Home Entertainment Movies: ಈ ದಿನ ಮಲ್ಟಿಪ್ಲೆಕ್ಸ್‌ನಲ್ಲಿ ಕೇವಲ 99 ರೂ.ಗೆ ಸಿನಿಮಾ ನೋಡಿ! ಭರ್ಜರಿ ಆಫರ್‌, ಯಾವುದೇ...

Movies: ಈ ದಿನ ಮಲ್ಟಿಪ್ಲೆಕ್ಸ್‌ನಲ್ಲಿ ಕೇವಲ 99 ರೂ.ಗೆ ಸಿನಿಮಾ ನೋಡಿ! ಭರ್ಜರಿ ಆಫರ್‌, ಯಾವುದೇ ಸಿನಿಮಾ ನೋಡಿ ಕೇವಲ 99ರೂ.ಗೆ!!!

Hindu neighbor gifts plot of land

Hindu neighbour gifts land to Muslim journalist

ಯಾರಿಗೆಲ್ಲ ಮಲ್ಟಿಪ್ಲೆಕ್ಸ್‌ನಲ್ಲಿ ಕಡಿಮೆ ದರದಲ್ಲಿ ಸಿನಿಮಾ ನೋಡಲು ಇಷ್ಟವಿದೆಯೋ ಇಲ್ಲಿದೆ ನಿಮಗೊಂದು ಸಿಹಿ ಸುದ್ದಿ. ನಿಮಗೆಲ್ಲರಿಗೂ ಗೊತ್ತೇ ಇದೆ, ಕಳೆದ ಬಾರಿ 75 ರೂಪಾಯಿಗೆ ಸಿನಿಮಾ ಟಿಕೆಟ್‌ ಮಾರಾಟ ಮಾಡಿ ʼರಾಷ್ಟ್ರೀಯ ಸಿನಿಮಾ ದಿನʼ ವನ್ನು ಆಚರಿಸಿದ ಮಲ್ಟಿಫ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಇದೀಗ ಮತ್ತೆ ಅದೇ ರೀತಿಯ ಕಾನ್ಸೆಪ್ಟ್‌ ಒಂದನ್ನು ಮುಂದುವರಿಸಲು ನಿರ್ಧಾರ ಮಾಡಿದೆ.

ಹಾಗಾಗಿ, ಅಕ್ಟೋಬರ್‌ 13, 2023 ರಂದು ಆಚರಿಸಲಾಗುವ ರಾಷ್ಟ್ರೀಯ ಸಿನಿಮಾ ದಿನದಂದು ಕೇವಲ 99 ರೂಪಾಯಿಗೆ ಟಿಕೆಟ್‌ ಪಡೆದು ಸಿನಿಮಾ ವೀಕ್ಷಣೆ ಮಾಡಬಹುದು ಎಂದು ಮಲ್ಟಿಪ್ಲೆಕ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಗುರುವಾರ (ಸೆ.21) ಅಂದರೆ ಇಂದು ಟ್ವೀಟ್‌ ಮಾಡಿ ಭರ್ಜರಿ ಸಿಹಿ ಸುದ್ದಿಯೊಂದನ್ನು ಸಿನಿಪ್ರಿಯರಿಗೆ ನೀಡಿದೆ.

ಅಕ್ಟೋಬರ್‌ 13ರಂದು ತಮಿಳು, ತೆಲುಗು, ಹಿಂದಿ ಸೇರಿದಂತೆ ಯಾವುದೇ ಭಾಷೆಯ ಪ್ರಮುಖ ಸಿನಿಮಾ ರಿಲೀಸ್‌ ಆಗುತ್ತಿಲ್ಲ. ಅ.13ರ ಹಿಂದಿನ ವಾರ ಕೆಲವ ವಾರಗಳಲ್ಲಿ ದೊಡ್ಡ ಸಿನಿಮಾ ಬಿಡುಗಡೆ ಆಗಲಿದೆ. ಇದರಲ್ಲಿ ಮುಖ್ಯವಾಗಿ ʼದಿ ವ್ಯಾಕ್ಸಿನ್‌ ವಾರ್‌, ಫುಕ್ರೆ, ಮಿಷನ್‌ ರಾಣಿಗಂಜ್‌, 800 , ರಥಂ ಕೂಡಾ ರಿಲೀಸ್‌ ಆಗಲಿದೆ.

65ಲಕ್ಷ ಟಿಕೆಟ್‌ಗಳು ಕಳೆದ ವರ್ಷ ಈ ರಾಷ್ಟ್ರೀಯ ಸಿನಿಮಾ ದಿನದಂದು ಮಾರಾಟವಾಗಿತ್ತು. ಹಲವು ಥಿಯೇಟರ್‌ಗಳು ಫುಲ್‌ ಆಗಿರುವ ವರದಿ ಕೂಡಾ ಆಗಿತ್ತು. ಈ ವರ್ಷ ಭಾರತದಾದ್ಯಂತ ಸಿನಿಮಾ ಚೈನ್ಸ್‌ ಮತ್ತು ಸಿಂಗಲ್‌ ಸ್ಕ್ರೀನ್‌ಗಳಲ್ಲಿ ಟಿಕೆಟ್‌ ಬೆಲೆ 99 ರೂಪಾಯಿ ಇರಲಿದೆ. ಅಂದ ಹಾಗೆ ಸಿನಿ ಪ್ರಿಯರೇ ಭರ್ಜರಿ 4000ಕ್ಕೂ ಹೆಚ್ಚಿನ ಸಿನಿಮಾ ಸ್ಕ್ರೀನ್‌ಗಳಲ್ಲಿ ನೀವು ಸಿನಿಮಾ ಕಾಣಬಹುದು. ಅದು ಕೂಡಾ ಕೇವಲ 99 ರೂಪಾಯಿನಲ್ಲಿ.

ಮಿರಾಜ್‌, ಪಿವಿಆರ್‌ ಐನಾಕ್ಸ್‌, ಸಿನಿಪೊಲಿಸ್‌, ಸಿಟಿಫ್ರೈಡ್‌, ಏಷ್ಯನ್‌, ಮುಕ್ತ ಅಝ್‌, ವೇವ್‌, ಎಂ2ಕೆ, ಡಿಲೈಟ್‌ ಸೇರಿ ಅನೇಕ ಮಲ್ಪಿಫ್ಲೆಕ್ಸ್‌ನಲ್ಲಿ ಸಿನಿಮಾ ನೋಡುವ ಭಾಗ್ಯ ಅತೀ ಕಡಿಮೆ ದರದಲ್ಲಿ ಕೇವಲ 99 ರೂಪಾಯಿಗೆ ಅ.13ರಂದು ಲಭ್ಯವಿದೆ. ಇಷ್ಟು ಮಾತ್ರವಲ್ಲದೇ ಆಯಾ ಮಲ್ಟಿಫ್ಲೆಕ್ಸ್‌ ಹೆಚ್ಚುವರಿ ಆಫರ್‌ ನೀಡಬಹುದು, ಅದು ಅವರು ತಮ್ಮ ತಮ್ಮ ಸೋಶಿಯಲ್‌ ಮೀಡಿಯಾದಲ್ಲಿ ಹೇಳುತ್ತಾರೆ ಎಂಬ ಮಾಹಿತಿಯನ್ನು ಕೂಡಾ ಹೇಳಿದೆ.