Home Entertainment ಈ ಅಜ್ಜಿಯ ಉತ್ಸಾಹ ಅದಮ್ಯ | 67 ವರ್ಷದ ಈ ಅಜ್ಜಿ ಮಾಡಿದ ರೋಪ್ ಸೈಕ್ಲಿಂಗ್...

ಈ ಅಜ್ಜಿಯ ಉತ್ಸಾಹ ಅದಮ್ಯ | 67 ವರ್ಷದ ಈ ಅಜ್ಜಿ ಮಾಡಿದ ರೋಪ್ ಸೈಕ್ಲಿಂಗ್ ಸಖತ್ ವೈರಲ್!!!

Hindu neighbor gifts plot of land

Hindu neighbour gifts land to Muslim journalist

ವಯಸ್ಸು ಕೇವಲ ಸಂಖ್ಯೆ ಮಾತ್ರ ಎಂದು ಅಜ್ಜಿಯೊಬ್ಬರು ಸಾಬೀತು ಪಡಿಸಿದಂತಿದೆ ಈ ಚಿತ್ರಣ. ಆತ್ಮವಿಶ್ವಾಸ, ಧೈರ್ಯ, ಛಲ ಇದ್ದರೆ ಅದರ ಮುಂದೆ ಎಲ್ಲವೂ ಶೂನ್ಯ. ಸದ್ಯ 67 ವರ್ಷದ ಅಜ್ಜಿಯೊಬ್ಬರು ಸೀರೆಯುಟ್ಟು ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಅಬ್ಬಬ್ಬಾ!! ಸೀರೆಯುಟ್ಟು ಸೈಕಲ್ ಮೇಲೆ ಸವಾರಿ ಅಂತ ಅಚ್ಚರಿ ಪಡುತ್ತಿರಾ!!. ಈ ಅಜ್ಜಿಯ ಧೈರ್ಯಕ್ಕೆ ಮೆಚ್ಚಲೇಬೇಕು ಹಾಗಿದೆ ಈ ವಿಡಿಯೋ. ಹಾಗಾದ್ರೆ ಬನ್ನಿ ವಿಡಿಯೋ ನೋಡೇ ಬಿಡೋಣ.

ಕಳೆದ ಬಾರಿ 80 ವರ್ಷದ ಅಜ್ಜಿಯೊಬ್ಬರು ಪ್ಯಾರಾಗ್ಲೈಡಿಂಗ್ ಮಾಡಿದ ವಿಡಿಯೋ ವೈರಲ್ ಆಗಿತ್ತು. ಬಹುಶಃ ಎಲ್ಲಾ ಅಜ್ಜಿಗಳು ತಮ್ಮ ಪವರ್ ಏನೆಂದು ತೋರ್ಪಡಿಸುತ್ತಿದ್ದಾರೆ. ಕೇವಲ ನಾಲ್ಕು ಗೋಡೆಗೆ ಮಾತ್ರ ಸೀಮಿತವಲ್ಲ. ಪ್ರಪಂಚದ ಬಗ್ಗೆ ನಮಗೂ ಗೊತ್ತಿದೆ. ಸಾಧಿಸೋಕೆ, ಸಾಹಸಕ್ಕೆ ವಯಸ್ಸು ಮುಖ್ಯ ಅಲ್ಲ ಅಂತ ತೋರಿಸಿಕೊಡುವಂತಿದೆ ಇವರ ಕಾರ್ಯಗಳು. ಸದ್ಯ 67ರ ಅಜ್ಜಿಯ ರೋಪ್​ ಸೈಕ್ಲಿಂಗ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ‌.

ಇನ್ನು ಹಗ್ಗದ ಮೇಲೆ ಸೈಕಲ್​ ಓಡಿಸೋದು ಅದು ಕೂಡ ಸೀರೆಯುಟ್ಟು ಅಂದ್ರೆ ಸುಮ್ನೇನಾ? ಯಪ್ಪಾ!! ಈ ಅಜ್ಜಿಗೆ ಸಿಕ್ಕಾಪಟ್ಟೆ ಧೈರ್ಯ ಇರ್ಬೇಕು. ಅದೂ ಈ ವಯಸ್ಸಲ್ಲಿ ರೋಪ್​ ಸೈಕ್ಲಿಂಗ್ ಭೇಷ್ ಅನ್ಲೇಬೇಕು ಅಲ್ವಾ?? ವಿಡಿಯೋದಲ್ಲಿ ಅಜ್ಜಿ, ಹೆಲ್ಮೆಟ್​ ಮತ್ತು ಸುರಕ್ಷತಾ ಕವಚಗಳನ್ನು ಧರಿಸಿ, ನಿರಾಯಾಸವಾಗಿ, ಅಂಜದೆ ರೋಪ್​ ಸೈಕ್ಲಿಂಗ್ ಮಾಡುತ್ತಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

https://www.instagram.com/reel/CohoXopjt-Z/?igshid=YmMyMTA2M2Y=

ಅಜ್ಜಿ ಸಿಕ್ಕಾಪಟ್ಟೆ ಪ್ರಾಕ್ಟೀಸ್ ಮಾಡಿರಬೇಕು. ಇಷ್ಟೊಂದು ಕಠಿಣವಾದ ಕಾರ್ಯವನ್ನು ಸುಲಭವಾಗಿ ಮಾಡಿದ್ದಾರೆ ಅಂದ್ರೆ ಭೇಷ್!!. ಸದ್ಯ ಅಜ್ಜಿಯ ಸಾಹಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಚ್ಚರಿಯಿಂದ ಸೋಷಿಯಲ್ಸ್ ವಿಡಿಯೋ ನೋಡುತ್ತಿದ್ದಾರೆ.