Home Entertainment Viral video : ಗೆಳತಿಗೆ ಪ್ರಪೋಸ್ ಮಾಡಲು ಈತ ಮಾಡಿದ್ದೇನು ಗೊತ್ತಾ ? ಈತನ ಪ್ರಪೋಸಲ್...

Viral video : ಗೆಳತಿಗೆ ಪ್ರಪೋಸ್ ಮಾಡಲು ಈತ ಮಾಡಿದ್ದೇನು ಗೊತ್ತಾ ? ಈತನ ಪ್ರಪೋಸಲ್ ಗೆ ನೀವು ಫಿದಾ ಆಗೋದು ಗ್ಯಾರಂಟಿ!

Hindu neighbor gifts plot of land

Hindu neighbour gifts land to Muslim journalist

ಪ್ರತಿಯೊಬ್ಬ ಪ್ರಿಯಕರನು ತನ್ನ ಪ್ರೇಯಸಿಯನ್ನು ಖುಷಿ ಪಡಿಸಬೇಕು ಎಂದು ಬಯಸುತ್ತಾನೆ. ಅದಕ್ಕಾಗಿ ವಿಭಿನ್ನ ರೀತಿಯ ಸರ್ಪ್ರೈಸ್ ಗಿಫ್ಟ್ ಗಳನ್ನು ನೀಡುತ್ತಾರೆ. ಇನ್ನು ಕೆಲವು ಹುಡುಗರಂತು ಪ್ರೀತಿ ಮಾಡಿದ್ದೀನಿ ಪ್ರೊಪೋಸ್ ಹೇಗಪ್ಪಾ ಮಾಡೋದು ಅಂತ ತಲೆಗೆ ಹುಳ ಬಿಡ್ಕೊಂಡು ದಿನ ದೂಡೋರೂ ಇದಾರೆ. ಆದ್ರೆ ಇಲ್ಲೊಬ್ಬ ತನ್ನ ಪ್ರಿಯತಮೆಗೆ ಪ್ರಪೋಸ್ ಮಾಡಲು ಅದ್ಭುತವಾದ ಉಪಾಯವನ್ನೇ ಮಾಡಿದ್ದಾನೆ. ನೀವು ಈ ಪ್ರಪೋಸಲ್ ನೋಡಿದ್ರೆ ವ್ಹಾ!! ಅಂತಿರೋ ಅಥವಾ ಇನ್ನೇನಾದರೂ ಅಂತೀರೋ ನೊಡೋಣ.

ಇಂದಿನ ದಿನದಲ್ಲಿ ಪ್ರೀತಿ ಬರೀ ಪದವಾಗಿಬಿಟ್ಟಿದೆ. ಕಪಟ ಪ್ರೀತಿ ಹೆಚ್ಚಾಗಿದೆ. ಆದರೆ ಈ ಸಿರಿವಂತ ಪ್ರೇಮಿಯದ್ದು ಪರಿಶುದ್ಧ ಪ್ರೀತಿಯೇ ಇರಬೇಕು. ತನ್ನ ಪ್ರೇಯಸಿಗಾಗಿ ಏನು ಮಾಡಿದ್ದಾನೆ ಗೊತ್ತಾ? ಈತ ತನ್ನ ಪ್ರೇಯಸಿಯನ್ನು ಮೆಚ್ಚಿಸಲು ವಿಶ್ವದ ವಜ್ರದ ರಾಜಧಾನಿ ಆಂಟ್‌ವರ್ಪ್‌ಗೆ ಹೋಗಿ ವಜ್ರದ ಉಂಗುರ ಖರೀದಿಸಿ ತಂದಿದ್ದಾನೆ. ಸದ್ಯ ಇದರ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತನ್ನ ಗೆಳತಿಗೆ ಸರ್ಪ್ರೈಸ್ ಕೊಡಲು, ಆಕೆಯನ್ನು ಮೆಚ್ಚಿಸಲು, ಭಟ್ನಾಗರ್ ಎಂಬಾತ ತನ್ನ ಪ್ರೀತಿಯನ್ನು ವಿಶೇಷವಾದ ರೀತಿಯಲ್ಲಿ ವ್ಯಕ್ತಪಡಿಸಿದ್ದಾನೆ. ಹೇಗೆ ಅಂತೀರಾ? ಭಟ್ನಾಗರ್ ತನ್ನ ಪ್ರೇಯಸಿಗಾಗಿ ವಜ್ರದ ಉಂಗುರವನ್ನು ಖರೀದಿಸಲು ಆಂಟ್‌ವರ್ಪ್‌ಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಬೆಲ್ಜಿಯಂ ನಗರವನ್ನು ತಲುಪಿ, ಅಲ್ಲಿ ಅತ್ಯುತ್ತಮ, ಸುಂದರವಾದ ಉಂಗುರವನ್ನು ಆಯ್ಕೆ ಮಾಡಿ, ಪ್ರೇಯಸಿಗಾಗಿ ತಂದಿದ್ದಾರೆ. ಹಾಗೇ ಇದರ ವಿಡಿಯೋವನ್ನೂ ಶೇರ್ ಮಾಡಿಕೊಂಡಿದ್ದಾರೆ.

ಇದಿಷ್ಟೇ ಅಲ್ಲದೆ, ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಆಡಿಟೋರಿಯಂ ಅನ್ನು ಬುಕ್ ಮಾಡಿ, ಸ್ನೇಹಿತರು ಮತ್ತು ಕುಟುಂಬವನ್ನು ಅಲ್ಲಿಗೆ ಆಮಂತ್ರಿಸಿದ್ದಾರೆ. ನಂತರ ತನ್ನ ಪ್ರೇಯಸಿಯನ್ನು ಅಲ್ಲಿಗೆ ಬರಮಾಡಿಕೊಂಡು, ಸುಂದರ ವಾತಾವರಣ ಸೃಷ್ಟಿಸಿ, ನಂತರ ಮಂಡಿಯೂರಿ ಆಕೆಗೆ ಪ್ರೀತಿಯಿಂದ ಉಂಗುರವನ್ನು ತೊಡಿಸುವ ಮೂಲಕ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ನೋಡಿದ ನೆಟಿಜನ್ಸ್ ವ್ಹಾ!! ಎಂತಾ ಪ್ರೀತಿ ಎಂದು ಖುಷಿ ಪಟ್ಟರೆ, ಇನ್ನೂ ಕೆಲವರು ತಮ್ಮ ಪ್ರೀತಿ ಪಾತ್ರರನ್ನು ನೆನಪು ಮಾಡಿಕೊಂಡಿದ್ದಾರೆ. ಆದರೆ ಒಂದು ವರ್ಗದ ಜನರು ಶ್ರೀಮಂತರು ಹೇಗೆ ಬೇಕಾದರೂ ಪ್ರೇಮ ನಿವೇದನೆ ಮಾಡಿಕೊಳ್ಳುತ್ತೀರಾ, ವಜ್ರದ ಉಂಗುರ ನೋಡಿ ಯಾವ ಹುಡುಗಿಯಾದರೂ ಒಲಿಯುತ್ತಾಳೆ. ಆದರೆ ನಮ್ಮಂಥ ಬಡ ಪ್ರೇಮಿಗಳ ಗತಿಯೇನು ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

https://youtu.be/P6niyX4t4WA