Home Entertainment A girl dressed like Urfi Javed:ಈಕೆ ಉರ್ಫಿ ಗಿಂತಲೂ ಒಂದು ಕೈ ಮೇಲೆ, ಇವಳ...

A girl dressed like Urfi Javed:ಈಕೆ ಉರ್ಫಿ ಗಿಂತಲೂ ಒಂದು ಕೈ ಮೇಲೆ, ಇವಳ ಅರೆ ಬರೆ ಡ್ರೆಸ್ ನೋಡಿದ್ರೆ ನಿಜಕ್ಕೂ ತಲೆ ತಿರುಗುತ್ತೆ!

Girl dressed like Urfi

Hindu neighbor gifts plot of land

Hindu neighbour gifts land to Muslim journalist

Girl dressed like Urfi : ಇಂದಿನ ದಿನಗಳಲ್ಲಂತೂ ಅನುಕಣೆ, ಅನುಸರಣೆಗಳೆ ಹೆಚ್ಚಾಗಿ ಬಿಟ್ಟಿದೆ. ಸ್ವಂತಿಕೆ ಅನ್ನೋದು ತೀರಾ ಕಡಿಮೆಯಾಗುತ್ತಿದೆ. ಅದು ಆಚಾರ ವಿಚಾರ ಇರ್ಲಿ, ಹಾವ ಭಾವ ಇರ್ಲಿ, ಸ್ಟೈಲ್ ಮಾಡೋದರಲ್ಲಾಗಲಿ, ಬಟ್ಟೆ ಬರೆ ಹಾಕೋದ್ರಲ್ಲಾಗಲಿ ಹೀಗೆ ಎಲ್ಲಾದಲ್ಲೂ ನಕಲೇ ಆಗಿಬಿಟ್ಟಿದೆ. ಅಂದಹಾಗೆ ಬಾಲಿವುಡ್ ಕಿರುತೆರೆ ತಾರೆ ಉರ್ಫಿ ಜಾವೇದ್(Urfi Javed) ಸೋಷಿಯಲ್ ಮೀಡಿಯಾಗಳಲ್ಲಿ ತಾನು ಧರಿಸೋ ಉಡುಗೆಗಳ ಮೂಲಕವೇ ಚರ್ಚೆಯಲ್ಲಿದ್ದಾರೆ. ಅನೇಕ ಬಾರಿ ಕೆಲವರು ಈಕೆಯನ್ನು ನಕಲು ಮಾಡುವುದನ್ನು ಸಹ ಕಾಣಬಹುದು. ಅಂತೆಯೇ ಇತ್ತೀಚೆಗೆ ದೆಹಲಿ ಮೆಟ್ರೋದಲ್ಲಿ(Delhi metro) ಹುಡಗಿಯೊಬ್ಬಳು ಉರ್ಫಿಯಂತೆ (Girl dressed like Urfi) ಅರೆ ಬರೆ ಬಟ್ಟೆ ಹಾಕಿಕೊಂಡು ಬಂದು ಸಾಕಷ್ಟು ಫೇಮಸ್ ಆಗಿದ್ದಾಳೆ.

ಹೌದು, ದೆಹಲಿ ಮೆಟ್ರೋ ಒಳಗೆ ವಿಚಿತ್ರವಾದ ಡ್ರೆಸ್ ಹಾಕಿರೋ ಹುಡುಗಿಯ ವಿಡಿಯೋ ವೈರಲ್ ಆಗಿದ್ದು, ಜನರು ಅವಳನ್ನು ದೇಸಿ ಉರ್ಫಿ ಜಾವೇದ್ ಎಂದು ಹೇಳಲು ಪ್ರಾರಂಭಿಸಿದ್ದು ಅವಳು ಉರ್ಫಿ ಜಾವೇದ್‌ಗೆ ಕಾಂಪಿಟೇಷನ್‌ ನೀಡಿದಂತಿತ್ತು. ಈ ಈ ವಿಡಿಯೋವೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

ಅಂದಹಾಗೆ Instagram ನಲ್ಲಿ ಹಂಚಿಕೊಂಡು, ಸಾಕಷ್ಟು ವೈರಲ್ ಆಗಿರೋ ಈ ವಿಡಿಯೋದಲ್ಲಿ ಹುಡುಗಿಯು ಉರ್ಫಿ ಜಾವೇದ್ ಅವರಂತೆಯೇ ವಿಚಿತ್ರವಾದ ಅರೆ ಬರೆ ಡ್ರೆಸ್ ತೊಟ್ಟು ಮೆಟ್ರೋ ಪ್ರಯಾಣ ಮಾಡುವುದು ಕಂಡುಬಂದಿದೆ. ಮೆಟ್ರೋದಲ್ಲಿ ಮಹಿಳೆಯರಿಗೆ ಮೀಸಲಿಟ್ಟ ಆಸನಗಳ ಮೇಲೆ ಅವರು ಕುಳಿತಿದ್ದಾರೆ. ಮುಂದಿನ ಸ್ಟೇಷನ್ ಬರುತ್ತಲೇ ಎದ್ದು ಹೊರಡಲು ಶುರುಮಾಡುತ್ತಾಳೆ. ಈ ಹುಡುಗಿ ಸೈಡ್ ಸ್ಲಿಟ್ ಮಿನಿ ಸ್ಕರ್ಟ್ ಮತ್ತು ಫ್ಯಾಷನಬಲ್ ಬ್ರಾ ಮಾತ್ರ ಧರಿಸಿದ್ದಾಳೆ. ಇವಳ ಅವತಾರ ನೋಡಿದರೆ ಯಾರಾದರೂ ಶಾಕ್ ಆಗುತ್ತಾರೆ. ಕೆಲವರು ಅದನ್ನು ಉರ್ಫಿ ಜಾವೇದ್ ಅವರ ಕಾಪಿ ಎಂದು ಕರೆದಿದ್ದಾರೆ.

ಸೋಷಿಯಲ್ ಮೀಡಿಯಾಗಳಲ್ಲಿ ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ. ಅದಕ್ಕೆ ಬಗೆ ಬಗೆಯ ಕಮೆಂಟ್ಗಳು ಬರಲು ಶುರುವಾಗಿವೆ. ಈ ಹುಡುಗಿ ಅದ್ಭುತ ಪ್ರಯೋಗ ಮಾಡಿದ್ದಾಳೆ, ಇದು ದೇಸಿ ಉರ್ಫಿ ಜಾವೇದ್ ಮತ್ತು ಅದೇ ಸಮಯದಲ್ಲಿ ಮಾಡೆಲಿಂಗ್‌ಗೆ ಹೋಗಬೇಕು ಎಂದು ಕೆಲವರು ಕಾಮೆಂಟ್‌ ಮಾಡಿದ್ದಾರೆ.