Home Entertainment ಕುಡಿದ ಅಮಲಿನಲ್ಲಿ ಹೆಬ್ಬಾವನ್ನೇ ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿ ; ಮುಂದೆ ಆಗಿದ್ದು..?

ಕುಡಿದ ಅಮಲಿನಲ್ಲಿ ಹೆಬ್ಬಾವನ್ನೇ ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿ ; ಮುಂದೆ ಆಗಿದ್ದು..?

Hindu neighbor gifts plot of land

Hindu neighbour gifts land to Muslim journalist

ಹೆಂಡ ಹೊಟ್ಟೆಯೊಳಗೆ ಸೇರಿದರೆ ಕೇಳೋದೇ ಬೇಡ, ಆತ ಅವನಾಗಿಯೇ ಇದ್ದರೆ ಅದೇ ಪುಣ್ಯ ಅನ್ನಬಹುದು. ಯಾಕಂದ್ರೆ, ಯಾರೇ ಆಗಲಿ ಒಂದು ಲಿಮಿಟ್ ಗಿಂತ ಹೆಚ್ಚಾಗಿ ಮದ್ಯ ಸೇವಿಸಿದ್ರೆ ಆತನಿಗೆ ಪ್ರಪಂಚದಲ್ಲಿ ಏನಾಗುತ್ತಿದೆ ಅನ್ನೋ ಅರಿವೇ ಇರೋದಿಲ್ಲ. ಅದರಂತೆ, ಇಲ್ಲೊಬ್ಬ ಕಂಠಪೂರ್ತಿ ಕುಡಿದು ಮಾಡಿದ್ದೂ ಎಂತಹ ಕೆಲಸ ಗೊತ್ತ..?

ಹೌದು. ಕುಡಿದ ಮತ್ತಿನಲ್ಲಿದ್ದ ಬಿರ್ಜಲಾಲ್ ರಾಮ್ ಭುಯಾನ್ ಎನ್ನುವ ವ್ಯಕ್ತಿಯೊಬ್ಬ ಹೆಬ್ಬಾವನ್ನೇ ಕುತ್ತಿಗೆಗೆ ಸುತ್ತಿಕೊಂಡಿದ್ದಾನೆ. ವಾಸ್ತವವಾಗಿ, ಆತ ಕುಡಿದ ಸ್ಥಿತಿಯಲ್ಲಿ ತನ್ನ ಕುತ್ತಿಗೆಗೆ ಸರೀಸೃಪವನ್ನು ಸುತ್ತಿಕೊಂಡಿದ್ದಾನೆ. ನಂತರ, ಹೆಂಡದ ನಶೆ ಇಳಿದ ಮೇಲೆ ಹೆಬ್ಬಾವಿನ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಇದನ್ನು ಕಂಡ ಬಿರ್ಜಲಾಲನ ಮಗ ಮತ್ತು ಅವನ ಸ್ನೇಹಿತರು ತಂದೆಯನ್ನು ರಕ್ಷಿಸಲು ಮತ್ತು ಹೆಬ್ಬಾವಿನ ಬಿಗಿಯಾದ ಹಿಡಿತದಿಂದ ಬಿಡಿಸಿ ಪ್ರಾಣ ಉಳಿಸಿದ್ದಾರೆ. ಬಿರ್ಜಲಾಲ್‌ಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಅವರಿಗೆ ಗ್ರಾಮದಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಜಾರ್ಖಂಡ್‌ನ ಗರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಪರಿಹಾರ ಪಂಚಾಯತ್‌ನ ಕಿಟಾಸೋಟಿ ಖುರ್ದ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಈಗ ಸೋಷಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ.