Home Entertainment ಕನ್ನಡ ಚಿತ್ರರಂಗದ ರಸಿಕ ರಣಧೀರ, ಮನೋರಂಜನಾ ತಜ್ಞ ರವಿಚಂದ್ರನ್ ಪುತ್ರ ವೈವಾಹಿಕ ಜೀವನಕ್ಕೆ

ಕನ್ನಡ ಚಿತ್ರರಂಗದ ರಸಿಕ ರಣಧೀರ, ಮನೋರಂಜನಾ ತಜ್ಞ ರವಿಚಂದ್ರನ್ ಪುತ್ರ ವೈವಾಹಿಕ ಜೀವನಕ್ಕೆ

Hindu neighbor gifts plot of land

Hindu neighbour gifts land to Muslim journalist

ಕನ್ನಡ ಚಿತ್ರರಂಗದ ಚಿತ್ತ ಚೋರ ರಸಿಕ ಮತ್ತು ಪ್ರಣಯದ ಮಲ್ಲ, ರಣಧೀರ ರವಿಚಂದ್ರನ್ ಅವರ ಮಗನ ಮದುವೆ ಸಂಭ್ರಮ. ಕನ್ನಡದ ಏಕಾಂಗಿ, ಚಿತ್ರ ಲೋಕದ ಮನೋರಂಜನಾ ತಜ್ಞ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಇಂದು ತಮ್ಮ ಏಕಾಂಗಿತನವನ್ನು ಬಿಟ್ಟು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಮನೋರಂಜನ್ ಅವರು ಸಂಗೀತಾ ದೀಪಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಆರತಕ್ಷತೆ ಕಾರ್ಯಕ್ರಮ ಕೂಡ ನಡೆದಿದ್ದು ಚಿತ್ರರಂಗದ ಕೆಲವೇ ಕೆಲವು ಗಣ್ಯರು ಆಗಮಿಸಿದ್ದರು. ಇಂದು ಎರಡು ಕುಟುಂಬದವರ ಮಧ್ಯೆ ಮಾಂಗಲ್ಯಧಾರಣೆ ನಡೆದಿದೆ. ಚಿತ್ರರಂಗದವರಿಗೋಸ್ಕರ ರವಿಚಂದ್ರನ್ ಆರತಕ್ಷತೆ ಕಾರ್ಯಕ್ರಮ ಕೂಡ ಇಟ್ಟುಕೊಂಡಿದ್ದಾರೆ.

ಇಂದು ನಟ ವಿ ರವಿಚಂದ್ರನ್ ಪುತ್ರ ಮನೋರಂಜನ್ ಅವರ ವಿವಾಹವು ಸಂಗೀತಾ ದೀಪಕ್ ಜೊತೆ ನಡೆದಿದೆ. ಎರಡು ಕುಟುಂಬಸ್ಥರು ಈ ಮದುವೆಗೆ ಸಾಕ್ಷಿಯಾಗಿದ್ದಾರೆ. ನಿನ್ನೆ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲಿ ಡಾ ಶಿವರಾಜ್‌ಕುಮಾರ್, ಅಕುಲ್ ಬಾಲಾಜಿ, ಹಂಸಲೇಖ ದಂಪತಿ, ರಾಘವೇಂದ್ರ ರಾಜ್‌ಕುಮಾರ್ ದಂಪತಿ ಭಾಗವಹಿಸಿದ್ದರು.
ಮನೆಯಲ್ಲಿ ಹುಡುಕಿದ ಹುಡುಗಿಯ ಜೊತೆ ಮನೋರಂಜನ್ ಮದುವೆಯಾಗಿದ್ದಾರೆ. ಈ ಮೊದಲೇ ರವಿಚಂದ್ರನ್ ಅವರು ಮಾತನಾಡಿದ್ದು ನನ್ನ ಮಗಳು ಅಂಜಲಿ ರೀತಿಯಲ್ಲಿ ಮಗನ ಮದುವೆ ಮಾಡೋದಿಲ್ಲ. ಸರಳವಾಗಿ ಮಾಡುತ್ತೇವೆ, ಹೆಣ್ಣಿನ ಕಡೆಯವರಿಗೆ ಆಡಂಬರ ಇಷ್ಟವಿಲ್ಲ ಎಂದು ಹೇಳಿದ್ದರು.

ಮದುವೆ ಬಗ್ಗೆ ಮಾತನಾಡಿದ್ದ ಮನೋರಂಜನ್ ಅವರು “ಇದು ಅರೆಂಜ್‌ ಮ್ಯಾರೇಜ್. ನಾನು ಮದುವೆ ಆಗಲಿರುವ ಹುಡುಗಿ ಸಂಗೀತಾ ನಮಗೆ ದೂರದ ಸಂಬಂಧಿ ಆಗಬೇಕು. ನನಗೆ ಈಗ 34 ವರ್ಷ. ನಮ್ಮ ಕುಟುಂಬದಲ್ಲಿ ಹುಡುಗ ಮತ್ತು ಹುಡುಗಿಯರ ಮದುವೆ 27ರ ಒಳಗೆಯೇ ನಡೆಯುತ್ತದೆ. ನಾನು ಮಾತ್ರ ಇಷ್ಟು ತಡವಾಗಿ ಮದುವೆ ಆಗುತ್ತಿದ್ದೇನೆ. ನಾವು ಒಬ್ಬರನ್ನೊಬ್ಬರು ಅರಿತುಕೊಂಡೆವು ಮತ್ತು ವಿಶೇಷವಾಗಿ ನಾನು ನಟನಾಗಿರುವುದರಿಂದ, ಅವರಿಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಸಮಯ ನೀಡಬೇಕು. ಹಾಗಾಗಿ ಈ ನಿರ್ಧಾರವನ್ನು ಒಮ್ಮೆಲೆ ತೆಗೆದುಕೊಳ್ಳಲಿಲ್ಲ” ಎಂದು ಹೇಳಿದ್ದರು.

ಮನೋರಂಜನ್‌ಗೆ ಮದುವೆ ಮಾಡಲು ತಾಯಿ ಸುಮತಿ ರವಿಚಂದ್ರನ್ ಅವರು ವಧುವಿನ ಹುಡುಕಾಟದಲ್ಲಿದ್ದರು. ಆಗ ಸಂಗೀತಾ ಅವರ ಪ್ರಪೋಸಲ್ ಬಂದಿತ್ತು. ನಂತರ ಎರಡೂ ಕುಟುಂಬಗಳಿಗೆ ಒಪ್ಪಿಗೆಯಾಗಿ, ಈಗ ಮದುವೆಯಾಗಿದ್ದಾರೆ.

ಚಿತ್ರರಂಗದವರು, ಆತ್ಮೀಯರಿಗಾಗಿ ಆಗಸ್ಟ್ 22ರಂದು ರವಿಚಂದ್ರನ್‌ ಅವರು ಕೂಡ ಮಗನ ಮದುವೆಯ ಆರತಕ್ಷತೆಯನ್ನು ಆಯೋಜಿಸಿದ್ದಾರೆ. ಆ ಆರತಕ್ಷತೆಗೆ ದೊಡ್ಡ ಮಟ್ಟದಲ್ಲಿ ಜನ ಹರಿದು ಬರುವ ನಿರೀಕ್ಷೆಯಿದೆ.

2019ರಲ್ಲಿ ಮಗಳು ಗೀತಾಂಜಲಿ ಮದುವೆಯನ್ನು ‘ಕ್ರೇಜಿ ಸ್ಟಾರ್’ ರವಿಚಂದ್ರನ್‌ ಅದ್ದೂರಿಯಾಗಿ ಮಾಡಿದ್ದರು. ಆ ಮದುವೆಗೆ ಅವರೇ ಮುಂದೆ ನಿಂತು ಡೆಕೋರೇಶನ್ ಕೂಡ ವಿಭಿನ್ನವಾಗಿ ಮಾಡಿಸಿದ್ದರು. ಆ ಮದುವೆಗೆ ‘ಸೂಪರ್ ಸ್ಟಾರ್’ ರಜನಿಕಾಂತ್, ಚಿರಂಜೀವಿ ಸೇರಿದಂತೆ ಅನೇಕ ದಕ್ಷಿಣ ಭಾರತದ ಅನೇಕ ತಾರೆಯರು ಆಗಮಿಸಿ, ವಧು-ವರರಿಗೆ ಆಶೀರ್ವದಿಸಿದ್ದರು. ಒಟ್ಟಿನಲ್ಲಿ ರವಿಚಂದ್ರನ್ ಈಗ ಹಿರಿ ಮಗನ ಮದುವೆಯ ಖುಷಿಯಲ್ಲಿದ್ದಾರೆ.