Home Breaking Entertainment News Kannada ಬಿಗ್ ಬಾಸ್ ಸೀಸನ್ 9ರ ವಿನ್ನರ್ ಪಟ್ಟ ಗೆದ್ದ ರೂಪೇಶ್ ಶೆಟ್ಟಿ| ರನ್ನರಪ್ ಗೆ ಸಮಾಧಾನಗೊಂಡ...

ಬಿಗ್ ಬಾಸ್ ಸೀಸನ್ 9ರ ವಿನ್ನರ್ ಪಟ್ಟ ಗೆದ್ದ ರೂಪೇಶ್ ಶೆಟ್ಟಿ| ರನ್ನರಪ್ ಗೆ ಸಮಾಧಾನಗೊಂಡ ರಾಕೇಶ್ ಅಡಿಗ

Hindu neighbor gifts plot of land

Hindu neighbour gifts land to Muslim journalist

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಸೀಸನ್ 9’ರ ವಿನ್ನರ್ ಯಾರು ಎಂಬ ಪ್ರೇಕ್ಷಕರ ಕುತೂಹಲ ಈಗಾಗಲೇ ಕೊನೆಗೊಂಡಿದ್ದು, ಕೋಸ್ಟಲ್ ವುಡ್ ಸ್ಟಾರ್ ಆದಂತಹ ರೂಪೇಶ್ ಶೆಟ್ಟಿ ‘ಬಿಗ್ ಬಾಸ್ ಸೀಸನ್ 9’ ರ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಹಾಗೂ ರಾಕೇಶ್ ಅಡಿಗ ಅವರಿಗೆ ರನ್ನರ್ ಅಪ್ ಪಟ್ಟ ದೊರೆತಿದೆ.

ಕರ್ನಾಟಕದ ನೆಚ್ಚಿನ ಸ್ಪರ್ಧಿಗಳಾಗಿ, ಎಲ್ಲರ ಮನಗೆದ್ದು, ರೂಪೇಶ್ ಶೆಟ್ಟಿ ಮತ್ತು ರಾಕೇಶ್ ಅಡಿಗ ಬಿಗ್ ಬಾಸ್ ಸೀಸನ್ 9ರ ಗ್ರ್ಯಾಂಡ್ ಫಿನಾಲೆಗೆ ಪಾದಾರ್ಪಣೆ ಮಾಡಿದ್ದರು.
ನಿನ್ನೆ ನಡೆದಂತಹ ಫಿನಾಲೆಯಲ್ಲಿ ಕಿಚ್ಚ ಸುದೀಪ್ ಅವರು ಈ ಇಬ್ಬರು ಸ್ಪರ್ಧಿಗಳ ಕೈ ಹಿಡಿದು ವಿನ್ನರ್ ಯಾರಾಗಬಹುದು ಎಂದು ಟೆನ್ಷನ್ ಕೊಡುವುದರೊಂದಿಗೆ ರೂಪೇಶ್ ಶೆಟ್ಟಿಯ ಕೈಯನ್ನು ಎತ್ತಿ ಹಿಡಿದು ‘ಬಿಗ್ ಬಾಸ್ 9’ ರ ವಿನ್ನರ್ ಎಂದು ಘೋಷಿಸಿದ್ದಾರೆ.

ತುಳು ಸಿನಿಮಾಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರೂಪೇಶ್, ಕೆಲವು ವರ್ಷಗಳ ಹಿಂದೆ ತೆರೆಕಂಡ ‘ಗಿರಿಗಿಟ್’ ಚಿತ್ರದ ಮೂಲಕ ಸೂಪರ್ ಸಕ್ಸಸ್ ಕಂಡು ಸಿನಿಪ್ರೇಕ್ಷಕರ ಮನಗೆದ್ದಿದ್ದರು. ಇದಾದ ಬಳಿಕ ಬಿಗ್ ಬಾಸ್ ಒಟಿಟಿಗೆ ಎಂಟ್ರಿ ನೀಡಿದ್ದರು. ಅಲ್ಲಿಯೂ ತಮ್ಮ ಉತ್ತಮ ಪ್ರದರ್ಶನದ ಮೂಲಕ ಟಾಪ್ ಸ್ಪರ್ಧಿಯಾಗಿ ಹೊರಹೊಮ್ಮಿ, ಬಿಗ್ ಬಾಸ್ ಟಿವಿ ಶೋಗೆ ಪ್ರವೇಶ ಪಡೆದುಕೊಂಡರು. ಇಲ್ಲಿಯೂ ಕೂಡ ಎಲ್ಲಾ ಪ್ರೇಕ್ಷಕರ ಮನ ಗೆದ್ದು, ಎಲ್ಲರಿಗೂ ಉತ್ತಮ ಮನರಂಜನೆ ನೀಡಿ ಟಾಪ್ 5 ಲೀಸ್ಟ್ ಅಲ್ಲಿ ತಾವೂ ಒಬ್ಬರಾಗಿದ್ದರು. ಇನ್ನು ಫೈನಲ್​ ಲಿಸ್ಟ್‌ಗಳಲ್ಲಿದ್ದ ಟಾಪ್ 5 ಸ್ಪರ್ಧಿಗಳಾದ ರಾಕೇಶ್ ಅಡಿಗ, ದೀಪಿಕಾ ದಾಸ್, ರೂಪೇಶ್ ರಾಜಣ್ಣ ಇವರಿಗೆಲ್ಲಾ ಭಾರೀ ಪೈಪೋಟಿ ಕೊಟ್ಟು ರೂಪೇಶ್ ಶೆಟ್ಟಿ ಬಿಗ್‌ಬಾಸ್ ಸೀಸನ್ 9ರ ವಿನ್ನರ್ ಆಗಿದ್ದಾರೆ.

ಇನ್ನು ಬಿಗ್​ ಬಾಸ್​ ಮನೆಯಲ್ಲಿ ಕೂಲ್ ಆಗಿ ಆಟವಾಡಿಕೊಂಡು ಬಂದ ರಾಕೇಶ್​ ಅಡಿಗ ರನ್ನರ್ ಅಪ್ ಪಟ್ಟಕ್ಕೆ ಸಂತೋಷ ಗೊಂಡಿದ್ದಾರೆ. ನಟಿ ದೀಪಿಕಾ ದಾಸ್ ಅವರು ಸೆಕೆಂಡ್ ರನ್ನರಪ್ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ನಟ ರಾಕೇಶ್​ ಹಾಗೂ ರೂಪೇಶ್​ ಇಬ್ಬರು ಓಟಿಟಿಯಿಂದ ಬಿಗ್ ಬಾಸ್​ ಸೀಸನ್ 9ಗೆ ಪ್ರವೇಶ ಪಡೆದಿದ್ದು ಇಬ್ಬರ ನಡುವೆ ಟಫ್ ಕಾಂಪಿಟೇಷನ್ ಏರ್ಪಟ್ಟಿತ್ತು. ರಾಕೇಶ್​ ಕೂಡ ಅನೇಕ ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದಾರೆ.

ಈ ಬಾರಿ ‘ಬಿಗ್ ಬಾಸ್​​ ಸೀಸನ್ 9’ ರ ವಿನ್ನರ್ ಪಟ್ಟ ಗೆದ್ದಿರುವ ರೂಪೇಶ್ ಶೆಟ್ಟಿಗೆ 60 ಲಕ್ಷ ರೂಪಾಯಿಗಳೊಂದಿಗೆ ಟ್ರೋಫಿ ಕೂಡ ಲಭಿಸಿದೆ. ಒಟ್ಟಿನಲ್ಲಿ ರೂಪೇಶ್ ಶೆಟ್ಟಿ ವಿನ್ನರ್ ಆಗಿರುವುದು ಅವರ ಅಭಿಮಾನಿ ಬಳಗಕ್ಕೆ ಹಾಗೂ ತುಳುನಾಡಿನ ಜನತೆಗೆ ಅತೀವ ಸಂತೋಷವನ್ನುಂಟುಮಾಡಿದೆ.