Home Entertainment ತಾನು ಸಾಕಿದ ನಾಯಿ ಮಾಡಿದ ಕೆಲಸದಿಂದ 1.50 ಲಕ್ಷ ರೂಪಾಯ ನಷ್ಟ ಅನುಭವಿಸಿದ ಮಾಲೀಕ!!

ತಾನು ಸಾಕಿದ ನಾಯಿ ಮಾಡಿದ ಕೆಲಸದಿಂದ 1.50 ಲಕ್ಷ ರೂಪಾಯ ನಷ್ಟ ಅನುಭವಿಸಿದ ಮಾಲೀಕ!!

Hindu neighbor gifts plot of land

Hindu neighbour gifts land to Muslim journalist

ಸಾಮಾನ್ಯವಾಗಿ ಸಾಕು ನಾಯಿಯನ್ನು ತಮ್ಮ ಮನೆಯನ್ನು ಕಾವಲು ಕಾಯಲು, ಅಥವಾ ತನ್ನ ಯಾವುದಾದರೂ ಕೆಲಸಕ್ಕೆ ಉಪಯೋಗವಾಗಲಿ ಎಂದು ಪ್ರೀತಿಯಿಂದ ಸಾಕುತ್ತಾರೆ. ಅದೆಷ್ಟು ನಾಯಿಗಳು ತಾನು ಇರುವ ಮನೆಯಿಂದ ಯಾವುದಾದರೂ ವಸ್ತುವನ್ನು ಯಾರಾದರೂ ಕಳ್ಳತನ ಮಾಡಿದರೆ ಅಂತವರನ್ನು ಕಚ್ಚಿ ಗಾಯಗೊಳಿಸಿದ ಘಟನೆಗಳು ನಡೆದಿದೆ. ಆದರೆ ಇಲ್ಲೊಂದು ಕಡೆ ತಾನೇ ಸಾಕಿದ ನಾಯಿ ತನ್ನ ಮಾಲಿಕನಿಗೆ ಎಂತಹ ನಷ್ಟವನ್ನು ತಂದಿದೆ ಗೊತ್ತಾ!?

ಹೌದು.ತಾನು ಸಾಕಿದ ನಾಯಿಯಿಂದ ಆಂಧ್ರಪ್ರದೇಶದ ವಾರಂಗಲ್​ ನಿವಾಸಿಯೊಬ್ಬ 1.50 ಲಕ್ಷ ರೂಪಾಯಿ ಹಣ ಕಳೆದುಕೊಂಡಿದ್ದಾರೆ.ಅಷ್ಟಕ್ಕೂ ಆ ನಾಯಿ ಮಾಡಿದ ಕೆಲಸ ಏನು ಗೊತ್ತಾ?. ಅಂತಿಂತ ಕೆಲಸ ಅಲ್ಲ,ಮನೆಯಲ್ಲಿದ್ದ ಹಣದ ಚೀಲವನ್ನೇ ಈ ಸಾಕು ನಾಯಿ ಕಚ್ಚಿಕೊಂಡು ಹೋಗಿ ಹೊರಗೆ ಬಿಸಾಡಿದೆ.

ವಾರಂಗಲ್ ಜಿಲ್ಲೆಯ ನಾಚಿನಪಲ್ಲಿ ಗ್ರಾಮದ ಕಾಸು ಚೇರಾಲು ಎಂಬುವವರು ಹಣ ಕಳೆದುಕೊಂಡವರಾಗಿದ್ದಾರೆ. ಇವರು ಸಂಪಾದಿಸಿದ ಹಣವನ್ನು ತಮ್ಮಲ್ಲಿಯೇ ಇಟ್ಟುಕೊಂಡಿದ್ದು,ಸ್ನಾನಕ್ಕೆ ಹೋದಾಗ ಹಣದ ಚೀಲವನ್ನು ಟೇಬಲ್​ ಮೇಲಿಟ್ಟಿದ್ದಾರೆ. ಈ ವೇಳೆ ಸಾಕು ನಾಯಿ ಅದನ್ನು ತೆಗೆದುಕೊಂಡು ಎಲ್ಲಿಯೋ ಬಿಸಾಡಿ ಬಂದಿದೆ. ಸ್ನಾನದ ಬಳಿಕ ಕಾಸು ಚೇರಾಲು ಅವರು ಹಣಕ್ಕಾಗಿ ತಡಕಾಡಿದಾಗ ಚೀಲ ಕಾಣೆಯಾಗಿದ್ದು ಗೊತ್ತಾಗಿದೆ.

ಈ ವೇಳೆ ನಾಯಿಯೂ ಮನೆಯಲ್ಲಿ ಇಲ್ಲದನ್ನು ಕಂಡು ಹೊರಬಂದು ಹುಡುಕಾಡಿದ್ದಾರೆ.ಈ ವೇಳೆ ನಾಯಿ ಮಾತ್ರ ಮನೆಗೆ ಬಂದಿದೆ. ಆದರೆ, ಹಣದ ಚೀಲವಿರಲಿಲ್ಲ.ಸುತ್ತಲೂ ಹುಡುಕಾಡಿದರೂ ಹಣದ ಚೀಲ ಸಿಗದ ಕಾರಣ ವಾಟ್ಸಪ್ ಗ್ರೂಪ್‌ನಲ್ಲಿ ಸಂದೇಶವನ್ನು ಹರಿಬಿಟ್ಟು, ಯಾರಿಗಾದರೂ ತನ್ನ ಹಣದ ಬ್ಯಾಗ್ ಸಿಕ್ಕರೆ ಅದನ್ನು ತನಗೆ ಹಿಂತಿರುಗಿಸುವಂತೆ ವಿನಂತಿಸಿಕೊಂಡಿದ್ದಾರೆ.ಅಂತೂ ಈ ನಾಯಿ ಮಾಡಿದ ಎಡವಟ್ಟಿನಿಂದ ಮಾಲಿಕ ತಲೆಕೆಡಿಸಿಕೊಳ್ಳುವಂತೆ ಆಗಿದೆ..