Home Entertainment BIGG BOSS Kannada OTT : ಸೋನುಗೆ ವಾರ್ನಿಂಗ್ ನೀಡಿದ ಕಿಚ್ಚ ಸುದೀಪ್

BIGG BOSS Kannada OTT : ಸೋನುಗೆ ವಾರ್ನಿಂಗ್ ನೀಡಿದ ಕಿಚ್ಚ ಸುದೀಪ್

Hindu neighbor gifts plot of land

Hindu neighbour gifts land to Muslim journalist

ಬಿಗ್ ಬಾಸ್ ಮನೆಯಲ್ಲಿ ಸೋನು ಶ್ರೀನಿವಾಸ್ ಗೌಡ ಅವರ ಹವಾ ಹೆಚ್ಚೇ ಇದೆ ಎಂದೇ ಹೇಳಬಹುದು. ವಾಸ್ತವವಾಗಿ ವೈರಲ್ ವೀಡಿಯೋ ಮತ್ತು ರೀಲ್ಸ್ ಮೂಲಕ ಫೇಮಸ್ ಆಗಿರುವ ಸೋನು ಅವರು ದೊಡ್ಮನೆಯಲ್ಲಿ ತಮ್ಮ ವೈರಲ್ ಮಾತುಗಳಿಂದ ಸುದ್ದಿ ಆಗುತ್ತಿದ್ದಾರೆ. ಈಗ ಅವರ ಒಂದು ವರ್ತನೆಯಿಂದ ‘ಬಿಗ್ ಬಾಸ್ ಕನ್ನಡ ಶೋನಲ್ಲಿ ಸ್ಪರ್ಧಿಸುತ್ತಿರುವ ಎಲ್ಲರಿಗೂ ಬೇಸರ ಆಗಿದೆ. ಅಷ್ಟೇ ಅಲ್ಲ, ಕಿಚ್ಚ ಸುದೀಪ್ ಅವರಿಗೂ ಸೋನು ಗೌಡ ವರ್ತನೆಗೆ ಕಿಡಿಕಾರಿದ್ದಾರೆ. ವಿಷಯ ಏನೆಂದರೆ ತಮಗೊಂದು ನ್ಯಾಯ, ಬೇರೆಯವರಿಗೆ ಇನ್ನೊಂದು ನ್ಯಾಯ ಎಂಬ ರೀತಿಯಲ್ಲಿ ಸೋನು ನಡೆದುಕೊಂಡಿದ್ದಾರೆ. ಇದಕ್ಕೆ ಕಿಚ್ಚ ಸುದೀಪ್ ಅವರು ಸರಿಯಾದ ತಿರುಗೇಟು ನೀಡಿದ್ದಾರೆ.

ಕನ್ನಡದ ಪ್ರೇಕ್ಷಕರಿಗೆ ‘ಬಿಗ್ ಬಾಸ್ ಒಟಿಟಿ’ ಹೊಸತು. ಇದರಲ್ಲಿ ಇರುವುದು ಆರು ವಾರಗಳ ಕಾಲಾವಕಾಶ ಮಾತ್ರ. ಅಷ್ಟರೊಳಗೆ ಸ್ಪರ್ಧಿಗಳು ತಮ್ಮತನವನ್ನು ಸಾಬೀತು ಮಾಡಿಕೊಳ್ಳಬೇಕು. ಹಾಗಂತ ಮನಸ್ಸಿಗೆ ಬಂದಂತೆ ವರ್ತಿಸಿದರೆ ಸುದೀಪ್ ಸಹಿಸುವುದಿಲ್ಲ. ಮೊದಲ ವಾರದ ಪಂಚಾಯಿತಿಯಲ್ಲಿ ಇಂಥ ಒಂದು ಘಟನೆ ನಡೆದಿದೆ.

ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ವಾರದ ಪಂಚಾಯಿತಿನಲ್ಲಿ ‘ಯೆಸ್ ಅಥವಾ ನೋ’ ಎಂಬ ರೌಂಡ್ ಗಮನ ಸೆಳೆಯುತ್ತಿದೆ. ಸ್ಪರ್ಧಿಗಳಿಗೆ ವಿವಿಧ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಅದಕ್ಕೆ ಹೌದು ಅಥವಾ ಇಲ್ಲ ಎಂದು ಅವರು ಉತ್ತರ ನೀಡಬೇಕು. ಒಂದು ವೇಳೆ ಸ್ಪರ್ಧಿಗಳ ಉತ್ತರಕ್ಕೆ ವಿವರಣೆ ಬೇಕಿದ್ದರೆ ಸುದೀಪ್ ಕೇಳುತ್ತಾರೆ. ಈ ವಾರದ ಎಪಿಸೋಡ್‌ನಲ್ಲೂ ಈ ಟಾಸ್ಕ್ ನಡೆದಿದೆ. ಈ ವೇಳೆ ಸೋನು ಗೌಡ ಸಿಡಿಮಿಡಿ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಒಬ್ಬರು ಇನ್ನೊಬ್ಬರ ಕಾಲೆಳೆಯುವುದು ಸಹಜ. ಆದರೆ ಅದನ್ನು ಸೋನು ಗೌಡ ಇದನ್ನೆಲ್ಲಾ ನೆಗೆಟಿವ್ ಆಗಿ ಸ್ವೀಕರಿಸಿ ಅವರ ಮೇಲೆ ರೇಗಾಡಿದ್ದಾರೆ. ಇಲ್ಲು ಕೂಡಾ ಅದೇ ನಡೆದಿರುವುದು. ತಮಗೆ ತಮಾಷೆ ಮಾಡಿದವರ ವಿರುದ್ಧ ಸೋನು ಗುಡುಗಿದ್ದಾರೆ. ಅದು ಕೂಡ ಸುದೀಪ್ ಎದುರಲ್ಲೇ. ಇದನ್ನು ಗಮನಿಸಿದ ಸುದೀಪ್ ಅವರು ಖಡಕ್ ವಾರ್ನಿಂಗ್ ನೀಡಿದ್ದಾರೆ.

‘ನೀವು ತಮಾಷೆ ಮಾಡಿದಾಗ ಬೇರೆಯವರು ನಗುತ್ತಾರೆ. ಆದರೆ ಬೇರೆಯವರು ನಿಮಗೆ ತಮಾಷೆ ಮಾಡಬಾರದು. ಇದು ಸರಿಯಲ್ಲ. ಈ ಹಿಂದೆ ನೀವು ಬೇರೆಯವರಿಗೆ ತಮಾಷೆ ಮಾಡಿದಾಗ ಅವರು ಕೂಡ ಹೀಗೆಯೇ ರೇಗಾಡಬಹುದಿತ್ತಲ್ಲ. ಇನ್ಮುಂದೆ ನೀವು ಬೇರೆಯವರಿಗೆ ಲೇವಡಿ ಮಾಡುವಂತಿಲ್ಲ. ನೀವು ಹೀಗೆ ಮಾಡಿದ್ರೆ ಈ ಶೋ ನಡೆಯಲ್ಲ. ಯೆಸ್ ಅಥವಾ ನೋ ರೌಂಡ್ ಇಲ್ಲಿಗೆ ಮುಗಿಯಿತು’ ಎಂದು ಸುದೀಪ್ ಗರಂ ಆಗಿ ಹೇಳಿದ್ದಾರೆ