Home Breaking Entertainment News Kannada Actor Rakshit Shetty : ಎಲ್ಲಿದ್ದಾರೆ ರಕ್ಷಿತ್‌ ಶೆಟ್ಟಿ? ಯಾಕೆ ಯಾರ ಕಣ್ಣಿಗೂ ಕಾಣ್ತಿಲ್ಲ?

Actor Rakshit Shetty : ಎಲ್ಲಿದ್ದಾರೆ ರಕ್ಷಿತ್‌ ಶೆಟ್ಟಿ? ಯಾಕೆ ಯಾರ ಕಣ್ಣಿಗೂ ಕಾಣ್ತಿಲ್ಲ?

Hindu neighbor gifts plot of land

Hindu neighbour gifts land to Muslim journalist

Actor Rakshit Shetty: ಸ್ಯಾಂಡಲ್​​ವುಡ್​​ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Simple Star Rakshit Shetty) ಕಿರಿಕ್ ಪಾರ್ಟಿ ಸಿನಿಮಾ(kirik party movie)ದ ಮೂಲಕ ಜನಮನಗೆದ್ದಿದ್ದರು. ಅದರಲ್ಲೂ ಕಾಲೇಜು ಹುಡುಗರ ನೆಚ್ಚಿನ ಸಿನಿಮಾವಾಗಿತ್ತು. ನಂತರ ಚಾರ್ಲಿ 777 ಸಿನಿಮಾವನ್ನು ತೆರೆ ಮೇಲೆ ತಂದ ನಟ ರಕ್ಷಿತ್ ಶೆಟ್ಟಿ(Actor Rakshit Shetty) ಭರ್ಜರಿ ಗೆಲುವು ಸಾಧಿಸಿದರು. ಮೂಕ ಪ್ರಾಣಿ ನಾಯಿಯ ಜೊತೆಗಿನ ಒಡನಾಟವನ್ನು ವಿಭಿನ್ನವಾಗಿ ಸಿನಿ ಪ್ರೇಕ್ಷಕರ ಮುಂದಿಟ್ಟು, ಎಲ್ಲೆಡೆ ಜನಪ್ರಿಯರಾದರು. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿರುವ ಚರ್ಚೆ ಏನೆಂದರೆ, ನಟ ರಕ್ಷಿತ್‌ ಶೆಟ್ಟಿ ಯಾರಿಗೂ ಕಾಣಿಸ್ತಿಲ್ಲ ಯಾಕೆ? ಎಂಬುದಾಗಿದೆ. ಏನಿದು ಚರ್ಚೆ? ಹಾಗಾದ್ರೆ ರಕ್ಷಿತ್ ಶೆಟ್ಟಿ (Rakshit Shetty) ಎಲ್ಲಿಗೆ ಹೋದರು? ಯಾಕೆ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ?. ಬನ್ನಿ ತಿಳಿಯೋಣ ಮಾಹಿತಿ.

ರಕ್ಷಿತ್ ಅಭಿನಯದ ಚಾರ್ಲಿ ಟ್ರಿಪಲ್ 7 ಚಿತ್ರ ಸಿನಿಪ್ರಿಯರ ಮನದಲ್ಲಿ ಅಚ್ಚೊತ್ತಿದೆ. ಶ್ವಾನಪ್ರಿಯರಂತು ಸದಾ ಸ್ಮರಿಸುವ ಸಿನಿಮಾವಾಗಿದೆ. ಅಲ್ಲದೆ, ಚಾರ್ಲಿ ಟ್ರಿಪಲ್ 7 ಚಿತ್ರ ಬೇರೆ ಭಾಷೆಯಲ್ಲಿಯೂ ಡಬ್ ಆಗಿದೆ. ಆದರೆ ಚಾರ್ಲಿ 777 ಸಿನಿಮಾ (777 Charlie movie) ರಿಲೀಸ್‌ ನಂತರ ರಕ್ಷಿತ್‌ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಂಡೇ ಇಲ್ಲ. ಮಾಧ್ಯಮಗಳ ಮುಂದೆಯೂ ಬಂದಿಲ್ಲ. ಅಷ್ಟಾಗಿ ಹೆಚ್ಚು ಹೊತ್ತು ಜನರ ಕಣ್ಣಿಗೆ ಬಿದ್ದಿಲ್ಲ. ಅಲ್ಲದೆ, ಕನ್ನಡ ಚಿತ್ರರಂಗದ(sandlwood) ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗುತ್ತಿಲ್ಲ. ಹೀಗಾಗಿ ರಕ್ಷಿತ್‌ ಶೆಟ್ಟಿ ಎಲ್ಲಿ ಹೋದರು? ಎಂದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.

ರಕ್ಷಿತ್ ಶೆಟ್ಟಿ ಕಾಣೆಯಾಗಲು ಕಾರಣವಿದೆ. ಏನು ಅಂತೀರಾ? ನಟ ತಮ್ಮ ಹೊಸ ಸಿನಿಮಾವೊಂದಕ್ಕೆ ರೆಡಿಯಾಗುತ್ತಿದ್ದಾರೆ. ಹೀಗಾಗಿ ಅವರು ಯಾರ ಕಣ್ಣಿಗೂ ಕಾಣುತ್ತಿಲ್ಲ. ಇತ್ತೀಚೆಗೆ ಅವರು ದೇವಸ್ಥಾನವೊಂದಕ್ಕೆ ಭೇಟಿ ಕೊಟ್ಟಿದ್ದರು. ಆದ್ರೆ ಆಗಲೂ ಅವ್ರು ಕ್ಯಾಮರಾಗಳಿಂದ ದೂರವೇ ಉಳಿದಿದ್ದರು. ಯಾಕೆ ಗೊತ್ತಾ?
ರಕ್ಷಿತ್ ತಮ್ಮ ಮುಂದಿನ ಸಿನಿಮಾಗಾಗಿ ಹೇರ್ ಸ್ಟೈಲ್ (rakshit shetty hair style) ಮತ್ತು ಬಾಡಿ ಶೇಪ್ ಬದಲಾಯಿಸಿಕೊಂಡಿದ್ದಾರಂತೆ. ಅದು ಯಾರಿಗೂ ಗೊತ್ತಾಗದಿರಲಿ ಅಂತ ಜನರಿಂದ ದೂರವಿದ್ದಾರೆ ಎಂದು ಹೇಳಲಾಗಿದೆ.

ಸದ್ಯ ರಕ್ಷಿತ್ ಶೆಟ್ಟಿ ಅವರು ‘ಸಪ್ತ ಸಾಗರದಾಚೆ ಎಲ್ಲೋ’ (Sapta Sagaradaache Yello) ಸಿನಿಮಾದ ಕೆಲಸದಲ್ಲಿ ತೊಡಗಿದ್ದಾರೆ. ಇದರ ಬೆನ್ನಲ್ಲೇ ಬಿಗ್‌ ಬಜೆಟ್‌ ಮೂವಿ ಒಂದು ಸೆಟ್ಟೇರಲಿದೆ. ಹೊಂಬಾಳೆ ಫಿಲ್ಮ್ಸ್‌ (Hombale Films) ಈ ಸಿನಿಮಾವನ್ನು ನಿರ್ಮಿಸುತ್ತಿದೆ. ಸದ್ಯ ಸ್ಯಾಂಡಲ್​​ವುಡ್​​ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅಭಿಮಾನಿಗಳು ಸಿನಿಮಾ ತೆರೆ ಮೇಲೆ ಬರಲು ಕಾದು ಕುಳಿತಿದ್ದಾರೆ.