Home Education Teachers vote rights : ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿಗ್ ಶಾಕ್- ಈ ನಿಯಮಗಳಲೆಲ್ಲ ಆಗಲಿದೆ...

Teachers vote rights : ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಬಿಗ್ ಶಾಕ್- ಈ ನಿಯಮಗಳಲೆಲ್ಲ ಆಗಲಿದೆ ಮಹತ್ವದ ಬದಲಾವಣೆ

Teachers vote rights

Hindu neighbor gifts plot of land

Hindu neighbour gifts land to Muslim journalist

Teachers vote rights : ರಾಜ್ಯ ವಿಧಾನಪರಿಷತ್ ನಲ್ಲಿ 7 ಶಿಕ್ಷಕರ ಕ್ಷೇತ್ರವಿದ್ದರು ಕೂಡ ಪ್ರಾಥಮಿಕ ಶಾಲೆಗಳ ಶಿಕ್ಷಕರಿಗೆ ಮಾತ್ರ ಶಿಕ್ಷಕರ ಕ್ಷೇತ್ರದಲ್ಲೇ ಮತದಾನದ( Teachers vote rights ) ಹಕ್ಕಿಲ್ಲ ಎನ್ನಲಾಗಿದೆ. ಕರ್ನಾಟಕದ ಜೊತೆಗೆ ದೇಶದಲ್ಲಿ ವಿಧಾನಪರಿಷತ್ ಅಸ್ತಿತ್ವದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ ಶಿಕ್ಷಕರ ಕ್ಷೇತ್ರ ಎಂದಿದ್ದರೂ ಕೂಡ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ.

ರಾಜ್ಯದ ಸುಮಾರು 7 ಶಿಕ್ಷಕರ ಕ್ಷೇತ್ರದಲ್ಲಿ ಅಂದಾಜು 4 ಲಕ್ಷ ಶಿಕ್ಷಕರಿಗೆ ಮತದಾನದ ಹಕ್ಕು ಇರುವುದಿಲ್ಲ. ವಿಧಾನಪರಿಷತ್ ನಲ್ಲಿ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಆರಂಭಿಸಿದ ಸಂದರ್ಭದಲ್ಲಿ ಪದವೀಧರ ಮತದಾರರನ್ನು ಮಾತ್ರ ಪರಿಗಣಿಸುವ ನಿಯಮ ಜಾರಿಯಲ್ಲಿದೆ. ಶಿಕ್ಷಕರ ಕ್ಷೇತ್ರದಲ್ಲಿ ಪ್ರೌಢಶಾಲೆ ಶಿಕ್ಷಕರು, ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು, ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳ ಅಧ್ಯಾಪಕರು, ಪ್ರಾಧ್ಯಾಪಕರಿಗೆ ಮತದಾನ ಮಾಡುವ ಅವಕಾಶವಿದೆ. ಆದರೆ ಒಂದರಿಂದ ಏಳನೇ ತರಗತಿಯ ಪ್ರಾಥಮಿಕ ಶಾಲೆ ಶಿಕ್ಷಕರನ್ನು ಮತದಾನದ ಹಕ್ಕಿನಿಂದ ವಂಚಿತರನ್ನಾಗಿ ಮಾಡಲಾಗಿದೆ.

ಈ ಹಿಂದೆ ಎಸ್.ಎಸ್.ಎಲ್.ಸಿ., ಟಿಸಿಹೆಚ್ ಆದ ಅಭ್ಯರ್ಥಿಗಳು ಪ್ರಾಥಮಿಕ ಶಾಲೆಗಳಿಗೆ ಶಿಕ್ಷಕರಾಗುತ್ತಿದ್ದರು. ಇದರಿಂದಾಗಿ ಇವರಿಗೆ ಮತದಾನದ ಹಕ್ಕನ್ನು ನಿರಾಕರಿಸಲಾಗಿತ್ತು. ಪ್ರಾಥಮಿಕ ಶಾಲೆ ಶಿಕ್ಷಕರನ್ನು ಶಿಕ್ಷಕರ ಕ್ಷೇತ್ರಕ್ಕೆ ಪರಿಗಣಿಸದಿರುವುದು ಸರಿಯಲ್ಲ. ಈ ನಿಯಮಗಳಲ್ಲಿ ಬದಲಾವಣೆ ತರಬೇಕಾಗಿದ್ದು, 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ನೀಡಿರುವಾಗ ವಿಧಾನಪರಿಷತ್ ನಲ್ಲಿ ಶಿಕ್ಷಕರನ್ನೇ ಪ್ರತಿನಿಧಿಸುವ ಕ್ಷೇತ್ರಕ್ಕೆ ಪ್ರಾಥಮಿಕ ಶಾಲೆ ಶಿಕ್ಷಕರು ಮತದಾನದಿಂದ ವಂಚಿತರಾಗಿರುವುದು ಸರಿಯಾದ ಕ್ರಮವಲ್ಲ. ಹೀಗಾಗಿ, ಮತದಾನದ ಹಕ್ಕು ನೀಡುವ ದಿಸೆಯಲ್ಲಿ ನಿಯಮಗಳಿಗೆ ಬದಲಾವಣೆ ತರಬೇಕೆಂಬ ಮನವಿ ಜೋರಾಗಿ ಕೇಳುತ್ತಿದೆ.

ಇದನ್ನೂ ಓದಿ: Many Ration Cards Were Cancelled: ರೇಷನ್ ಕಾರ್ಡ್’ದಾರರಿಗೆ ಆಹಾರ ಇಲಾಖೆಯಿಂದ ಬಂತೊಂದು ಕಡೆಯ ಖಡಕ್ ಎಚ್ಚರಿಕೆ – ಇದನ್ನು ಪಾಲಿಸದಿದ್ದರೆ ಕಾರ್ಡ್ ಕ್ಯಾನ್ಸಲ್ ಆಗೋದು ಪಕ್ಕಾ !!