Home Entertainment Sudeep-KCC : ಸುದೀಪ್‌ ಮುಂದೆ ನಟ ದರ್ಶನ್‌ ಅವರ ತಮ್ಮ ದಿನಕರ್‌ ತೂಗುದೀಪ ಏನು ಹೇಳಿದ್ರು...

Sudeep-KCC : ಸುದೀಪ್‌ ಮುಂದೆ ನಟ ದರ್ಶನ್‌ ಅವರ ತಮ್ಮ ದಿನಕರ್‌ ತೂಗುದೀಪ ಏನು ಹೇಳಿದ್ರು ?

Hindu neighbor gifts plot of land

Hindu neighbour gifts land to Muslim journalist

ಸ್ಯಾಂಡಲ್​ವುಡ್ (Sandalwood) ಮಂದಿ ಸಿನಿಮಾ ಶೂಟಿಂಗ್‌ ಎಂದು ಬಿಜಿಯಾಗಿರುವ ಮಧ್ಯದಲ್ಲಿ ಇದೀಗ ಬಿಡುವು ಮಾಡಿಕೊಂಡು ಬ್ಯಾಟ್‌ ಬಾಲ್‌ ಹಿಡಿಯೋಕೆ ರೆಡಿಯಾಗಿದ್ದಾರೆ. ಕೆಸಿಸಿ 3ನೇ ಸೀಸನ್‌ ಆರಂಭದ ತಯಾರಿ ನಡೆಯುತ್ತಿದೆ. ಎರಡೂ ಸೀಸನ್​ ಯಶಸ್ವಿಯಾದ ಬಳಿಕ ಇದೀಗ ಮೂರನೇ ಸೀಸನ್​ಗೂ ಶೀಘ್ರವೇ ಚಾಲನೆ ಸಿಗಲಿದೆ. ಫೆಬ್ರವರಿ ತಿಂಗಳಲ್ಲಿ (February Month) ನಡೆಯುವ ಮ್ಯಾಚ್​ಗೆ (Match) ಭರ್ಜರಿ ತಯಾರಿ ನಡೆಸಲಾಗಿದೆ. ಕೆಸಿಸಿ 3ನೇ ಸೀಸನ್ ಕುರಿತು ನಟ ಕಿಚ್ಚ ಸುದೀಪ್ (Actor Sudeep)​ ಮಾಹಿತಿ ನೀಡಿದ್ದಾರೆ.

2018 ಸೀಸನ್‌ 1 ಸೀಸನ್‌ 2 ಆಯಿತು. ಅನಂತರ ಕೋವಿಡ್‌ ಬಂತು. ಹಾಗಾಗಿ ಈಗ ಕೆಸಿಸಿ-3 ಲೀಗ್‌ ನಡೆಯಲಿದೆ. ದೊಡ್ಡಮಟ್ಟದಲ್ಲಿ ಇದರ ತಯಾರಿ ನಡೆಯಲಿದೆ. ಕರ್ನಾಟಕ ಚಲನಚಿತ್ರ ಕಪ್‌ ಟೂರ್ನಿಯಲ್ಲಿ ನಟ ಶಿವರಾಜ್‌ ಕುಮಾರ್‌, ಉಪೇಂದ್ರ, ಗಣೇಶ್‌, ಧನಂಜಯ್‌ ಆಡಲಿದ್ದಾರೆ. 6 ತಂಡಗಳು ಈ ಬಾರಿ ಕೂಡಾ ಇರಲಿದೆ. ಗಂಗಾ ವಾರಿಯರ್ಸ್‌, ಹೊಯ್ಸಳ ಈಗಲ್ಸ್‌, ಕದಂಬ ಲಯನ್ಸ್‌, ರಾಷ್ಟ್ರಕೂಟ ಪ್ಯಾಂಥರ್ಸ್‌, ವಿಜಯನಗರ ಪೇಟ್ರಿಯಾಟ್ಸ್‌, ಒಡೆಯರ್‌ ಚಾರ್ಜರ್ಸ್‌ ತಂಡಗಳು ಭಾಗವಹಿಸಲಿದೆ. ಈ ತಂಡಗಳ ನಾಯಕರುಗಳ ಬಗ್ಗೆ ಸದ್ಯದಲ್ಲೇ ಹೇಳಲಿದ್ದೇವೆ ಎಂದು ಸುದೀಪ್‌ ಮಾಹಿತಿ ನೀಡಿದರು.

ಕೆಸಿಸಿಯ ಎರಡು ಸೀಸನ್‌ನಲ್ಲಿ ಅನೇಕ ಮಂದಿ ಭಾಗಿಯಾಗಿದ್ರೂ, ಕೆಲವು ಪಾಲ್ಗೊಂಡಿರಲಿಲ್ಲ. ಸುದೀಪ್‌ ಕೆಲವರಿಗೆ ಆಹ್ವಾನ ನೀಡಿಲ್ಲ ಎಂಬ ಆರೋಪ ಬಂದಿತ್ತು. ಇದಕ್ಕೆಲ್ಲ ಸುದೀಪ್‌ ಕ್ಲಾರಿಫಿಕೇಶನ್‌ ಕೊಟ್ಟಿದ್ದಾರೆ. ನಾವು ಎಲ್ಲರನ್ನೂ ಕರೆದಿದ್ದೇವೆ. ಅವರು ಬರಲಿಲ್ಲ ಎಂದರೆ ಅದು ಅವರ ವೈಯಕ್ತಿಕ ನಿರ್ಧಾರ ಎಂದು ಸ್ಪಷ್ಟನೆ ನೀಡಿದರು. ಚಿತ್ರರಂಗ ನನ್ನ ಸ್ವತ್ತಲ್ಲ. ನಾವು ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ. ಅವರವರ ಶೆಡ್ಯೂಲ್‌ ನೋಡಿಕೊಂಡು ಬರುತ್ತಾರೆ. ಕೆಲವರು ಆಡೋಕೆ ಇಷ್ಟ ಇರಲ್ಲ, ಅಂಥವರು ಬರಲ್ಲ. ಹಾಗಾಗಿ ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಎಂದು ಕೇಳಬೇಡಿ ಎಂದ ಹೇಳಿದರು.

ಈ ಸಂದರ್ಭದಲ್ಲಿ ನಟ ದರ್ಶನ್‌ ಅವರ ತಮ್ಮ ದಿನಕರ್‌ ತೂಗುದೀಪ್‌ ಅವರು ಹಾಜರಿದ್ದು, ಅವರು ಚಲನಚಿತ್ರ ಕಪ್‌ನ ಬಗ್ಗೆ ತಮ್ಮ ಅನುಭವ ಈ ರೀತಿ ಹೇಳಿದರು. “ಪಸ್ಟ್‌ ಸೀಸನ್‌ನಲ್ಲಿ ಬರೀ ಪ್ಲೇಯರ್‌ ಆಗಿ ಕೆಸಿಸಿ ಆಡಿದ್ದೆ. ಮೂರನೇ ಸೀಸನಿನಲ್ಲಿ ಮೆಂಟರ್‌ ಪ್ಲಸ್‌ ಪ್ಲೇಯರ್‌ ಆಗಿ ಆಟ ಆಡ್ತಿದ್ದೀನಿ. ಸಿನಿಮಾ, ಕ್ರಿಕೆಟ್‌ ನನಗೆ ಲೈಪ್‌ನಲ್ಲಿ ಇವೆರಡೂ ಇಷ್ಟ. ಸಿನಿಮಾ ನಿರ್ಮಾಪಕರು ಮಾಡ್ತಾರೆ, ಕ್ರಿಕೆಟ್‌ನಲ್ಲಿ ಖುಷಿ ಕೊಡೋಕೆ ಸುದೀಪ್‌ ಸರ್‌ ಇದ್ದಾರೆ. ಎಂಜಾಯ್‌ ಮಾಡ್ತೀವಿ ಎಂದು ದಿನಕರ್‌ ತೂಗುದೀಪ ಹೇಳಿದರು.