ತಿರುಗಿಸಿ ಹೇಳಿ ಸಿಲ್ಲಿ ಅನ್ನಿಸಿಕೊಂಡು ನಿಮ್ಮ ಜನರಲ್ ನಾಲೆಡ್ಜ್ ಗಳನ್ನು ಪಬ್ಲಿಕ್ ಗೆ ತೋರಿಸ್ತೀರಿ ಎಂದೆಲ್ಲಾ ನಟಿಗೆ X ಬಳಕೆದಾರರು ಖಾರವಾಗಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:H D Revanna: ಸಾಕ್ಷಿ ಇಲ್ಲದೆ ಬಂಧನ, ಇದು ರಾಜಕೀಯ ಷಡ್ಯಂತ್ರ – ಅರೆಸ್ಟ್ ಬೆನ್ನಲ್ಲೇ ರೇವಣ್ಣ ಆಕ್ರೋಶ !!













