Home Entertainment Subi Suresh Death : ಕಳಚಿತು ಮತ್ತೊಂದು ಸಿನಿ ಜಗತ್ತಿನ ಮುತ್ತು, ಮಲಯಾಳಂ ನಟಿ ಸುಬಿ...

Subi Suresh Death : ಕಳಚಿತು ಮತ್ತೊಂದು ಸಿನಿ ಜಗತ್ತಿನ ಮುತ್ತು, ಮಲಯಾಳಂ ನಟಿ ಸುಬಿ ಸುರೇಶ್‌ ನಿಧನ

Subi Suresh Death
image source : B4Blaze

Hindu neighbor gifts plot of land

Hindu neighbour gifts land to Muslim journalist

Subi Suresh Death : ಸೌತ್ ಫಿಲ್ಮ್ ಇಂಡಸ್ಟ್ರಿಗೆ ಯಾರ ಕಣ್ಣು ಬಿದ್ದಿದೆಯೋ ಗೊತ್ತಿಲ್ಲ. ಕಳೆದ ಕೆಲವು ದಿನಗಳಿಂದ ಒಂದರ ಹಿಂದೆ ಒಂದರಂತೆ ಅನೇಕ ಗಣ್ಯರ ಹಠಾತ್ ಸಾವು ಸಂಭವಿಸುತ್ತಿರುವುದು ಎಲ್ಲರಲ್ಲೂ ಒಂದು ರೀತಿಯ ವೇದನೆ ತರುತ್ತಿದೆ. ಇತ್ತೀಚೆಗಷ್ಟೇ, ಎಸ್‌ಕೆ ಭಗವಾನ್ ಮತ್ತು ಮಾಯಿಲ್‌ಸಾಮಿ, ಜೂನಿಯರ್ ಎನ್‌ಟಿಆರ್ ಅವರ ಸೋದರಸಂಬಂಧಿ ತಾರಕ್ ರತ್ನ ಅವರ ನಿಧನವಾಗಿದ್ದು, ಈ ನೋವಿನಿಂದಲೇ ಜನ ಮೇಲೆ ಬಂದಿಲ್ಲ, ಈಗ ಮಲಯಾಳಂ ಇಂಡಸ್ಟ್ರಿಯ( Malayalam Industry) ಜನಪ್ರಿಯ ಹಾಸ್ಯನಟಿ ( comedy actress) ಮತ್ತು ಟಿವಿ ನಿರೂಪಕಿ( TV Anchor) ಸುಬಿ ಸುರೇಶ್ (42 ವರ್ಷ) ನಿಧನ (Subi Suresh Death)ರಾಗಿದ್ದಾರೆ. ಇದೊಂದು ರೀತಿಯ ದೊಡ್ಡ ಹೊಡೆತ. ಒಂದರ ಮೇಲೊಂದು ಸಾವಿನ ಘಟನೆ ನಡೆಯುತ್ತಿರುವುದು ಸಿನಿಮಾ ಜಗತ್ತಿಗೇ ಆಘಾತಕಾರಿ ವಿಷಯ.

42 ವರ್ಷದ ಸುಬಿ ಸುರೇಶ್ ಅವರು ಯಕೃತ್ತು ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಸುಬಿ ಸುರೇಶ್ ತಮ್ಮ ವೃತ್ತಿಜೀವನವನ್ನು ನೃತ್ಯಗಾರ್ತಿಯಾಗಿ ಪ್ರಾರಂಭ ಮಾಡಿದ್ದರು. ನಂತರ ಅವರು ಸ್ಟೇಜ್ ಶೋ (Stage Show) ಗಳಲ್ಲಿ ಹಾಸ್ಯ ಮಾಡಲು ಪ್ರಾರಂಭಿಸಿದ್ದು, ನಂತರ ಉತ್ತಮ ನಟಿಯಾಗಿ, ಹಾಸ್ಯ ನಟಿಯಾಗಿ ಹೆಸರುವಾಸಿಯಾಗಿದ್ದರು.

ಸುಬಿ ಸುರೇಶ್‌ ಅವರು ಚಲನಚಿತ್ರಗಳ ಜೊತೆಗೆ, ಅವರು ಅನೇಕ ಟಿವಿ ಕಾರ್ಯಕ್ರಮಗಳನ್ನು ಸಹ ಮಾಡಿದ್ದು ಜೊತೆ ಉತ್ತಮ ನಿರೂಪಕರಾಗಿದ್ದರು ಕೂಡಾ. ತನ್ನ ಫಿಟ್ನೆಸ್( Fitness) ಬಗ್ಗೆ ಬಹಳ ಕಾಳಜಿ ವಹಿಸುತ್ತಿದ್ದ ನಟಿ ಆಗಾಗ್ಗೆ ತಮ್ಮ ವ್ಯಾಯಾಮದ ವೀಡಿಯೋಗಳನ್ನು ಸಾಮಾಜಿಕ ಮಾಧ್ಯಮ( Social Media) ದಲ್ಲಿ ಹಂಚಿಕೊಳ್ಳುತ್ತಿದ್ದರು. ಲಾಕ್‌ಡೌನ್ ಸಮಯದಲ್ಲಿ ಸುಬಿ ಸುರೇಶ್ ಅವರ ವರ್ಕೌಟ್( Workout) ವೀಡಿಯೊಗಳು ಬಹಳ ವೈರಲ್‌ ಆಗಿದ್ದವು ಎಂದೇ ಹೇಳಬಹುದು.

‘ಸಿನಿಮಾಲಾ’(Cinimala) ಹಾಸ್ಯ ಕಾರ್ಯಕ್ರಮದ ಮೂಲಕ ಸುಬಿ ಸುರೇಶ್ ಮನೆಮಾತಾಗಿದ್ದರು. ಅವರು ಕೊನೆಯದಾಗಿ ಕುಟ್ಟಿ ಪಟ್ಟಾಳಂ (Kuttipattalam) ಎಂಬ ಮಕ್ಕಳ ಪ್ರದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ವರದಿಗಳ ಪ್ರಕಾರ, ಸುಬಿ ಸುರೇಶ್ ಮದುವೆಯಾಗಿರಲಿಲ್ಲ. ಅವರು ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದ ಕುರಿತು ಯಾರಲ್ಲೂ ಹೇಳುತ್ತಿರಲಿಲ್ಲ. ಅವರ ತಂದೆ ಅಂಗಡಿಯೊಂದನ್ನು ನಡೆಸುತ್ತಿದ್ದು, ತಾಯಿ ಗೃಹಿಣಿ.