Home Entertainment Paris Fashion Week: ಅಬ್ಬಾ | ಅಮೇಜಿಂಗ್‌ ಫ್ಯಾಷನ್‌, 30 ಸಾವಿರ ಅರಳುಗಳಿಂದಲೇ ಮೈ ಮುಚ್ಚಿಕೊಂಡು...

Paris Fashion Week: ಅಬ್ಬಾ | ಅಮೇಜಿಂಗ್‌ ಫ್ಯಾಷನ್‌, 30 ಸಾವಿರ ಅರಳುಗಳಿಂದಲೇ ಮೈ ಮುಚ್ಚಿಕೊಂಡು ಬಂದ ಗಾಯಕಿ | ಈಕೆಯ ಅವತಾರಕ್ಕೆ ಎಲ್ಲರೂ ಶಾಕ್‌!!!

Hindu neighbor gifts plot of land

Hindu neighbour gifts land to Muslim journalist

ಝಗ ಮಗಿಸುವ ಲೈಟ್, ಭಿನ್ನ ವಿಭಿನ್ನ ಶೈಲಿಯ ವಸ್ತ್ರ ವಿನ್ಯಾಸದ ಜೊತೆಗೆ ರೆಡ್ ಕಾರ್ಪೆಟ್ ಮೇಲೆ ನಡೆಯುವ ಅದ್ದೂರಿ ಸಮಾರಂಭದಲ್ಲಿ ಕ್ಯಾಟ್ ವಾಕ್ ಮಾಡಿಕೊಂಡು ನೋಡುಗರ ಕಣ್ಮನ ಸೆಳೆಯುವ ಫ್ಯಾಷನ್ ಶೋ ಗಳು. ಕೆಲವೊಮ್ಮೆ ವಸ್ತ್ರ ವಿನ್ಯಾಸಕರು ತಯಾರಿಸುವ ಡ್ರೆಸ್ ಸೆನ್ಸ್ ಫ್ಯಾಷನ್ ಲೋಕದಲ್ಲಿ ಟ್ರೆಂಡ್ ಸೃಷ್ಟಿಸಿದರು ಅಚ್ಚರಿಯಿಲ್ಲ.

ಇದೀಗ, ಪ್ಯಾರಿಸ್ ಫ್ಯಾಷನ್​ ವೀಕ್​​ನಲ್ಲಿ ಗಾಯಕಿ ಡೋಜಾ ಕ್ಯಾಟ್ ಅವರು ತಮ್ಮ ರ್ಯಾಂಪ್ ವಾಕ್ ಮೂಲಕ ರೆಡ್ ಕಾರ್ಪೆಟ್​ ಮೇಲೆ ನಡೆದಾಡಿ ಸಂಚಲನ ಮೂಡಿಸಿದ್ದಾರೆ. ತಮ್ಮ ಕೆಂಪು ಬಣ್ಣದ ವಸ್ತ್ರ ವಿನ್ಯಾಸದ ಝಲಕ್ ಜೊತೆಗೆ ತಮ್ಮದೇ ಶೈಲಿಯ ಮೂಲಕ ಎಲ್ಲರ ಚಿತ್ತ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಫ್ಯಾಷನ್​ ಶೋಗಳಲ್ಲಿ ಕೆಲವರು ಹಾಕುವ ಡ್ರೆಸ್ ಸೆನ್ಸ್ ನೋಡಿ ಜನರು ಅಚ್ಚರಿ ಪಡೋದು ಕೂಡ ಇದೆ. ಕೆಲ ವಸ್ತ್ರ ವಿನ್ಯಾಸಕರ ಕೈ ಚಳಕ ನೋಡುಗರನ್ನು ವಿಸ್ಮಯಕ್ಕೆ ತಳ್ಳುತ್ತದೆ. ಕೆಲವೊಮ್ಮೆ ಸ್ಪರ್ಧಿಗಳು ಧರಿಸುವ ಉಡುಪಿನ ಬಗ್ಗೆ ನಾನಾ ರೀತಿಯ ಟ್ರೊಲ್ ಹರಿದಾಡುತ್ತವೆ. ಯಾರೇನೇ ಅಂದರು ಕ್ಯಾರೇ ಎನ್ನದ ಎಷ್ಟೋ ಮಂದಿ ನಮ್ಮ ಜೀವನ ನಮ್ಮ ಇಷ್ಟ ಎಂಬಂತೆ ತಮ್ಮ ನೆಚ್ಚಿನ ಉಡುಗೆಯನ್ನು ಹಾಕೋದನ್ನು ಬಿಡುವುದಿಲ್ಲ.

ಅಮೆರಿಕದ ರ್ಯಾಪರ್ ಹಾಗೂ ಗಾಯಕಿ ಡೋಜಾ ಕ್ಯಾಟ್ (Doja Cat) ಇದೆ ರೀತಿ ಟ್ರೊಲ್ ಆಗುತ್ತಿದ್ದಾರೆ. 27 ವರ್ಷದ ಈ ಗಾಯಕಿ ಪ್ಯಾರಿಸ್​ ಫ್ಯಾಷನ್ ವೀಕ್​ನಲ್ಲಿ (Paris Fashion Week) ಪಾಲ್ಗೊಂಡಿದ್ದರು. ಇವರ ದೇಹದ ಮೇಲೆ ಬರೋಬ್ಬರಿ 30 ಸಾವಿರ ಹರಳುಗಳಿದ್ದವು ಎನ್ನಲಾಗಿದೆ. ಪ್ಯಾರಿಸ್ ಫ್ಯಾಷನ್​ ವೀಕ್​​ನಲ್ಲಿ ಗಾಯಕಿ ಡೋಜಾ ಕ್ಯಾಟ್ ಅವರು ರೆಡ್ ಕಾರ್ಪೆಟ್​ ಮೇಲೆ ನಡೆದು ಫ್ಯಾಷನ್ ಲೋಕದಲ್ಲಿ ಕೂಡ ತಮ್ಮ ಪ್ರಭೆ ಬೀರಲು ಮುಂದಾಗಿದ್ದರು. ಈ ವೇಳೆ ಅವರು ಕೆಂಪು ಬಣ್ಣದ ಬಟ್ಟೆ ಧರಿಸಿದ್ದು, ತಲೆ, ಎದೆ ಭಾಗ, ಕತ್ತು ಸೇರಿದಂತೆ ಸಂಪೂರ್ಣ ದೇಹದ ಮೇಲೆ ಅವರು ಹರಳುಗಳನ್ನು ಅಂಟಿಸಿಕೊಂಡಿದ್ದರು. ಅವರ ದೇಹದ ಮೇಲೆ ಬರೋಬ್ಬರಿ 30 ಸಾವಿರ ಹರಳುಗಳಿದ್ದವು. ಸದ್ಯ ಈ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಂಚಲನ ಮೂಡಿಸಿದೆ. ಈ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.