Home Breaking Entertainment News Kannada ರಾಜ್ ಬಿ ಶೆಟ್ಟಿ ಸಿನಿಮಾದಿಂದ ಹೊರಬಂದ ಮೋಹಕ ತಾರೆ ರಮ್ಯಾ!!!

ರಾಜ್ ಬಿ ಶೆಟ್ಟಿ ಸಿನಿಮಾದಿಂದ ಹೊರಬಂದ ಮೋಹಕ ತಾರೆ ರಮ್ಯಾ!!!

Hindu neighbor gifts plot of land

Hindu neighbour gifts land to Muslim journalist

ಮೋಹಕ ತಾರೆ ರಮ್ಯಾ ಚಂದನವನದಲ್ಲಿ ಏಷ್ಟೋ ಸಮಯ ನಾಪತ್ತೆಯಾಗಿ ಸಿನಿ ರಸಿಕರಿಗೆ ನಿರಾಸೆ ಮೂಡಿಸಿದ್ದರು. ಆದರೆ, ಮತ್ತೆ ಎಂಟ್ರಿ ಕೊಡುವ ಸೂಚನೆ ನೀಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ರವಾನಿಸಿದ್ದರು.

ಸಿನಿಮಾಗೆ ಎಂಟ್ರಿ ಕೊಡಲು ಪೂರ್ವ ಸಿದ್ಧತೆಗಳು ನಡೆಯುತ್ತಿದ್ದ ಬೆನ್ನಲ್ಲೇ ರಾಜ್‌ ಬಿ ಶೆಟ್ಟಿ ಜೊತೆ ಸಿನಿಮಾ ಮಾಡುವುದಾಗಿಯೂ ಅನೌನ್ಸ್ ಮಾಡಿದ್ದರು.

ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಸಿನಿಮಾ ನೋಡಲು ಕಾತುರದಿಂದ ಕಾದು ಕೂತಿದ್ದವರಿಗೆ ರಮ್ಯಾ ಗ್ರಾಂಡ್ ಸರ್ಪ್ರೈಸ್ ಕೊಟ್ಟಿದ್ದರು. ಆದರೆ, ಇದೀಗ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾ ತಂಡದಿಂದ ಹೊರ ಬಂದಿದ್ದಾರೆ ಅನ್ನೋ ಸುದ್ದಿ ವ್ಯಾಪಕವಾಗಿ ಹರಿದಾಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ.

ಮೋಹಕತಾರೆ ರಮ್ಯಾ ಕಮ್‌ಬ್ಯಾಕ್ ಮಾಡುವುದಕ್ಕೆ ವೇದಿಕೆ ರೆಡಿಯಾಗಿ, ರಾಜ್‌ ಬಿ ಶೆಟ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡಲು ಪೂರ್ವ ತಯಾರಿ ನಡೆಯುವ ನಡುವೆಯೇ ಸ್ಯಾಂಡಲ್‌ವುಡ್ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾಗೆ ‘ಸ್ವಾತಿ ಮುತ್ತಿನ ಮಳೆ ಹನಿಯೇ ತಂಡದಿಂದ ಔಟ್ ಆಗಿ ರಮ್ಯಾ ದಿಢೀರನೇ ಈ ಸಿನಿಮಾದಲ್ಲಿ ನಟಿಸುವುದಿಲ್ಲ ಎಂಬ ಆಟೋ ಬಾಂಬ್ ಸಿಡಿಸಿದ್ದಾರೆ.

ಮೋಹಕತಾರೆ ರಮ್ಯಾ ಮತ್ತೆ ಸಿನಿಮಾರಂಗಕ್ಕೆ ಎಂಟ್ರಿ ಕೊಡಲು ನಿರ್ಧರಿಸಿದಾಗ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದಾರೆ ಎನ್ನಲಾಗಿದ್ದು, ತಮ್ಮದೇ ಆ್ಯಪಲ್ ಬಾಕ್ಸ್ ಸಂಸ್ಥೆ ನಿರ್ಮಾಣದಲ್ಲಿ ನಟಿಸಲು ನಿರ್ಧರಿಸಿದ್ದಾರೆ. ಆದರೆ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಸಿನಿಮಾದಲ್ಲಿ ನಟಿಸುತ್ತಿಲ್ಲ ಎನ್ನುವ ವಿಚಾರದ ಹೊರತಾಗಿ ನಿರ್ಮಾಪಕಿಯಾಗಿ ಮುಂದುವರೆಯಲಿದ್ದಾರೆ ಎಂಬ ಸುದ್ಧಿ ಹರಿದಾಡುತ್ತಿದೆ.

ಅಲ್ಲದೆ ರಮ್ಯಾ ಜಾಗಕ್ಕೆ ಮತ್ತೊಬ್ಬ ನಟಿ ಸಿರಿ ರವಿಕುಮಾರ್ ಎಂಟ್ರಿ ಕೊಡುತ್ತಿರುವುದರ ಕುರಿತಾಗಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿಯೇ ಅಧಿಕೃತವಾಗಿ ಹೇಳಿದೆ.

ಹಾಗಿದ್ದರೆ, ಮೋಹಕತಾರೆ ರಮ್ಯಾ ಸ್ಯಾಂಡಲ್‌ವುಡ್ ಸಿನಿಮಾಗೆ ಎಂಟ್ರಿ ಕೊಡುವುದು ಯಾವಾಗ ಎಂಬ ಪ್ರಶ್ನೆ ರಹಸ್ಯವಾಗೆ ಉಳಿದಿದ್ದು, ಮತ್ಯಾವ ಸಿನಿಮಾ ಮೂಲಕ ಎಂಟ್ರಿ ಕೊಡುತ್ತಾರೆ? ಆ ಸಿನಿಮಾ ನಿರ್ದೇಶನ ಮಾಡುವುದು ಯಾರು?

ಇಂತಹದ್ದೇ ಒಂದಿಷ್ಟು ಪ್ರಶ್ನೆಗಳು ಅಭಿಮಾನಿಗಳನ್ನು ಕಾಡುತ್ತಿದೆ. ಸದ್ಯಕ್ಕೆ ಇದ್ಯಾವುದಕ್ಕೂ ರಮ್ಯಾ ಅವರ ನಿರ್ಮಾಣ ಸಂಸ್ಥೆ ಉತ್ತರ ನೀಡದೆ ಇದ್ದರೂ ಕೂಡ ಸದ್ಯದಲ್ಲೆ ಹೊಸ ಸಿನಿಮಾದ ಮೂಲಕ ಪರದೆ ಮೇಲೆ ಕಾಣಿಸಿಕೊಂಡು ಜನರನ್ನು ಮೆಚ್ಚಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.