Home Entertainment ಹಸೆಮಣೆಯೇರಲು ಸಿದ್ಧಳಾದ “ಮಹಾನಟಿ” ಕೀರ್ತಿ ಸುರೇಶ್ |

ಹಸೆಮಣೆಯೇರಲು ಸಿದ್ಧಳಾದ “ಮಹಾನಟಿ” ಕೀರ್ತಿ ಸುರೇಶ್ |

Hindu neighbor gifts plot of land

Hindu neighbour gifts land to Muslim journalist

ಸ್ಟಾರ್ ನಟಿಯರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೊಸ ಗಾಸಿಪ್ ಗಳು ಬರುತ್ತಲೇ ಇದೆ. ಈಗ ಕಾಲಿವುಡ್ ನಲ್ಲಿ ಕೀರ್ತಿ ಸುರೇಶ್ ಕೂಡ ಶೀಘ್ರದಲ್ಲೇ ಮದುವೆಯಾಗುತ್ತಾರೆ ಎಂಬ ಚರ್ಚೆ ನಡೆಯುತ್ತಿದೆ.

ತನ್ನ ಮನೆಯವರು ನಿಶ್ಚಯಿಸಿದ ವರನೊಂದಿಗೆ ಸಪ್ತಪದಿ ತುಳಿಯಲು ಪೋಷಕರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ವರ ಉದ್ಯಮಿಯಾಗಿದ್ದು ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಈ ನಟಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ತಮಿಳಿನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತನ್ನ ಅಭಿನಯದ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದಿರುವ ಕೀರ್ತಿ ಸುರೇಶ್ ತೆಲುಗಿನಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ತಮ್ಮ ಪ್ರತಿಭೆ ತೋರಿಸಿದ್ದಾರೆ. ಅಲ್ಲದೇ ದೊಡ್ಡ ಸ್ಟಾರ್‌ಗಳ ಜೊತೆ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಕೆಯ ಅಭಿನಯಕ್ಕೆ ದೇಶದಾದ್ಯಂತ ಮನ್ನಣೆ ಸಿಕ್ಕಿದೆ. ತಮ್ಮ ನಟನಾ ಕಲೆಯ ಮೂಲಕ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ.

ಕೀರ್ತಿ ಸುರೇಶ್ ಕೆಲವು ವೈಯಕ್ತಿಕ ವಿಚಾರಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಅನೇಕ ಬಾರಿ ಇಂತಹ ವದಂತಿಗಳಿಂದ ಹೈಲೈಟ್ ಆಗುತ್ತಿದ್ದಾರೆ. ಅದೇ ಸಮಯದಲ್ಲಿ ಅವರ ಮದುವೆಯ ಬಗ್ಗೆ ಹಲವಾರು ವದಂತಿಗಳಿವೆ. ಈ ಹಿಂದೆ ಉದ್ಯಮಿಯೊಬ್ಬರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಇತ್ತು. ಆ ಬಳಿಕ ಅವರು ಚಿತ್ರರಂಗದ ಸೆಲೆಬ್ರಿಟಿಯನ್ನು ಮದುವೆಯಾಗಲಿದ್ದಾರೆ ಎಂಬ ಗಾಸಿಪ್ ಶುರುವಾಗಿತ್ತು. ಹೀಗೆ ಕೀರ್ತಿ ಸುರೇಶ್ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು.

ಈಗ ಕೀರ್ತಿ ಸುರೇಶ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇಂಡಸ್ಟ್ರಿಯಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ಕೀರ್ತಿ ಸುರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಇದೇ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಕೀರ್ತಿ ಸುರೇಶ್ ಅವರ ಮದುವೆಯ ಸುದ್ದಿ ವೈರಲ್ ಆಗುತ್ತಿರುವ ಸಂದರ್ಭದಲ್ಲಿ ಅವರ ವರನ ವಿವರಗಳು ಸಹ ಬೆಳಕಿಗೆ ಬಂದಿವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಕೀರ್ತಿ ಸುರೇಶ್ ರಾಜಕೀಯ ಹಾಗೂ ಉದ್ಯಮ ವಲಯದಲ್ಲಿ ಸಕ್ರಿಯವಾಗಿರುವ ವ್ಯಕ್ತಿಯನ್ನು ಮದುವೆಯಾಗುವ ಬಗ್ಗೆ ಸುದ್ದಿ ಹಬ್ಬಿದೆ. ಆದರೆ ಈ ಬಗ್ಗೆ ಕೀರ್ತಿ ಸುರೇಶ್ ಆಗಲಿ ಅವರ ಆಪ್ತರಾಗಲಿ ಅಥವಾ ಕುಟುಂಬದವರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಆದರೂ ಬೆಂಕಿಯಿಲ್ಲದೆ ಹೊಗೆಯಾಡಲ್ಲ ಎಂಬ ಮಾತೊಂದಿದೆ. ಈ ರೀತಿ ಕೀರ್ತಿ ಸುರೇಶ್ ಮದುವೆಯಾಗುತ್ತಾರೆ ಎಂಬ ಗಾಸಿಪ್ ಒಂದು ಸಿನಿಮಾ ರಂಗದಲ್ಲಿ ಹರಿದಾಡುತ್ತಿರುವುದಂತು ನಿಜ.