Home Entertainment Shah Rukh Khan : ಪೋಷಕರನ್ನು ಒಪ್ಪಿಸಲು ಶಾರುಖ್‌ ಹೆಸರನ್ನು ಅಭಿನವ್‌ ಎಂದು ಬದಲಾಯಿಸಿದ್ದೆ- ಗೌರಿ...

Shah Rukh Khan : ಪೋಷಕರನ್ನು ಒಪ್ಪಿಸಲು ಶಾರುಖ್‌ ಹೆಸರನ್ನು ಅಭಿನವ್‌ ಎಂದು ಬದಲಾಯಿಸಿದ್ದೆ- ಗೌರಿ ಖಾನ್‌

Shah Rukh Khan

Hindu neighbor gifts plot of land

Hindu neighbour gifts land to Muslim journalist

Shah Rukh Khan :  ಪೋಷಕರನ್ನು ಮದುವೆ ಗೆ ಒಪ್ಪಿಸುವ ಸಲುವಾಗಿ ಶಾರುಖ್(Shah Rukh Khan )ಅವರ ಹೆಸರನ್ನು ಅಭಿನವ್ ಎಂದು ಬದಲಾಯಿಸಿದ್ದೆ ಎಂದು 2008 ರ ಸಂದರ್ಶನವೊಂದರಲ್ಲಿ ಗೌರಿ ಖಾನ್ ಅವರು ಬಹಿರಂಗ ಪಡಿಸಿರುವ ವೀಡಿಯೊಂದು ಈಗ ವೈರಲ್‌ ಆಗ್ತಿದೆ.

ಬಾಲಿವುಡ್ ನ ಕಿಂಗ್ ಖಾನ್ ಶಾರುಖ್ ಮತ್ತು ಗೌರಿ ಖಾನ್ ಅವರ ಮದುವೆ ಸ್ಟೋರಿ ಯಾವುದೇ ಚಿತ್ರಕ್ಕೂ ಕಡಿಮೆ ಇಲ್ಲ. ಇದೀಗ ಖಾನ್ ಅವರು ಮದುವೆ ಆಗಿ 30 ವರ್ಷವಾಗಿದೆ. ಗೌರಿ ಅವರ ಮನೆಯವರನ್ನು ಒಪ್ಪಿಸಿ ಮದುವೆ ಆಗುವುದು ಖಾನ್ ಅವರಿಗೆ ಸುಲಭವಾಗಿರಲಿಲ್ಲ ಮತ್ತು ಗೌರಿ ಅವರ ಪೋಷಕರಿಗೆ ಈ ಮದುವೆ ಇಷ್ಟವೇ ಇರಲಿಲ್ಲ, ಮುಸ್ಲಿಂ ಧರ್ಮದ ಶಾರುಖ್ ಅವರು ಗೌರಿ ಅವರ ಮನೆಯನರನ್ನು ಒಪ್ಪಿಸಲು ತುಂಬಾ ಕಷ್ಟಪಟ್ಟಿದ್ದಾರೆ. ಇಂದು ತುಂಬಾ ಸಂತೋಷದ ಜೀವನವನ್ನು ನಡೆಸುತ್ತಿದ್ದಾರೆ.

ಶಾರುಖ್ ಖಾನ್ ಅವರಿಗೆ ಮದುವೆ ಆದಾಗ ಕೇವಲ 26 ವರ್ಷ ಮತ್ತು ಗೌರಿ ಅವರಿಗೆ 21 ವರ್ಷ ಆಗಿತ್ತು. ಮದುವೆಯ ಸಮಯದಲ್ಲಿ ಶಾರುಖ್ ಅವರು ಸಿನೆಮಾಗೆ ಸೇರಲು ಹೊರಟಿದ್ದರು ಮತ್ತು ಖಾನ್ ಅವರ ಧರ್ಮ ಬೇರೆ ಆಗಿದ್ದರಿಂದ ಮನೆಯವರು ಮದುವೆಗೆ ಒಪ್ಪುತ್ತಿರಲಿಲ್ಲ. ಹಾಗಾಗಿ ನಾನು ಶಾರುಖ್ ಅವರ ಹೆಸರನ್ನು ಬದಲಾಯಿಸಿ ಅಭಿನವ್ ಎಂದು ಹಿಂದೂ ಧರ್ಮದ ಹೆಸರನ್ನು ಇಡಲು ಪ್ಲಾನ್ ಮಾಡಿದ್ದೆ ಎಂದು ಸತ್ಯ ಬಿಚ್ಚಿಟ್ಟರು.

ಅಭಿನವ್ ಎಂದು ಹೆಸರು ಬದಲಾಯಿಸಿದರೆ ನನ್ನ ತಂದೆ ತಾಯಿ ಮದುವೆಗೆ ಒಪ್ಪಿಕೊಳ್ಳುತ್ತಾರೆ ಎಂಬುವುದು ನನ್ನ ಆಲೋಚನೆ ಆಗಿತ್ತು. ಅದು ನನ್ನ ನಿಜವಾಗಿಯೂ ಮೂರ್ಖ ಮತ್ತು ತುಂಬಾ ಬಾಲಿಶವಾಗಿತ್ತು ಎಂದು ತಮ್ಮ ಪ್ರೀತಿಯ ದಿನಗಳನ್ನು ನೆನಸಿಕೊಂಡರು.

ಮದುವೆಯಾಗುವ ಮೊದಲು ಇಬ್ಬರು ಡೇಟಿಂಗ್ ನಲ್ಲಿ ಇದ್ದರು. ನಂತರ ಮನೆಯವರನ್ನು ಒಪ್ಪಿಸಿ ಮದುವೆಯಾದರು. ಈ ದಂಪತಿಗಳಿಗೆ ಇಬ್ಬರು ಮಕ್ಕಳು. ಮಕ್ಕಳ ಹೆಸರು ಆರ್ಯನ್ ಮತ್ತು ಸುಹಾನಾ. ಈ ಸಂದರ್ಶನ ನೀಡಿದಾಗ ಅವರ ಕೊನೆಯ ಮಗ ಅಬ್ರಾಮ್ ಹುಟ್ಟಿರಲಿಲ್ಲ.

ಗೌರಿ ಖಾನ್ ಹಾಗೂ ಶಾರುಖ್ ಖಾನ್ ದಂಪತಿಗಳು ಮನೆಯಲ್ಲಿ ಎರಡು ಧರ್ಮದ ಹಬ್ಬಗಳನ್ನು ಆಚರಿಸುತ್ತೇವೆ ಎಂದರು. ‘ ದೀಪಾವಳಿ ಸಮಯದಲ್ಲಿ ನಾನು ಪೂಜೆಯನ್ನು ಮುನ್ನಡೆಸುತ್ತೇನೆ ಮತ್ತು ನನ್ನ ಕುಟುಂಬದವರು ಅನುಸರಿಸುತ್ತಾರೆ. ಈದ್ ನಲ್ಲಿ ಶಾರುಖ್ ಮುನ್ನಡೆಸುತ್ತಾರೆ ಮತ್ತು ನಾವು ಅನುಸರಿಸುತ್ತೇವೆ. ನನ್ನ ಮಕ್ಕಳು ಶಾರುಖ್ ಅವರು ಏನು ಹೇಳುತ್ತಾರೆ ಅದನ್ನೇ ಅನುಸರಿಸುತ್ತಾರೆ. ಎರಡು ಧರ್ಮದ ಹಬ್ಬವನ್ನು ಆಚರಿಸುತ್ತಾರೆ. ಇದು ನನಗೆ ನಿಜಕ್ಕೂ ಖುಷಿ ಕೊಟ್ಟಿದೆ ಎಂದು ಗೌರಿ ಖಾನ್ ತಿಳಿಸಿದರು.