Home Entertainment Optical Illusion : ಓದುಗರೇ, ಈ ಚಿತ್ರದಲ್ಲಿ ಅಡಗಿರುವ ಹೆಡ್ ಫೋನ್ ಅನ್ನು ಪತ್ತೆಹಚ್ಚುವಿರಾ?

Optical Illusion : ಓದುಗರೇ, ಈ ಚಿತ್ರದಲ್ಲಿ ಅಡಗಿರುವ ಹೆಡ್ ಫೋನ್ ಅನ್ನು ಪತ್ತೆಹಚ್ಚುವಿರಾ?

Hindu neighbor gifts plot of land

Hindu neighbour gifts land to Muslim journalist

ಈಗಾಗಲೇ ಹಲವು ಆಪ್ಟಿಕಲ್ ಇಲ್ಯೂಷನ್ ಚಿತ್ರವನ್ನು ನೋಡಿರುತ್ತೀರಿ. ಇತ್ತೀಚೆಗೆ ಇದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅಲ್ಲದೆ ಇದೇ ಸೈಟ್ ನಲ್ಲಿ ಇಂತಹ ಹಲವು ಸವಾಲನ್ನು ಪರಿಹರಿಸಿರುತ್ತೀರಿ. ಕಳೆದ ಬಾರಿ ಚಿತ್ರದಲ್ಲಿನ ತಪ್ಪು ಕಂಡುಹಿಡಿಯುವ ಟಾಸ್ಕ್ ಇತ್ತು. ನೀವು ಆ ಸವಾಲನ್ನು ಗೆದ್ದಿರುತ್ತೀರಿ!? ಆದರೆ ಈ ಬಾರಿ ಹೊಸ ಟಾಸ್ಕ್ ನಿಮಗಾಗಿ ಇಲ್ಲಿದೆ. ಅದೇನೆಂದರೆ, ಬಾತ್ರೂಮಿನಲ್ಲಿ ಹೆಡ್​ಫೋನ್ ಒಂದು ಅಡಗಿದೆ ಅದನ್ನು ಹುಡುಕಬೇಕು. ಹುಡುಕುವಿರಲ್ಲಾ!!.

ಇಲ್ಲಿ ಬಾತ್ರೂಮಿನ ಚಿತ್ರವೊಂದು ನೀಡಲಾಗಿದೆ. ನಿಮಗೆ ಕಾಣುವಂತೆ ಹಲವಾರು ವಸ್ತುಗಳಿವೆ. ಆದರೆ ನೀವು ಹುಡುಕಬೇಕಿರೋದು ಅಲ್ಲೇ ಅಡಗಿರುವ ಹೆಡ್​​ಫೋನ್. ಸಾಮಾನ್ಯವಾಗಿ ಬಾತ್ ರೂಂ ನಲ್ಲಿ ಕಮೋಡ್​, ಬ್ರಷ್, ಟಿಷ್ಯೂ ರೋಲ್​, ಬ್ರಷ್, ಬಾತ್ರೂಮ್ ಗೌನ್​, ಶಾಂಪೂ, ಲೋಷನ್​, ವಾಷಿಂಗ್ ಮಶೀನ್​, ಬಾತ್​ಟಬ್​, ಸಿಂಕ್​, ಟವೆಲ್ ಹೀಗೇ ಹಲವಾರು ವಸ್ತುಗಳಿರುತ್ತವೆ. ಹಾಗೇ ಇಲ್ಲೂ ಕೂಡ ಇದೆ. ಇಲ್ಲಿ ಅದರ ಮಧ್ಯೆ ಹೆಡ್​​ಫೋನ್ ಕೂಡ ಇದೆ. ನೀವು ಸ್ಕೂಲ್ ಗೆ ಹೋಗುವಾಗ ಪಾಠ ಪುಸ್ತಕದಲ್ಲಿ ಗುಂಪಿಗೆ ಸೇರದ ಪದ ಕಂಡುಹಿಡಿಯಿರಿ ಎಂದು ಇದ್ದಿದ್ದು ನೆನಪಿರಬಹುದು. ಇದು ಅಂತಹದ್ದೇ ಇಲ್ಲಿ ಹೆಡ್​​ಫೋನ್ ಗುಂಪಿಗೆ ಸೇರದ ವಸ್ತು ಅದನ್ನ ಕಂಡುಹಿಡಿಯಿರಿ.

ಓದುಗರೇ, ಹುಡುಕಿ ಬೇಸತ್ತಿರುವಿರಾ? ಹಾಗಾದ್ರೆ ಇಲ್ಲಿ ಕೇಳಿ. ಇದರ ಉತ್ತರ ಇಲ್ಲಿದೆ. ಆದರೆ ಇದು ತುಂಬಾ ಹುಡುಕಿ ಬೇಸತ್ತಿರುವವರಿಗೆ.
ಉತ್ತರ: ಬಾತ್​ ಗೌನ್​ನ ಪಕ್ಕದಲ್ಲಿ ಒಂದು ಶೆಲ್ಫ್ ಇದೆ. ಕಾಣಿಸುತ್ತಿದೆಯಾ? ಅದರಲ್ಲಿ ಕೆಳಗಿನ ಭಾಗವನ್ನು ಗಮನಿಸಿ. ಅಲ್ಲಿ ಡಿಟರ್ಜೆಂಟ್​ ಇರಿಸಲಾಗಿದೆ. ಅದರ ಪಕ್ಕದಲ್ಲೇ ನೀವು ಹುಡುಕುತ್ತಿರುವ ಹೆಡ್​ಫೋನ್ ಇದೆ. ಡಿಟರ್ಜೆಂಟ್​ನ ಬಾಟಲಿ ನೀಲಿ ಬಣ್ಣದ್ದಾಗಿದೆ. ಹಾಗೂ ಹೆಡ್​ಫೋನ್ ಕೂಡ ನೀಲಿ ಬಣ್ಣದಂತೆ ಇದೆ. ಹಾಗಾಗಿ ನಿಮಗೆ ಹುಡುಕಲು ಕಷ್ಟವಾಯಿತು. ಇನ್ನೂ ಸಿಕ್ಕಿಲ್ಲ ಎಂದಾದರೆ ಸೂಕ್ಷ್ಮವಾಗಿ ಮತ್ತೆ ಗಮನಿಸಿ ಸಿಗುತ್ತದೆ.

ಈ ರೀತಿಯ ಚಿತ್ರವನ್ನು ನೋಡಿ, ಅದನ್ನು ಪರಿಹರಿಸುವುದರಿಂದ ಏಕಾಗ್ರತೆ ಹೆಚ್ಚುತ್ತದೆ. ಇದು ಗ್ರಹಿಕೆಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ. ಯೋಚನಾ ಸಾಮರ್ಥ್ಯ ಹೆಚ್ಚುತ್ತದೆ. ಇಂತಹ ಆಟಗಳನ್ನು ಪರಿಹರಿಸೋದ್ರಿಂದ ಹಲವು ಪ್ರಯೋಜನಗಳಿವೆ.