Home Education School Bag: 1-10 ಕ್ಲಾಸ್‌ ವಿದ್ಯಾರ್ಥಿಗಳ ಸ್ಕೂಲ್‌ ಬ್ಯಾಗ್‌ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ...

School Bag: 1-10 ಕ್ಲಾಸ್‌ ವಿದ್ಯಾರ್ಥಿಗಳ ಸ್ಕೂಲ್‌ ಬ್ಯಾಗ್‌ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಆದೇಶ! ಎಷ್ಟನೇ ಕ್ಲಾಸ್‌ಗೆ ಎಷ್ಟು ತೂಕದ ಶಾಲಾ ಬ್ಯಾಗ್‌? ಇಲ್ಲಿದೆ ಸಂಪೂರ್ಣ ವಿವರ

School bag
Image source:Times of India

Hindu neighbor gifts plot of land

Hindu neighbour gifts land to Muslim journalist

School bag : ವಿದ್ಯಾರ್ಥಿಗಳಿಗೊಂದು ಸಿಹಿಸುದ್ದಿಯೊಂದು ಇಲ್ಲಿದೆ. ಅದೇನೆಂದರೆ ನಿಮ್ಮ ಹೆಗಲ ಮೇಲಿನ ಹೊರೆ ಇನ್ನು ಕಮ್ಮಿಯಾಗಲಿದೆ. ಹೌದು, 1ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸ್ಕೂಲ್‌ ಬ್ಯಾಗ್‌ (Students School Bag)ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಈ ಬಗ್ಗೆ ಸರಕಾರವು 2019ರಲ್ಲಿಯೇ ಬ್ಯಾಗ್‌ ತೂಕವನ್ನು ನಿಗದಿ ಮಾಡಿತ್ತು. ಆದರೂ ಇದು ಆಗಿರಲಿಲ್ಲ. ಆದರೆ ಈ ಬಾರಿಯ ಶೈಕ್ಷಣಿಕ ವರ್ಷಾರಂಭ ಹಿನ್ನೆಲೆಯಲ್ಲಿ ʼಶಾಲಾ ಬ್ಯಾಗ್‌ ಹೊರೆ ತಗ್ಗಿಸುವಂತೆʼ ಕಡ್ಡಾಯವಾಗಿ ಸುತ್ತೋಲೆಯೊಂದನ್ನು ಶಿಕ್ಷಣ ಇಲಾಖೆ (School Education Department) ಹೊರಡಿಸಿದೆ.

ಮೂಳೆ ತಜ್ಞರು ಶಿಫಾರಸು ಮಾಡಿರುವಂತೆ 1-10ನೇ ಕ್ಲಾಸ್‌ ಮಕ್ಕಳ ಬ್ಯಾಗ್‌ ತೂಕ ವಿದ್ಯಾರ್ಥಿಗಳ ದೇಹ ತೂಕದ ಶೇ.10ರಿಂದ 15ರಷ್ಟು ಮಾತ್ರ ಇರಬೇಕು ಎಂದು ಹೇಳಿದೆ. ಇಷ್ಟು ತೂಕವನ್ನು ಮಾತ್ರ ವಿದ್ಯಾರ್ಥಿಗಳು ಅವರ ದೇಹ ತೂಕಕ್ಕಿಂತ ಹೊರಬಹುದು ಎಂದು ಮೂಳೆ ತಜ್ಞರು ಶಿಫಾರಸು ಮಾಡಿದ್ದಾರೆ. ಹಾಗಾಗಿ ರಾಜ್ಯಾದ್ಯಂತ ಸರಕಾರಿ, ಅನುದಾನಿತ ಹಾಗೂ ಅನುದಾನರಹಿತ ಎಲ್ಲಾ ಶಾಲೆಗಳಲ್ಲಿ 1-10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುವ ಎಲ್ಲಾ ವಿದ್ಯಾರ್ಥಿಗಳ ಬ್ಯಾಗ್‌ ಹೊರೆ ಕಡಿಮೆ ಮಾಡಲು ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ಸೂಚಿಸಿದೆ.

ವಿದ್ಯಾರ್ಥಿಯ ಶಾಲಾ ಬ್ಯಾಗ್‌ ತೂಕ ಈ ರೀತಿ ಇದೆ.
1 -2 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 1.5 ರಿಂದ 2 ಕೆಜಿ
3 -5 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 2 ರಿಂದ 3 ಕೆಜಿ
6 -8 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 3 ರಿಂದ 5 ಕೆಜಿ
9 -10 ನೇ ತರಗತಿ ಮಕ್ಕಳಿಗೆ ಶಾಲಾ ಬ್ಯಾಗ್ ತೂಕ 4 ರಿಂದ 5 ಕೆಜಿ

ಇಷ್ಟು ಮಾತ್ರವಲ್ಲದೆ ಶಿಕ್ಷಣ ಇಲಾಖೆ ಅತಿಯಾದ ಶಾಲಾಬ್ಯಾಗ್‌ ಹೊರೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಕೂಡಾ ಸೂಚಿಸಿದೆ.

ಇದನ್ನೂ ಓದಿ: ಈ ರಾಶಿಯವರಿಗೆ ಇಂದು ಹಣಕಾಸಿನ ವಿಚಾರದಲ್ಲಿ ಕೈ ಸುಡುವ ಸಂಭವ