Home Entertainment ನದಿಯಲ್ಲಿ ಪೋಟೋ ಶೂಟ್ ಮಾಡಲು ಹೋದಾಕೆ ನೀರಿಗೆ ಬಿದ್ದಳು !! ಆಮೇಲೆ ಏನಾಯ್ತು…ಈ ಸ್ಟೋರಿ ಓದಿ

ನದಿಯಲ್ಲಿ ಪೋಟೋ ಶೂಟ್ ಮಾಡಲು ಹೋದಾಕೆ ನೀರಿಗೆ ಬಿದ್ದಳು !! ಆಮೇಲೆ ಏನಾಯ್ತು…ಈ ಸ್ಟೋರಿ ಓದಿ

Hindu neighbor gifts plot of land

Hindu neighbour gifts land to Muslim journalist

ಫೋಟೋಶೂಟ್ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಂಗಸರಿಗಂತೂ ಕೇಳಲೇ ಬೇಡ. ಚಿಕ್ಕಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೂ ಫೋಟೋಗಳಿಗೆ ಪೋಸ್ ನೀಡುವುದು ಸರ್ವೇಸಾಮಾನ್ಯವಾಗಿದೆ. ಹಾಗೆಯೇ ಇಲ್ಲೊಬ್ಬಳು ಮಹಿಳೆ ಫೋಟೋ ಶೂಟ್ ಮಾಡಲು ಹೋಗಿ ಅನುಭವಿಸಿದ ಫಜೀತಿ ಅಷ್ಟಿಷ್ಟಲ್ಲ.

ನದಿಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳಲು ಹೋಗಿ ಮಹಿಳೆ ನೀರಿನೊಳಗೆ ಬಿದ್ದಿರುವ ಹಾಸ್ಯಮಯ ವೀಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಇದೀಗ ವೈರಲ್ ಆಗುತ್ತಿದೆ.

ಹೌದು, ಮಹಿಳೆಯೊಬ್ಬರು ನದಿಯ ದಡದಲ್ಲಿ ಸುಂದರವಾದ ಪಿಂಕ್ ಕಲರ್ ಲಾಂಗ್ ಡ್ರೆಸ್ ಅನ್ನು ಧರಿಸಿ, ಹೇರ್ ಸ್ಟೈಲ್ ಮಾಡಿಸಿಕೊಂಡು ತೂಗಾಡುವ ಉಯ್ಯಾಲೆಯ ಮೇಲೆ ಕುಳಿತುಕೊಂಡಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ. ಈ ಉಯ್ಯಾಲೆಯನ್ನು ಮರದ ಹಲಗೆಯಿಂದ ಸಿದ್ಧಪಡಿಸಲಾಗಿದ್ದು, ಅದನ್ನು ಹಗ್ಗದಿಂದ ನೇತಾಡುವಂತೆ ಕಟ್ಟಲಾಗಿತ್ತು. ನಂತರ ಫೋಟೋ ಶೂಟ್ ಮಾಡಿಸಲು ಮಹಿಳೆ ಉಯ್ಯಾಲೆ ಮೇಲೆ ಕುಳಿತು ಸ್ಟೈಲ್ ಆಗಿ ಕ್ಯಾಮೆರಾಗೆ ಪೋಸ್ ನೀಡುತ್ತಿರುತ್ತಾರೆ. ಅಲ್ಲದೇ ಫೋಟೋ ಸೆರೆಹಿಡಿಯುವ ವೇಳೆ ಮಹಿಳೆಯ ಲಾಂಗ್ ಡ್ರೆಸ್ ಅನ್ನು ದೂರದಿಂದ ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿದು ಗಾಳಿಯಲ್ಲಿ ಅಲುಗಾಡಿಸಲು ಪ್ರಯತ್ನಿಸುತ್ತಾರೆ. ಆಗ ಮಹಿಳೆಯ ತೂಕಕ್ಕೆ ಉಯ್ಯಾಲೆ ಮುರಿದು ನೀರಿನಲ್ಲಿ ಬೀಳುತ್ತದೆ. ಇದೇ ವೇಳೆ ಉಯ್ಯಾಲೆ ಜೊತೆ ನೀರಿನೊಳಗೆ ಬಿದ್ದ ಮಹಿಳೆ ನೀರಿನಿಂದ ಮೇಲಕ್ಕೆ ಎದ್ದು ಸ್ವತಃ ತಾವೇ ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಗಿ ವೈರಲ್ ಆಗುತ್ತಿದ್ದು, ಇಲ್ಲಿಯವರೆಗೂ 5,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ಅನೇಕ ಲೈಕ್ಸ್ ಹಾಗೂ ಕಾಮೆಂಟ್‍ಗಳು ಹರಿದುಬಂದಿದೆ.