Home Entertainment ಆನ್ಲೈನಲ್ಲಿ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಆಹಾರದಲ್ಲಿ ಸಿಕ್ಕಿತು ಹಲ್ಲಿ !!

ಆನ್ಲೈನಲ್ಲಿ ಫುಡ್ ಆರ್ಡರ್ ಮಾಡಿದ ವ್ಯಕ್ತಿಗೆ ಆಹಾರದಲ್ಲಿ ಸಿಕ್ಕಿತು ಹಲ್ಲಿ !!

Hindu neighbor gifts plot of land

Hindu neighbour gifts land to Muslim journalist

ಆನ್‍ಲೈನ್‍ನಲ್ಲಿ ಝೋಮಾಟೋ ಮೂಲಕ ರೆಸ್ಟೋರೇಂಟ್‍ವೊಂದರಿಂದ ಫುಡ್ ಆರ್ಡರ್ ಮಾಡಿದ ವ್ಯಕ್ತಿಯೋರ್ವ ಆಹಾರದಲ್ಲಿ ಹಲ್ಲಿ ಕಂಡು ಬೆಚ್ಚಿಬಿದ್ದ ಘಟನೆ ನಡೆದಿದೆ.

ಊಟದಲ್ಲಿ ಹಲ್ಲಿ ಪತ್ತೆಯಾಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ದೃಶ್ಯ ಕಂಡೊಡನೆ ಗ್ರಾಹಕ ಕೌಸ್ತವ್ ಕುಮಾರ್ ಸಿನ್ಹಾ ಟ್ವಿಟರ್ ಮೂಲಕ ಕಂಪನಿಗೆ ದೂರು ನೀಡಿದ್ದಾರೆ.

ತನ್ನ ಟ್ವೀಟ್‌ನಲ್ಲಿ ಕೌಸ್ತವ್ ಕುಮಾರ್ ಸಿನ್ಹಾ, ‘ತಿನ್ನುವ ಆಹಾರದಲ್ಲಿ ಸತ್ತ ಹಲ್ಲಿಯನ್ನು ನೋಡಿ ಆಘಾತವಾಗಿದೆ. ಕೋವಿಡ್‌ನ ಮಧ್ಯೆ ಇದೆಲ್ಲ ಉದ್ದೇಶಪೂರ್ವಕವಾಗಿ ನಡೆಯುತ್ತಿದೆಯೇ ಎಂದನಿಸುತ್ತಿದ್ದು, ಇದೊಂದು ತುಂಬಾ ಕೆಟ್ಟ ಅನುಭವ ಎಂದಿದ್ದಾರೆ.

ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಕಂಪನಿ, ಪಂಜಾಬಿ ರಸೋಯ್ ಹೆಸರಿನ ರೆಸ್ಟೋರೆಂಟ್ ನಿಂದ ಆಹಾರ ಆರ್ಡರ್ ಮಾಡಿರುವುದಾಗಿ ಗ್ರಾಹಕರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ಪಡೆಯಲು ಅವರ ದೂರವಾಣಿ ಸಂಖ್ಯೆಗೆ ಸಂಪರ್ಕಿಸಲು ಪ್ರಯತ್ನಿಸಲಾಯಿತು. ಆದರೆ ಫೋನ್ ಎತ್ತಲಿಲ್ಲ ಎಂದು ಹೇಳಿದೆ.