Home Entertainment ಇತಿಹಾಸ ಪ್ರಸಿದ್ಧ ಮೇಲುಕೋಟೆಯಲ್ಲಿ ನಾಗಚೈತನ್ಯ ಚಿತ್ರ ತಂಡದಿಂದ ಎಡವಟ್ಟು | ಜನರ ಆಕ್ರೋಶಕ್ಕೆ ಕಾರಣವೇನು?

ಇತಿಹಾಸ ಪ್ರಸಿದ್ಧ ಮೇಲುಕೋಟೆಯಲ್ಲಿ ನಾಗಚೈತನ್ಯ ಚಿತ್ರ ತಂಡದಿಂದ ಎಡವಟ್ಟು | ಜನರ ಆಕ್ರೋಶಕ್ಕೆ ಕಾರಣವೇನು?

Hindu neighbor gifts plot of land

Hindu neighbour gifts land to Muslim journalist

ಚಿತ್ರರಂಗದವರು ಎಷ್ಟೇ ಹೆಸರು ಪಡೆದರು ಸಹ ಜನರ ಭಾವನೆ ಮತ್ತು ಆಚಾರ ವಿಚಾರಗಳನ್ನು ಗೌರವಿಸಬೇಕು. ಇಲ್ಲವಾದರೆ ಜನರ ಆಕ್ರೋಶಕ್ಕೆ ಒಳಗಾಗುವುದು ಸರ್ವೇ ಸಾಮಾನ್ಯ. ಹಾಗೆಯೇ ಮೇಲುಕೋಟೆಯಲ್ಲಿ ಮತ್ತೇ ಪರಭಾಷಾ ಚಿತ್ರತಂಡ ತಪ್ಪು ಮಾಡಿಕೊಂಡಿದೆ. ಅಂದರೆ ಇತಿಹಾಸ ಪ್ರಸಿದ್ಧಿ ಮೇಲುಕೋಟೆಯ ಪರಂಪರೆಗೆ ಧಕ್ಕೆಯಾಗುವ ರೀತಿಯಲ್ಲಿ ಸೆಟ್ ಹಾಕಿ ತೆಲುಗು ಚಿತ್ರತಂಡ ಶೂಟಿಂಗ್ ಮಾಡಿದೆ.

ಮೇಲುಕೋಟೆಯಲ್ಲಿರುವ ಪಾರಂಪರಿಕತೆಯ ಸ್ಮಾರಕವಾದ ರಾಯಗೋಪುರದಲ್ಲಿ ಬಾರ್ ರೀತಿಯ ಸೆಟ್ ಹಾಕಿ, ವಿವಿಧ ಬ್ರ್ಯಾಂಡ್‌ಗಳ ಮದ್ಯದ ಬಾಟಲ್‌ಗಳನ್ನಿಟ್ಟು ಚಿತ್ರೀಕರಣ ಮಾಡಿರುವ ಆರೋಪ ಸೂಪರ್​ಸ್ಟಾರ್​ ನಾಗಾರ್ಜುನ್​ ಅವರ ಪುತ್ರ ನಾಗಚೈತನ್ಯ ಅವರು ನಟಿಸುತ್ತಿರುವ ಪ್ರೊಡಕ್ಷನ್ ಚಿತ್ರತಂಡದವರನ್ನು ಜನರು ಆರೋಪ ಮಾಡಿರುವುದಾಗಿದೆ.

ಎರಡು ದಿನಗಳ ಚಿತ್ರೀಕರಣ ಮಾಡಲು ಜಿಲ್ಲಾಧಿಕಾರಿ ಅವರು ಷರತ್ತು ಬದ್ಧ ಅನುಮತಿ ನೀಡಿದ್ದರು. ಆದರೆ ಸೆಟ್ ನಿರ್ಮಿಸಲು ಭಾರೀ ಗಾತ್ರದ ಕಬ್ಬಿಣದ ಕಂಬವನ್ನು ಬಳಸಿದ್ದು ಅಲ್ಲದೆ ನಿಯಮಗಳನ್ನು ಗಾಳಿಗೆ ತೂರಿ ರಾಯಗೋಪುರದಲ್ಲಿ ಬಾರ್ ಸೆಟ್ ಹಾಕಿದ ಕಾರಣ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿರುತ್ತಾರೆ.

ಪರಭಾಷಾ ಚಿತ್ರಗಳ ಶೂಟಿಂಗ್‌ನಿಂದ ಮೇಲುಕೋಟೆ ಪರಂಪರೆಗೆ ಪದೇ ಪದೇ ಧಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ಚಿತ್ರೀಕರಣದ ವೇಳೆ ನಿಯಮ ಪಾಲನೆಗೆ ಸಿಬ್ಬಂದಿ ನೇಮಕಕ್ಕೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ. ಯಾಕೆಂದರೆ ಕಾರಣ ಈ ಹಿಂದೆಯೂ ಮೇಲುಕೋಟೆ ಕಲ್ಯಾಣಿಯಲ್ಲಿ ಶೂಟಿಂಗ್ ನಡೆಸಿದ್ದು ತೆಲುಗು ಚಿತ್ರತಂಡ ಕಿರಿಕಿರಿ ಉಂಟು ಮಾಡಿತ್ತು. ಆ ಸಮಯದಲ್ಲೂ ಇದೇ ನಾಗಚೈತನ್ಯ ನಟನೆಯ ಸಿನೆಮಾ ಚಿತ್ರೀಕರಣ ನಡೆಯುತ್ತಿತ್ತು. ಈ ವೇಳೆ ರಾಜಮುಡಿ ಉತ್ಸವಕ್ಕೆ ಅಡಚಣೆ ಮಾಡಲಾಗಿತ್ತು ಎಂದು ಜನರು ಈ ಸಿಬ್ಬಂದಿ ನೇಮಕದ ನಿರ್ಧಾರಕ್ಕೆ ಮುಂದಾಗಿದ್ದಾರೆ.

ಚಿತ್ರೀಕರಣ ತಂಡದಿಂದ ಜನರ ನಂಬಿಕೆಗೆ ಧಕ್ಕೆಯಾಗಿದ್ದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಜನರಿದ್ದರೆ ಚಿತ್ರ ಮತ್ತು ಚಿತ್ರೀಕರಣ ತಂಡ ಎನ್ನುವುದನ್ನು ಇವರುಗಳು ಅರಿತುಕೊಳ್ಳಬೇಕಾಗಿದೆ.