Home Entertainment ತನ್ನ ಅನಾರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಸಮಂತಾ!!! ಅಷ್ಟಕ್ಕೂ ನಟಿಗೆ ಕಾಡ್ತಿರೋ ಖಾಯಿಲೆ ಏನು ಗೊತ್ತೇ?

ತನ್ನ ಅನಾರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಸಮಂತಾ!!! ಅಷ್ಟಕ್ಕೂ ನಟಿಗೆ ಕಾಡ್ತಿರೋ ಖಾಯಿಲೆ ಏನು ಗೊತ್ತೇ?

Hindu neighbor gifts plot of land

Hindu neighbour gifts land to Muslim journalist

ಸಮಂತಾ ರುತ್ ಪ್ರಭು ಯಾರಿಗೆ ಗೊತ್ತಿಲ್ಲ ಹೇಳಿ ಟಾಲಿವುಡ್ ಸೇರಿದಂತೆ ಕಾಲಿವುಡ್ ನಲ್ಲೂ ಸಾಲು ಸಾಲು ಸಿನಿಮಾಗಳ ಮೂಲಕ ಜನರ ಮನ ಗೆದ್ದಿದ್ದಾರೆ. ಇದೀಗ ಸಮಂತಾರವರು ಅಪರೂಪದ ಖಾಯಿಲೆ ಮೈಯೋಟಿಸಿಸ್ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘ಯಶೋದಾ’ ಟ್ರೇಲರ್‌ಗೆ ಲಭ್ಯವಾದ ಅಗಾಧ ಪ್ರತಿಕ್ರಿಯೆಗಳಿಗೆ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಪ್ರೀತಿ ವಿಶ್ವಾಸಗಳಿಂದ ನಾನು ಆದಷ್ಟೂ ಬೇಗ ಗುಣಮುಖಳಾಗುತ್ತೇನೆ. ಅಂತ್ಯವಿಲ್ಲದ ಅದೆಷ್ಟೋ ಸವಾಲುಗಳನ್ನು ಎದುರಿಸಲು ಇದು ಶಕ್ತಿಯನ್ನು ಕೊಡುತ್ತದೆ. ಕೆಲವು ತಿಂಗಳ ಹಿಂದೆ ಮೈಯೋಟಿಸಿಸ್ ಎಂಬ ಕಾಯಿಲೆ ಪತ್ತೆಯಾಯಿತು. ಚಿಕಿತ್ಸೆ ಮುಗಿದ ನಂತರ ಇದರ ಬಗ್ಗೆ ಹಂಚಿಕೊಳ್ಳಲು ಆಶಿಸಿದ್ದೆ, ಆದರೆ ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ ಎಂದು ವೈದ್ಯಕೀಯ ಸ್ಥಿತಿಯಲ್ಲಿ ರೆಕಾರ್ಡಿಂಗ್ ಸ್ಟುಡಿಯೋದಲ್ಲಿರುವ ತಮ್ಮ ಫೋಟೋವನ್ನ ಸಮಂತಾ ಶೇರ್ ಮಾಡಿದ್ದಾರೆ.

ನಾವು ನಿಜವಾಗಲೂ ಏನು ಅನುಭವಿಸುತ್ತೇವೊ ಅದಕ್ಕಿಂತ ಯಾವಾಗಲೂ ನಾನು ಹೆಚ್ಚು ಧೈರ್ಯಶಾಲಿ,ಧೃಡ ನಿಶ್ಚಯ , ಹೀಗೆಲ್ಲಾ ತೋರಿಸುವ ಅಗತ್ಯವಿಲ್ಲ. ನಮ್ಮ ದುರ್ಬಲತೆಯನ್ನು ಒಪ್ಪಿಕೊಳ್ಳಬೇಕು. ನಾನು ಜೀವನದಲ್ಲಿ ಒಳ್ಳೆಯ ಮತ್ತು ಕೆಟ್ಟ ದಿನಗಳನ್ನು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಅನುಭವಿಸಿದ್ದೇನೆ. ಇನ್ನೂ ಒಂದು ದಿನವನ್ನು ಎದುರಿಸಲು ಸಾಧ್ಯವಿಲ್ಲ ಎಂದು ಅನಿಸಿದಾಗಲೂ, ಹೇಗಾದರೂ ಆ ಕ್ಷಣ ಹಾದು ಹೋಗುತ್ತದೆ. ಇದರಿಂದ ನಾನು ಒಂದೆರಡು ದಿನಗಳ ಮುಂಚೆಯೆ ಚೇತರಿಸಿಕೊಳ್ಳಬಹುದು ಎಂದಷ್ಟೆ ಹೇಳಬಹುದು ಎಂದು ಭಾವನಾತ್ಮಕವಾಗಿ ಬರೆದಿದ್ದಾರೆ.

ಮೈಯೋಟಿಸಿಸ್ ಕಾಯಿಲೆ ಬಂದರೆ ವ್ಯಕ್ತಿ ಕುಗ್ಗುತ್ತಾನೆ. ನೋವಿನಿಂದ ಕೂಡಿದ ದೇಹ, ಸ್ನಾಯು ಸೆಳೆತ, ಸ್ನಾಯುಗಳು ದುರ್ಬಲಗೊಳ್ಳುವುದು ಇವೆಲ್ಲಾ ಇದರ ಗುಣಲಕ್ಷಣಗಳು. ಸ್ವಲ್ಪ ದೂರ ನಡೆದರೂ ಸುಸ್ತು ಎನಿಸುತ್ತದೆ. ಈ ಸಮಸ್ಯೆಯು 30-60ರ ವಯಸ್ಸಿನವರಲ್ಲಿ ಕಾಣಿಸಿಕೊಳ್ಳುತ್ತದೆ. ಇದಕ್ಕೆ ಸರಿಯಾದ ಚಿಕಿತ್ಸೆ ಕೊಡದೆ ಇದ್ದರೆ ದಿನ ಕಳೆದಂತೆ ಪರಿಸ್ಥಿತಿ ಬೇರೆಯ ಹಂತಕ್ಕೆ ಹೋಗುವ ಸಾಧ್ಯತೆಯಿದೆ. ವೈದ್ಯರು ಶೀಘ್ರದಲ್ಲೇ ಸಮಂತಾರವರು ಗುಣಮುಖ ಹೊಂದುತ್ತಾರೆ ಎಂದು ತಿಳಿಸಿದ್ದಾರೆ.