Home Breaking Entertainment News Kannada Bacchan Family: ಬಚ್ಚನ್ ಕುಟುಂಬದಲ್ಲಿ ಐಶ್ವರ್ಯಾ ರೈ ಕಲಿತಿರುವುದೇ ಕಡಿಮೆಯಂತೆ! ಉಳಿದವರ ಎಜುಕೇಷನ್‌ ಎಷ್ಟು ?

Bacchan Family: ಬಚ್ಚನ್ ಕುಟುಂಬದಲ್ಲಿ ಐಶ್ವರ್ಯಾ ರೈ ಕಲಿತಿರುವುದೇ ಕಡಿಮೆಯಂತೆ! ಉಳಿದವರ ಎಜುಕೇಷನ್‌ ಎಷ್ಟು ?

Hindu neighbor gifts plot of land

Hindu neighbour gifts land to Muslim journalist

ಬಚ್ಚನ್ ಕುಟುಂಬವು ಬಾಲಿವುಡ್‌ನ ಅತ್ಯಂತ ಹಳೆಯ ಮತ್ತು ಪ್ರಖ್ಯಾತ ಕುಟುಂಬಗಳಲ್ಲೊಂದು ಎಂಬುದು ಸಹಜವಾಗಿ ಎಲ್ಲರಿಗೂ ಗೊತ್ತಿರುವ ವಿಚಾರವೇ!!!  ಎಲ್ಲರ ಪ್ರೀತಿಯ ಅಭಿಮಾನದ ಪ್ರತೀಕವಾಗಿ ಬಿಗ್ ಬಿ ಎಂದು ಫೇಮಸ್ ಆಗಿರುವ  ಅಮಿತಾಭ್ ಬಚ್ಚನ್ ಹಿಂದಿ ಚಿತ್ರರಂಗದ ಪ್ರಖ್ಯಾತ ನಟ, ನಿರ್ಮಾಪಕ, ಕಿರುತೆರೆ ನಿರೂಪಕ ಮತ್ತು ಮಾಜಿ ರಾಜಕಾರಣಿ. ಈ ಬಿಗ್ ಬಿ ಕುಟುಂಬದ ಶಿಕ್ಷಣದ ಬಗ್ಗೆ ನಿಮಗೆಷ್ಟು ಗೊತ್ತು?? ಬಚ್ಚನ್ ಫ್ಯಾಮಿಲಿ ಯಲ್ಲಿ ಅತಿ ಕಡಿಮೆ ಓದಿರುವವರ ಪೈಕಿ ಐಶ್ವರ್ಯ ರೈ ಎಂಬ ಕುತೂಹಲಕಾರಿ ವಿಚಾರ ನಿಮಗೆ ತಿಳಿದಿದೆಯೇ? ಗೊತ್ತಿಲ್ಲ ಅನ್ನೋದಾದರೆ, ಈ ವಿಚಾರದ ಬಗ್ಗೆ ನಾವು ಹೇಳ್ತೀವಿ ಕೇಳಿ!!!

ಶತಮಾನದ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಶಿಕ್ಷಣ ಮತ್ತು ಬರವಣಿಗೆಯ ಬಗ್ಗೆ ತಿಳಿಯಲು ಹೊರಟರೆ, ಬಿಗ್ ಬಿ ಶೇರ್ವುಡ್ ನೈನಿತಾಲ್  ಶಾಲೆಯಲ್ಲಿ ಇಂಟರ್ ವರೆಗೆ ವ್ಯಾಸಂಗ ನಡೆಸಿದ್ದಾರೆ. ರ್ಯಾಂಕ್ ಸ್ಟೂಡೆಂಟ್ ಆಗಿದ್ದ ಬಿಗ್ ಬಿ   ದೆಹಲಿ ವಿಶ್ವವಿದ್ಯಾಲಯದ ಕಿರೋರಿ ಮಾಲ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಪಡೆದಿದ್ದಾರೆ. ಅಮಿತಾಭ್ ಬಚ್ಚನ್ ಅವರಿಗೆ ಮೂರು ಬಾರಿ ಸರ್ವ ಶ್ರೇಷ್ಠ ನಟ ರಾಷ್ಟ್ರೀಯ ಸಿನಿಮಾ ಅವಾರ್ಡ್ ಕೂಡ ಪಡೆದಿದ್ದು, ಇದಲ್ಲದೆ 14 ಬಾರಿ ಫಿಲಂ ಫೇರ್ ಅವಾರ್ಡ್ ಕೂಡ ಒಲಿದು ಬಂದಿದೆ.  ಸಿನಿಮಾಗಳ ಜೊತೆಗೆ ಅವರು ಉತ್ತಮ ಗಾಯಕ , ನಿರ್ಮಾಪಕ ಮತ್ತು ಟಿವಿ ನಿರೂಪಕರಾಗಿ ಯೂ ಗುರುತಿಸಿಕೊಂಡಿದ್ದಾರೆ. ಇಷ್ಟೆ ಅಲ್ಲದೆ, ಭಾರತ ಸರ್ಕಾರ ಅಮಿತಾಬ್ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಸನ್ಮಾನವನ್ನು ಸ್ವೀಕರಿಸಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಪತ್ನಿ ಮತ್ತು ಪ್ರಸಿದ್ಧ ನಟಿ ಜಯಾ ಬಚ್ಚನ್ ಅವರು ಭೋಪಾಲ್‌ನ ಸೇಂಟ್ ಜೋಸೆಫ್ ಕಾನ್ವೆಂಟ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ಈ  ಬಳಿಕ ಎಫ್‌ಟಿಐಐ ಪುಣೆಯಲ್ಲಿ ಜಯಾ ನಟನೆಯಲ್ಲಿ ಪದವಿ ಪಡೆದಿದ್ದಾರೆ.

ಬಚ್ಚನ್ ಕುಟುಂಬದ ಸೊಸೆ ಐಶ್ವರ್ಯಾ ರೈ ಬಚ್ಚನ್ ಬಗ್ಗೆ ತಿಳಿಯ ಬಯಸುವವರಿಗೆ,  ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ವಿಶ್ವ ಸುಂದರಿ ಐಶ್ವರ್ಯ ರೈ ತನ್ನ ಪದವಿಗಾಗಿ ರಚನಾ ಸಂಸದ್ ಅಕಾಡೆಮಿ ಆಫ್ ಆರ್ಕಿಟೆಕ್ಚರ್‌ಗೆ    ಸೇರಲು ಅವಕಾಶ ಗಿಟ್ಟಿಸಿಕೊಂಡರು.ಈ ನಡುವೆ  ಮಾಡೆಲಿಂಗ್‌ನಿಂದಾಗಿ ಪದವಿ ಪೂರ್ಣಗೊಳಿಸಲಾಗದೆ ಇದ್ದರೂ ಕೂಡ ಬಣ್ಣದ ಲೋಕದಲ್ಲಿ ಟ್ರೆಂಡ್ ಸೃಷ್ಟಿಸಿ ಅನೇಕ ಅಭಿಮಾನಿಗಳ ಪಾಲಿನ ನೆಚ್ಚಿನ ನಟಿಯಾಗಿ ಹೊರಹೊಮ್ಮಿದ್ದಾರೆ. ತನ್ನ ನಟನೆಗೆ ಎರಡು ಬಾರಿ ಫಿಲ್ಮ್ ಫೇರ್ ಅವಾರ್ಡ್ ಕೂಡ ಬಾಚಿಕೊಂಡಿದ್ದಾರೆ.

ಹೆಸರಾಂತ ನಟ ಅಮಿತಾಬ್ ಬಚ್ಚನ್ ಮತ್ತು ನಟಿ ಜಯ ಬಚ್ಚನ್‌ ಅವರ ಸುಪುತ್ರ ಅಭಿಷೇಕ್ ಬಚ್ಚನ್ ಬೋಸ್ಟನ್ ವಿಶ್ವವಿದ್ಯಾಲಯದಿಂದ ನಟನೆಯಲ್ಲಿ ಪದವಿ ಪೂರ್ಣ ಮಾಡಲು ಸಾಧ್ಯವಾಗಿಲ್ಲ. ಆದರೆ, ಬಣ್ಣದ ಲೋಕದಲ್ಲಿ ತನ್ನದೇ ಛಾಪು ಮೂಡಿಸಿ, ಬ್ರಾಂಡ್ ಅಂಬಾಸಿಡರ್ ಆಗಿ ಕೂಡ ಮಿಂಚಿದ್ದಾರೆ.

ಇನ್ನೂ  ಅಮಿತಾಭ್ ಬಚ್ಚನ್ ಅವರ ಸುಪುತ್ರಿ, ಶ್ವೇತಾ ಬಚ್ಚನ್ ತನ್ನ ಅಧ್ಯಯನವನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಮಾಡಿದ್ದು, ಆ ಬಳಿಕ ದ ತಮ್ಮ ಪದವಿಯನ್ನು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದಾರೆ. ಇದರ ಜೊತೆಗೆ  ಚಿತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳದೆ ಇದ್ದರೂ ಶ್ವೇತಾ ಅವರಿಗೆ  ಫ್ಯಾನ್ ಫಾಲೋವರ್ ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.