Home Breaking Entertainment News Kannada ಕಾಂತಾರ ಸಿನಿಮಾವನ್ನು ಮತ್ತೊಮ್ಮೆ ಹೊಗಳಿದ ಕಿಚ್ಚ ಸುದೀಪ್‌ !

ಕಾಂತಾರ ಸಿನಿಮಾವನ್ನು ಮತ್ತೊಮ್ಮೆ ಹೊಗಳಿದ ಕಿಚ್ಚ ಸುದೀಪ್‌ !

Hindu neighbor gifts plot of land

Hindu neighbour gifts land to Muslim journalist

ಕನ್ನಡದ ಖ್ಯಾತ ನಟ ಕಿಚ್ಚ ಸುದೀಪ್ ಅವರು ಕಾಂತಾರ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ , ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಮತ್ತು ಇಡೀ ಚಿತ್ರತಂಡವನ್ನು ಹೊಗಳಲು ಮುಂದೆ ಬಂದಿದ್ದಾರೆ.

ಕಾಂತಾರ ಸಿನಿಮಾ ಮೆಚ್ಚಿಕೊಳ್ಳಲು ಕಾರಣದ ಬಗ್ಗೆ ಮಾತನಾಡಿದ ಸುದೀಪ್ ಕಾಂತಾರ ನಮ್ಮ ನಾಡಿನ ಕಥೆಯಾದರೂ ಬೇರೆ ಭಾಷೆಯ ಜನರಿಗೆ ಹೊಸತು, ಸಾಮಾನ್ಯ ಕಥೆಗಳನ್ನು ನೋಡಿರುವ ಸಿನಿ ರಸಿಕರಿಗೆ ಆ ಚಿತ್ರ ಹೊಸ ಅನುಭವವನ್ನು ನೀಡಿತು, ಚಿತ್ರ ನಿರ್ಮಿಸಿದವರು ನಮ್ಮ ಮಣ್ಣಿನ ಕಥೆಯನ್ನೇ ಚಿತ್ರ ಮಾಡಿದರು, ಅದು ಬೇರೆ ರಾಜ್ಯದ ಸಿನಿ ರಸಿಕರಿಗೆ ಹೊಸತು, ಹಾಗಾಗಿ ಗೆಲುವು ಕಂಡಿತು, ಪ್ಯಾನ್ ಇಂಡಿಯಾ ಚಿತ್ರಗಳು ಗೆಲ್ಲುವುದೇ ಈ ರೀತಿ ಎಂದು ತಿಳಿಸಿದರು.

ಇನ್ನು ಇಂಗ್ಲಿಷ್ ಭಾಷೆಗೆ ಡಬ್ ಆದ ಚೈನೀಸ್ ಭಾಷೆಗಳು ದೇಶದೆಲ್ಲೆಡೆ ಗೆದ್ದವು, ಪ್ರೇಕ್ಷಕನಿಗೆ ಹೊಸತನ್ನು ನೋಡುವ ಬಯಕೆ ಇರುತ್ತದೆ, ಹಾಗಾಗಿಯೇ ಹೊಸತನ ಇರುವ ಚೈನೀಸ್ ಕೊರಿಯನ್ ಚಿತ್ರಗಳನ್ನು ಭಾರತದ ಸಿನಿ ರಸಿಕರೂ ಸಹ ಮೆಚ್ಚಿಕೊಂಡರು ಎಂದು ಸುದೀಪ್ ಹೇಳಿದ್ದಾರೆ.

ಅದಲ್ಲದೆ ಆಸ್ಕರ್ ಕುರಿತು ಭಾರತೀಯರು ಹೆಚ್ಚು ತಲೆ ಕೆಡಿಸಿಕೊಳ್ಳಬಾರದು, ಅದೊಂದು ಪಾಶ್ಚಿಮಾತ್ಯದ ಪ್ರಶಸ್ತಿ, ನಮ್ಮ ಸಿನಿಮಾಗಳಿಗೆ ನಮ್ಮ ಜನ ತೋರಿಸುವ ಮೆಚ್ಚುಗೆಯೇ ದೊಡ್ಡಮಟ್ಟದ ಪ್ರಶಸ್ತಿ ಎನ್ನುತ್ತಾರೆ. ಕೆಲವರು ಆಸ್ಕರ್‌ಗೇಕೆ ಅಷ್ಟು ಮನ್ನಣೆ ಎಂದರೆ ಅದು ಅವರ ಅಭಿಪ್ರಾಯ, ಅದನ್ನು ನಾವು ಗೌರವಿಸಬೇಕು, ಕೆಲವರು ಆಸ್ಕರ್ ಪ್ರಶಸ್ತಿಯೇ ದೊಡ್ಡದು ಎಂದರೆ ಅದನ್ನೂ ಸಹ ಗೌರವಿಸಬೇಕು ಎಂದು ಸುದೀಪ್ ತಿಳಿಸಿದರು.