

Crow caller :ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳಿಗೆ ಅಜಗಜಾಂತರ ವ್ಯತ್ಯಾಸಗಳಿವೆ(different). ಆದರೆ ಕೆಲವೊಂದು ಬಾರಿ ಮನುಷ್ಯ ಮತ್ತು ಪ್ರಾಣಿ ಪಕ್ಷಿಗಳ ನಡುವೆ ಇರುವ ನಂಟು ನೋಡಿದಾಗ ಆಶ್ಚರ್ಯ ಎನಿಸುತ್ತದೆ. ಯಾಕೆಂದರೆ ಪ್ರಾಣಿ ಪಕ್ಷಿಗಳ ಜೊತೆ ಒಡನಾಟ ಬೆಳೆಸುವುದು ಒಂದು ಸವಾಲು ಅಥವಾ ಪ್ರತಿಭೆ ಅಂತಲೂ ಅನ್ನಬಹುದು. ಹಾಗೆಯೇ ಇಲ್ಲೊಬ್ಬ ಕಾಗೆಗಳನ್ನು ತನ್ನದೇ ಭಾಷೆಯಲ್ಲಿ ಕರೆಯುತ್ತಿದ್ದಾನೆ ಎಂದು ನೀವು ನಂಬುತ್ತೀರಾ!
ಹೌದು ಇಲ್ಲೊಬ್ಬ ಕಾಗೆಗಳನ್ನು ತನ್ನದೇ ಭಾಷೆಯಲ್ಲಿ (crow caller) ಕರೆಯುತ್ತಿದ್ದ ವೀಡಿಯೊವನ್ನು ಕಾವೇರಿ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ (twitter ) ಹಂಚಿಕೊಂಡಿದ್ದಾರೆ. ಒಂದು ನಿಮಿಷದ ಈ ವಿಡಿಯೋದಲ್ಲಿ ಅವನ ಸ್ನೇಹಿತರು ಅಕ್ಕು ಭಾಯ್ ಎಂದು ವ್ಯಕ್ತಿಯೊಬ್ಬನನ್ನು ಕರೆಯುವುದನ್ನು ನೋಡಬಹುದು. ಆರಂಭದಲ್ಲಿ ಸುತ್ತಮುತ್ತ ಯಾವ ಪಕ್ಷಿಗಳೂ ಇಲ್ಲದ್ದನ್ನು ಸ್ಪಷ್ಟವಾಗಿ ನೋಡಬಹುದು. ಸ್ವಲ್ಪ ಸಮಯದಲ್ಲಿಯೇ ಈ ವ್ಯಕ್ತಿ ಕಾಗೆಗಳನ್ನು ಕರೆಯಲು ಪ್ರಾರಂಭಿಸಿದ. ಕೆಲವೇ ಸೆಕೆಂಡುಗಳಲ್ಲಿ ಆಕಾಶದ ತುಂಬ ಕಾಗೆ ಬರುವುದನ್ನು ಇಲ್ಲಿ ನೋಡಬಹುದು .
ಅದಲ್ಲದೆ ವಿಡಿಯೋ ದಲ್ಲಿ ಆತನು ತನ್ನ ಗೆಳೆಯರ ಜೊತೆ ಆಟದ ಮೈದಾನದಲ್ಲಿ ಕಾಗೆ ಕರೆಯುವ ದೃಶ್ಯ ನೋಡಿ ಆತನನ್ನು ನಮ್ಮ ಅಕ್ಕು ಬಾಯ್ ‘ಕವ್ವಾ ಮಾಸ್ಟರ್’ ಎಂದು ಹೊಗಳುತ್ತಿರುವುದು ನೋಡಬಹುದು.
ಸದ್ಯ ಈ ವಿಡಿಯೋ(video) ನೋಡಿ ಜನರು ಇದು ಸಹ ಒಂದು ಉತ್ತಮ ಪ್ರತಿಭೆ ಯೇ ಸರಿ. ಎಲ್ಲರಿಗೂ ಈ ರೀತಿ ಪಕ್ಷಿಯನ್ನು ಕರೆದು ಒಟ್ಟು ಗೂಡಿಸಲು ಅಸಾಧ್ಯ ವೆಂದು ಈತನ ಬಗ್ಗೆ ಹಲವಾರು ಜನ ಹೊಗಳಿದ್ದಾರೆ.













