Home Breaking Entertainment News Kannada ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಡೇಟಿಂಗ್ – ಖ್ಯಾತ ಜ್ಯೋತಿಷಿಯಿಂದ ಶಾಕಿಂಗ್ ಸ್ಟೇಟ್ ಮೆಂಟ್!

ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಡೇಟಿಂಗ್ – ಖ್ಯಾತ ಜ್ಯೋತಿಷಿಯಿಂದ ಶಾಕಿಂಗ್ ಸ್ಟೇಟ್ ಮೆಂಟ್!

Hindu neighbor gifts plot of land

Hindu neighbour gifts land to Muslim journalist

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿ ಇರೋದು ಕಾಮನ್ ಆಗಿ ಬಿಟ್ಟಿದೆ. ಅದರಲ್ಲೂ ಕೂಡ ಸೋಷಿಯಲ್ ಮೀಡಿಯಾದಲ್ಲಿ ನ್ಯಾಷನಲ್ ಕ್ರಷ್ ಆಗಿ ಹೆಚ್ಚು ಆಕ್ಟಿವ್ ಇರೋದು ಮಾತ್ರವಲ್ಲ. ಹೆಚ್ಚು  ಟ್ರೋಲಿಂಗ್ ಆಗುವ ನಟಿ ಎಂದರೂ ತಪ್ಪಾಗಲಾರದು. ಯಾರೇನೇ ಅಂದರೂ ಕೂಡ ಕ್ಯಾರೇ ಎನ್ನದೆ ತನ್ನ ಪಾಡಿಗೆ ನನ್ ಲೈಫ್ ನನ್ನಿಷ್ಟ ಎಂಬಂತೆ ಇತ್ತೀಚೆಗಷ್ಟೇ ವಿಜಯ್ ದೇವರಕೊಂಡ ಅವ್ರ ಜೊತೆಗೆ ನ್ಯೂ ಇಯರ್ ಪಾರ್ಟಿ ಮಾಡಿಕೊಂಡಿದ್ದ ಕಿರಿಕ್ ಬೆಡಗಿಯ ಭವಿಷ್ಯದ ಕುರಿತ ಸ್ಫೋಟಕ ಮಾಹಿತಿ ಲಭ್ಯವಾಗಿದೆ. 

ರಶ್ಮಿಕಾ ಮಂದಣ್ಣ ಸದ್ಯ ಅಲ್ಲು ಅರ್ಜುನ್ ಜೊತೆ ಪುಷ್ಪ 2 ಸಿನಿಮಾದಲ್ಲಿ ನಟಿಸುತ್ತಿದ್ದು, ಪುಷ್ಪ ಮೊದಲ ಭಾಗದಲ್ಲಿ ಶ್ರೀವಲ್ಲಿಯಾಗಿ ಎಲ್ಲರ ಮನ ಸೆಳೆದಿದ್ದ ಕಿರಿಕ್ ಬೆಡಗಿ  ಈಗ ಪುಷ್ಪ 2 ಸಿನಿಮಾ ಸೇರಿದಂತೆ ಸಾಲು ಸಾಲು ಸಿನಿಮಾದ ಮೂಲಕ ಬ್ಯುಸಿ ಆಗಿದ್ದಾರೆ. ರಶ್ಮಿಕಾ ಅವರಿಗೆ  ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲ  ಭಾಷೆಯ ಸಿನಿಮಾ ರಂಗದಲ್ಲೂ ನಟಿಸುವ ಅವಕಾಶ ಲಭ್ಯವಾದರು ಕೂಡ ತೆಲುಗು ಚಿತ್ರರಂಗದಲ್ಲಿ ಸಿಕ್ಕಷ್ಟು ಯಶಸ್ಸು  ಮತ್ತೆಲ್ಲೂ ಸಿಕ್ಕಿಲ್ಲ ಅನ್ನೋದಂತು ಸುಳ್ಳಲ್ಲ..

ಇತ್ತೀಚೆಗೆ ತನ್ನ ವಿವಾದಗಳ ಮೂಲಕ ಹೆಚ್ಚು ಸುದ್ದಿ ಮಾಡಿದ್ದು ಅಲ್ಲದೇ ರಶ್ಮಿಕಾ ಡಿಮ್ಯಾಂಡ್ ಕಡಿಮೆ ಆಗಿದೆ ಅನ್ನೋ ಅನುಮಾನ ಕೂಡ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಗೀತ ಗೋವಿಂದಂ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ ಬಳಿಕ  ಡಿಯರ್ ಕಾಂಮ್ರೆಡ್ ಚಿತ್ರದಲ್ಲೂ ಒಟ್ಟಿಗೆ ನಟಿಸಿ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಈ ನಡುವೆ  ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ನಡುವೆ ಲವ್ವಿ ಡವ್ವಿ ನಡೆಯುತ್ತಿದೆ ಅನ್ನೋ ಸುದ್ದಿ ಕೂಡ ಜೋರಾಗಿ ಹಬ್ಬುತ್ತಿದೆ. ಇದಕ್ಕೆ ಇಂಬು ನೀಡುವಂತೆ ಇಬ್ಬರು ಜೊತೆಯಾಗಿ ಕಾಣಿಸಿಕೊಂಡು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದು ಗೊತ್ತಿರುವ ವಿಚಾರವೇ!!

ಅವಕಾಶ ಸಿಕ್ಕಾಗಲೆಲ್ಲಾ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜಾಲಿ ಟ್ರಿಪ್  ಮೋಜು ಮಸ್ತಿ ಮಾಡಿಕೊಂಡು  ಒಟ್ಟಿಗೆ ಕಾಣಿಸಿಕೊಳ್ಳುವ ಹಿನ್ನೆಲೆ ಇವರಿಬ್ಬರ ನಡುವಿನ ಸಂಬಂಧದ ಬಗ್ಗೆ ಆಗಾಗ ಸುದ್ದಿ ಕೇಳಿ ಬರೋದು ಕಾಮನ್ ಆಗಿ ಬಿಟ್ಟಿದೆ. ಆದರೆ, ಈ ಜೋಡಿಯ ಭವಿಷ್ಯದ ಕುರಿತು ಹೊಸ ಸುದ್ದಿಯೊಂದು ಹೊರಬಿದ್ದಿದೆ.  ಜಾತಕ ನೋಡಿ ಭವಿಷ್ಯ ಹೇಳುವ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಸದ್ಯ ಕಿರಿಕ್ ಬೆಡಗಿಯ ಭವಿಷ್ಯ ನುಡಿದಿದ್ದಾರೆ. ವಿಜಯ್ ದೇವರಕೊಂಡ ಅವರ ಜೊತೆಗೆ ಡೇಟಿಂಗ್ ನಲ್ಲಿ ಬ್ಯುಸಿ ಇರುವ ರಶ್ಮಿಕಾ  ಅವರ ಕುರಿತಂತೆ ಇಂಟರೆಸ್ಟಿಂಗ್ ಸುದ್ದಿಗಳು ಲಭ್ಯವಾಗಿವೆ.

ರಶ್ಮಿಕಾ ಮಂದಣ್ಣ ಅವರ ರಾಜಕೀಯ ಕಣಕ್ಕೆ ಎಂಟ್ರಿ ನೀಡಲಿದ್ದು,  ಕಾಂಗ್ರೆಸ್ ಪಕ್ಷದ ಪರವಾಗಿ ಕರ್ನಾಟಕ ರಾಜ್ಯದಿಂದ ಸಂಸದೆಯಾಗಿ ಸ್ಪರ್ಧಿಸಲಿದ್ದಾರೆ ಎಂದು ವೇಣು ಸ್ವಾಮಿ ತಿಳಿಸಿದ್ದಾರೆ. ಇದರ ಜೊತೆಗೆ ವಿಜಯ್ ಅವರ ಜಾತಕ ಈಗ ರಶ್ಮಿಕಾ ಮೇಲೆ ಪ್ರಭಾವ ಬೀರಲಿದೆ.  ವಿಜಯ್ ಮತ್ತು ರಶ್ಮಿಕಾ ಅವರ ಜಾತಕದ ಅನುಸಾರ ಈಗ ಹೇಗೆ ಜೊತೆಯಾಗಿ ಇದ್ದಾರೋ ಹಾಗೆ ಇನ್ನೂ  ಮುಂದೆಯೂ ಇರುತ್ತಾರೆ ಎಂದು ವೇಣು ಸ್ವಾಮಿ ಹೇಳಿದ್ದು, ಇದರ ಜೊತೆಗೆ ವಿಜಯ್ ದೇವರಕೊಂಡ ಜೊತೆಗಿನ ಸಂಬಂಧದ ಪರಿಣಾಮ ರಶ್ಮಿಕಾಗೆ ಕೇಡುಗಾಲ ಶುರುವಾಗಲಿದೆ ಎಂದು ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ. ಏನೇ ಆಗಲಿ ಕಿರಿಕ್ ಬೆಡಗಿ ದಿನ ನಿತ್ಯ ಒಂದಲ್ಲ ಒಂದು ವಿಷಯಕ್ಕೆ ಎಲ್ಲರ ಚರ್ಚಾ ವಿಷಯವಾಗಿ ಮಾರ್ಪಟ್ಟಿದ್ದಾರೆ.