Home Entertainment BBK 9 ; ‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’ ‘ಚಿಕ್ಕದಾಗಿ ಸೇರ್ಕೊಂಡು...

BBK 9 ; ‘ದೊಡ್ಡದಾಗಿ ಪ್ರೀತಿ ಮಾಡಿ ಚಿಕ್ಕ ಮಕ್ಕಳಿಗೆ ಜನ್ಮ ಕೊಡೋಣ’ ‘ಚಿಕ್ಕದಾಗಿ ಸೇರ್ಕೊಂಡು ದೊಡ್ಡದಾಗಿ ಲವ್ ಮಾಡೋಣ’

Hindu neighbor gifts plot of land

Hindu neighbour gifts land to Muslim journalist

‘ಕನ್ನಡ ಬಿಗ್ ಬಾಸ್ ಸೀಸನ್ 9’ (BBK 9) ಸಾಕಷ್ಟು ವಿಚಾರಗಳಿಂದ ಭಾರೀ ಗಮನ ಸೆಳೆಯುತ್ತಿದೆ. ಈ ರಿಯಾಲಿಟಿ ಶೋ ಗೆ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಹಳೆಯ ಆಟಗಾರರು ಕೂಡ ಇರುವುದರಿಂದ ಸ್ಪರ್ಧೆ ಬೇರೆನೇ ಥ್ರಿಲ್ ನೀಡುತ್ತಿದೆ.

ಈ ಆಟದಲ್ಲಿ ಉತ್ತಮ, ಹಾಗೂ ಆರೋಗ್ಯಕರ ಬೆಳವಣಿಗೆ ಮಧ್ಯೆ ಅಚ್ಚರಿಯ ಘಟನೆ ಒಂದು ನಡೆದಿದೆ. ಸೈಕ್ ನವಾಜ್ ಅವರು ಬೈಕ್ ರೇಸರ್ ಐಶ್ವರ್ಯಾ ಪಿಸ್ಸೆಗೆ ಪ್ರಪೋಸ್ ಮಾಡಿದ್ದಾರೆ. ಅದೂ ಎಲ್ಲರ ಎದುರೇ ಅನ್ನೋದು ವಿಶೇಷ.

ನವಾಜ್ ಅವರು ಬಿಗ್ ಬಾಸ್ ಮನೆಗೆ ಬಂದ ಸಂದರ್ಭದಲ್ಲೇ ಐಶ್ವರ್ಯಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ‘ನನಗೆ ಹಾಲಿವುಡ್ ಹೀರೋಯಿನ್‌ಗಳು ಎಂದರೆ ಇಷ್ಟ. ಐಶ್ವರ್ಯಾ ಅವರು ನೋಡೋಕೆ ಹಾಲಿವುಡ್ ಹೀರೋಯಿನ್ ತರಹವೇ ಇದ್ದಾರೆ. ಅವರನ್ನು ಕಂಡರೆ ಇಷ್ಟ’ ಈ ಹಿಂದೆ ನವಾಜ್ ಹೇಳಿದ್ದರು. ಈಗ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಪ್ರಪೋಸ್ ಮಾಡಿದ್ದಾರೆ.

‘ನೋಡಿ ಐಶ್ವರ್ಯಾ ಪಿಸ್ಸೆ ಅವರೇ, ನಿಮ್ಮನ್ನು ನೋಡಿದಾಗಲೇ ಫಿದಾ ಆದೆ. ನಿಮ್ಮ ರೀತಿ ಇಂಗ್ಲಿಷ್‌ನಲ್ಲಿ ಐ ಲವ್ ಯೂ ಅಂತ ಹೇಳೋಕೆ ಬರಲ್ಲ. ನಮ್ಮ ಮನೆ ತುಂಬಾ ಚಿಕ್ಕದು, ಆದರೆ ಮನಸ್ಸು ದೊಡ್ಡದು. ಚಿಕ್ಕದಾಗಿ ಸೇರಿಕೊಂಡು, ದೊಡ್ಡದಾಗಿ ಪ್ರೀತಿ ಮಾಡೋಣ. ದೊಡ್ಡದಾಗಿ ಪ್ರೀತಿ ಮಾಡಿ, ಚಿಕ್ಕದಾಗಿ ಖುಷಿಪಡೋಣ. ಚಿಕ್ಕ ಖುಷಿಯಲ್ಲಿ ಮಕ್ಕಳಿಗೆ ಜನ್ಮ ಕೊಡೋಣ. ಆ ಚಿಕ್ಕ ಮಕ್ಕಳನ್ನು ದೊಡ್ಡವರಾಗಿ ಬೆಳೆಸೋಣ. ದೊಡ್ಡವರಾಗಿ ಸಾಯುವಾಗ ಚಿಕ್ಕದಾಗಿ ನಗೋಣ. ನಮ್ಮ ಮಕ್ಕಳು ದೊಡ್ಡದಾಗಿ ಸಮಾಧಿ ಕಟ್ಟಿಸುತ್ತಾರೆ, ಅವರ ಮನದಲ್ಲಿ ಚಿಕ್ಕ ಜಾಗದಲ್ಲಿರೋಣ’ ಎಂದರು ನವಾಜ್.

ಇದಕ್ಕೆ ಪ್ರತಿಕ್ರಿಯಿಸಿದ ಐಶ್ವರ್ಯಾ, ‘ನಿನಗೆ ಒಳ್ಳೆ ಹುಡುಗಿ ಸಿಗ್ತಾಳೆ ಬಿಡು’ ಎಂದಿದ್ದಾರೆ. ‘ನೀವು ಸಿಗಲ್ವಾ’ ಎಂದು ಮರು ಪ್ರಶ್ನೆ ಹಾಕಿದರು ನವಾಜ್. ಇದನ್ನು ಕೇಳಿ ಮನೆ ಮಂದಿ ಎಲ್ಲರೂ ಜೋರಾಗಿ ನಕ್ಕಿದ್ದಾರೆ. ನಿನ್ನೆಯ ಎಪಿಸೋಡ್ ನಲ್ಲಿ ಈ ಘಟನೆ ಪ್ರಸಾರವಾಗಿದ್ದು, ಮನೆಮಂದಿ ನವಾಜ್ ಗೆ ತಮಾಷೆ ಮಾಡೋಕಂತೂ ಮರೆಯಲಿಲ್ಲ.