Home Breaking Entertainment News Kannada ಹೊಸ ಚಾನೆಲ್ ಗೆ ಮಣೆ ಹಾಕಿದ ಬಿಗ್ ಬಾಸ್ | ಆ್ಯಂಕರ್ ಕೂಡಾ ಚೇಂಜ್!

ಹೊಸ ಚಾನೆಲ್ ಗೆ ಮಣೆ ಹಾಕಿದ ಬಿಗ್ ಬಾಸ್ | ಆ್ಯಂಕರ್ ಕೂಡಾ ಚೇಂಜ್!

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಶೋ ತನ್ನ ವಿಭಿನ್ನತೆಯಿಂದ ಜನಮನದಲ್ಲಿ ನೆಲೆಸಿ ಸಾಕಷ್ಟು ಯಶಸ್ಸು ಗಳಿಸಿ, ಜನಪ್ರೀಯವಾಗಿದೆ. ಇದೀಗ ಬಿಗ್ ಬಾಸ್ ಕನ್ನಡ, ಹಿಂದಿ, ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ಆರಂಭವಾಗಿದೆ. ಕನ್ನಡದಲ್ಲಿ ಕಿಚ್ಚ ಸುದೀಪ್, ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ ಹಾಗೂ ತಮಿಳಿನಲ್ಲಿ ಕಮಲ್ ಹಾಸನ್ ಅವರು ಈ ಶೋ ಅನ್ನು ಅತ್ಯುತ್ತಮವಾಗಿ ನಡೆಸಿಕೊಡುತ್ತಿದ್ದಾರೆ. ಆದರೆ ತೆಲುಗು ಬಿಗ್ ಬಾಸ್​ಗೆ ಮುಂದಿನ ವರ್ಷದಿಂದ ಹೊಸ ಆಯಂಕರ್ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ.

ತೆಲುಗು ಬಿಗ್​ ಬಾಸ್​ನ ಹಲವು ಸೀಸನ್​ಗಳನ್ನು ಅಕ್ಕಿನೇನಿ ನಾಗಾರ್ಜುನ ಅವರು ನಿರೂಪಣೆ ಮಾಡಿದ್ದಾರೆ. ಕೆಲವು ದಿನಗಳಲ್ಲಿ ಅವರ ಅನುಪಸ್ಥಿತಿಯಲ್ಲಿ ಬೇರೆ ಆಯಂಕರ್​ಗಳು ಕೂಡ ಬರುತ್ತಿದ್ದರು. ಆದರೆ ಅಕ್ಕಿನೇನಿ ನಾಗಾರ್ಜುನ ಅವರಿಗೆ ಹೆಚ್ಚು ಚಾರ್ಮ್ ಇರುವ ಕಾರಣ ಅವರನ್ನೇ ಆಯಂಕರ್ ಆಗಿ ಆಯ್ಕೆ ಮಾಡಲಾಗಿತ್ತು. ಸದ್ಯ ತೆಲುಗಿ​ನಲ್ಲಿ ಬಿಗ್ ಬಾಸ್​ಗೆ ಟಿಆರ್​ಪಿ ಸಿಗುತ್ತಿಲ್ಲ, ಕುಸಿಯುತ್ತಿದೆ.

ಹಾಗಾಗಿ ಬಿಗ್ ಬಾಸ್ ಮುಂದಿನ ವರ್ಷದಿಂದ ಬೇರೆ ಚಾನೆಲ್​ನಲ್ಲಿ ಪ್ರಸಾರವಾಗಲಿದೆ. ಅಷ್ಟೇ ಅಲ್ಲದೆ ನಿರೂಪಕರನ್ನು ಬದಲಾಯಿಸಲು ಸ್ಟಾರ್ ಮಾ ವಾಹಿನಿ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ. ಇದೀಗ ಈ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ ಅಕ್ಕಿನೇನಿ ನಾಗಾರ್ಜುನ ಬದಲಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳಬಹುದು ಎಂದು ಕಾದು ನೋಡಬೇಕಿದೆ. ಸಮಂತಾ ರುತ್ ಪ್ರಭು ಸೇರಿದಂತೆ ಹಲವರಿಗೆ ಈ ಶೋ ನಡೆಸಿಕೊಟ್ಟ ಅನುಭವ ಇದೆ. ಹಾಗಾಗಿ ಯಾರಿಗೆ ಈ ಅವಕಾಶ ಸಿಗಬಹುದು ಎಂದು ಕಾದು ನೋಡಬೇಕಿದೆ.