Home Entertainment Split AC : ಬೇಸಿಗೆ ಕಾಲ ಬರುವ ಮೊದಲೇ ಬಂತು ನೋಡಿ ಬೆಸ್ಟ್‌ ಚೀಪೆಸ್ಟ್‌ ಎಸಿ...

Split AC : ಬೇಸಿಗೆ ಕಾಲ ಬರುವ ಮೊದಲೇ ಬಂತು ನೋಡಿ ಬೆಸ್ಟ್‌ ಚೀಪೆಸ್ಟ್‌ ಎಸಿ !

Hindu neighbor gifts plot of land

Hindu neighbour gifts land to Muslim journalist

ಫೆಬ್ರವರಿ ತಿಂಗಳು ಮುಗಿಯುತ್ತಿದ್ದಂತೆ ಸೆಕೆಯ ಬೇಗೆ ಜನರನ್ನು ಹೈರಾಣಾಗಿ ಹೋಗುವಂತೆ ಮಾಡುತ್ತದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಧ್ಯಾಹ್ನದ ಉರಿಬಿಸಿಲಿನ ಬೇಗೆಯ ಬಗ್ಗೆ ವಿವರಿಸಬೇಕಾಗಿಲ್ಲ. ಹೀಗಾಗಿ, ಮಾರ್ಚ್ ಆರಂಭದಲ್ಲೇ ಜನರು ಮನೆಯಲ್ಲಿ ಫ್ಯಾನ್ ಹಾಕಿಕೊಳ್ಳಲಾರಂಭಿಸೋದು ಕಾಮನ್. ತಾಪಮಾನ ಹೆಚ್ಚಾದಂತೆ ಜನರು ಫ್ಯಾನ್, ಕೂಲರ್ ಮತ್ತು ಎಸಿಗಳನ್ನು ಚಲಾಯಿಸಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆದರೆ, ಬೇಸಿಗೆ ಕಾಲ ಶುರುವಾಗುವ ಮೊದಲೇ ಉತ್ತಮ ವೈಶಿಷ್ಟ್ಯತೆ ಹೊಂದಿರುವ ಹೊಸ ಕನ್ವರ್ಟಬಲ್ ಇನ್ವರ್ಟರ್ ಎಸಿ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದ್ದು, ಕೈಗೆ ಎಟಕುವ ದರದಲ್ಲಿ ಲಭ್ಯವಾಗುವ ಜೊತೆಗೆ ಕಡಿಮೆ ವಿದ್ಯುತ್ ಅನ್ನು ಬಳಕೆ ಮಾಡುವ ವಿಶೇಷತೆಯನ್ನು ಒಳಗೊಂಡಿದೆ.

MarQ ಕಂಪನಿಯು ಬೇಸಿಗೆ ಬಿಸಿ ಜನರಿಗೆ ತಟ್ಟುವ ಮುನ್ನವೇ ಸಿಹಿ ಸುದ್ದಿಯನ್ನು ನೀಡಿದೆ. 4-ಇನ್-1 ಕನ್ವರ್ಟಬಲ್ ಏರ್ ಕಂಡಿಷನರ್‌ಗಳ ಹೊಸ ಶ್ರೇಣಿಯನ್ನು ಬಿಡುಗಡೆ ಮಾಡುವ ಕುರಿತು ಕಂಪನಿ ಮಾಹಿತಿ ನೀಡಿದೆ. ಉತ್ತಮ ವೈಶಿಷ್ಟ್ಯಗಳೊಂದಿಗೆ ಲಭ್ಯವಾಗಲಿರುವ ಈ ಸ್ಪ್ಲಿಟ್ ಎಸಿ ಕಡಿಮೆ ವಿದ್ಯುತ್ ಬಳಕೆ ಮಾಡಲಿದ್ದು, ಕೆಲವೇ ನಿಮಿಷಗಳಲ್ಲಿ ಮನೆಯನ್ನು ತಂಪು ತಂಪು ಕೂಲ್ ಕೂಲ್ ಮಾಡಲಿದೆ ಎಂದು ಕಂಪನಿ ಹೇಳಿಕೊಂಡಿದೆ.

MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿ ಬೆಲೆ ಹೀಗಿವೆ :
MarQ ಕಂಪನಿಯು ಪ್ರಸ್ತುತ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯ ಆರು ಮಾದರಿಗಳನ್ನು ಬಿಡುಗಡೆ ಮಾಡಿದೆ.
1 ಟನ್ ಎಸಿ ಬೆಲೆ – 26,499 ರೂ.ಆಗಿದೆ.
0.8 ಟನ್ ಎಸಿ ಬೆಲೆ – 25,499 ರೂ. ಆಗಿದೆ.
2 ಟನ್ ಎಸಿ ಬೆಲೆ 37,999 ರೂ. ಆಗಿದೆ.
( 5 ಸ್ಟಾರ್ ರೇಟಿಂಗ್) ಹೊಂದಿರುವ 1.5 ಟನ್ ಎಸಿ ಬೆಲೆ 32,999 ರೂ. ಆಗಿದ್ದು,
1.5 ಟನ್ ಎಸಿ ಬೆಲೆ (4 ಸ್ಟಾರ್ ರೇಟಿಂಗ್) ಹೊಂದಿರುವ ಎಸಿ ಬೆಲೆ 30,999 ರೂ. ಆಗಿದೆ.
1.5 ಟನ್ (3 ಸ್ಟಾರ್ ರೇಟಿಂಗ್) ಹೊಂದಿರುವ ಎಸಿ ಬೆಲೆ 29,999 ರೂ ಆಗಿದೆ.

MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯ ಬೆಲೆ, ವೈಶಿಷ್ಟ್ಯಗಳ ಕುರಿತು ಗಮನ ಹರಿಸಿದರೆ:

ರೆಫ್ರಿಜರೆಂಟ್ (ಗ್ಯಾಸ್) ಹರಿವಿನ ಪ್ರಮಾಣವನ್ನು ನಿಯಂತ್ರಿಸುವ ಜೊತೆಗೆ ಕಡಿಮೆ ಶಕ್ತಿಯನ್ನು ಸೇವಿಸಲು ಸಂಕೋಚಕದ ವೇಗವನ್ನು ಸರಿಹೊಂದಿಸುತ್ತದೆ. ಮಾರ್ಕ್ಯೂ ಏರ್ ಕಂಡಿಷನರ್‌ಗಳು ವಿದ್ಯುತ್ ಏರಿಳಿತಗಳಿಂದ ರಕ್ಷಿಸುವ ಸಲುವಾಗಿ ಅಂತರ್ನಿರ್ಮಿತ ಸ್ಟೆಬಿಲೈಸರ್‌ಗಳನ್ನು ಮತ್ತು ಕೈಗಾರಿಕಾ ಹೊಗೆ, ಉಪ್ಪು, ಮರಳು ಮತ್ತು ಮಾಲಿನ್ಯಕಾರಕಗಳಿಂದ ರಕ್ಷಿಸುವ “ಬ್ಲೂ ಫಿನ್ ಕೋಟಿಂಗ್” ಅನ್ನು ಒಳಗೊಂಡಿದೆ. MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಗಳು “ಇನ್ವರ್ಟರ್ ಟೆಕ್ನಾಲಜಿ” ಜೊತೆಗೆ ಇತ್ತೀಚಿನ BEE STAR ರೇಟಿಂಗ್‌ನೊಂದಿಗೆ ಬರಲಿವೆ. MarQ 4-in-1 ಕನ್ವರ್ಟಬಲ್ ಇನ್ವರ್ಟರ್ ಎಸಿಯು ‘ಟರ್ಬೋ ಕೂಲ್ ಮೋಡ್’ ಎಂಬ ಹೆಚ್ಚುವರಿ ಮೋಡ್ ನಲ್ಲಿಯೂ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದ್ದು, ಕಡಿಮೆ ವಿದ್ಯುತ್ ಬಳಕೆ ಮಾಡುವ ಜೊತೆಗೆ ಕೆಲವೇ ನಿಮಿಷಗಳಲ್ಲಿ ಕೋಣೆಯನ್ನು ಹೆಚ್ಚು ತಂಪಾಗಿಸುತ್ತದೆ.