Ration Cards Were Cancelled: ರೇಷನ್ ಕಾರ್ಡ್’ದಾರರಿಗೆ ಆಹಾರ ಇಲಾಖೆಯಿಂದ ಬಂತೊಂದು ಕಡೆಯ ಖಡಕ್ ಎಚ್ಚರಿಕೆ – ಇದನ್ನು ಪಾಲಿಸದಿದ್ದರೆ ಕಾರ್ಡ್ ಕ್ಯಾನ್ಸಲ್ ಆಗೋದು ಪಕ್ಕಾ !!

Karnataka news warning from food department to those who are not getting ration but only using for government facilities

Food department warning  : ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಜಾರಿಯಾದ ಬಳಿಕ ಬಿಪಿಎಲ್‌ ಕಾರ್ಡ್‌ (BPL Card Holder) ಹೊಂದಿರುವವರ ಸಂಖ್ಯೆ ಹೆಚ್ಚಾಗಿದೆ. ಬಡತನ ರೇಖೆಗಿಂತ ಕೆಳಗಿರುವ (BPL )ಕಾರ್ಡ್ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಈ ರೇಷನ್ ಕಾರ್ಡ್ (Ration Card) ಮೂಲಕ ಬಿಪಿಎಲ್‌ ಕಾರ್ಡ್ ಅನ್ನಭಾಗ್ಯ ಮತ್ತು ಗೃಹ ಲಕ್ಷ್ಮಿಯಂತಹ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತದೆ.

ಕೇವಲ ಸರಕಾರಿ ಸೌಲಭ್ಯಗಳು, ಆರೋಗ್ಯ ಸಂಬಂಧಿ ಶಸ್ತ್ರ ಚಿಕಿತ್ಸೆ ಪಡೆಯುವ ಸಲುವಾಗಿ ಸಾವಿರಾರು ಮಂದಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದು, ಇವರಿಗೆ ಪಡಿತರ ಪದಾರ್ಥದ ಅವಶ್ಯಕತೆಯಿಲ್ಲ. ಈಗ ಹೆಚ್ಚಿನವರಿಗೆ ನ್ಯಾಯಬೆಲೆ ಅಂಗಡಿಗೆ ಹೋಗುವ ವ್ಯವಧಾನವಿಲ್ಲ. ಹೀಗಾಗಿ, ಸತತ 6 ತಿಂಗಳು ಪಡಿತರ ಪಡೆಯದಿದ್ದರೆ ಅವರ ಹೆಸರಿನಲ್ಲಿರುವ ಪಡಿತರ ಚೀಟಿಯನ್ನೇ ರದ್ದು ಮಾಡಲಾಗುವ (Many Ration Cards Were Cancelled)ಕುರಿತು ಆಹಾರ ಇಲಾಖೆ ಎಚ್ಚರಿಕೆ(Food department warning )ನೀಡಿದೆ.

ಸತತವಾಗಿ ಆರು ತಿಂಗಳಿಂದ ಪಡಿತರ ಪದಾರ್ಥ ಪಡೆಯದಿರುವವರಲ್ಲಿ ಚಾ.ನಗರ ತಾಲೂಕಿನಲ್ಲಿ2069 ಕಾರ್ಡುದಾರರು, ಗುಂಡ್ಲುಪೇಟೆ ತಾಲೂಕಿನಲ್ಲಿ 1671 ಮಂದಿ, ಕೊಳ್ಳೇಗಾಲ ತಾಲೂಕಿನಲ್ಲಿ 1493 ಮಂದಿ, ಹನೂರು ತಾಲೂಕಿನಲ್ಲಿ 1741 ಹಾಗೂ ಯಳಂದೂರು ತಾಲೂಕಿನಲ್ಲಿ 590 ಮಂದಿ ಕಾರ್ಡುದಾರರಿದ್ದಾರೆ. ಸತತ ಆರು ತಿಂಗಳ ಕಾಲ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪದಾರ್ಥಗಳನ್ನು ಸ್ವೀಕರಿಸದೆ ಇದ್ದಲ್ಲಿ ಅಂತಹವರ ಪಡಿತರ ಚೀಟಿಯನ್ನೇ ರದ್ದು ಮಾಡಲಾಗುತ್ತದೆ.

ಇದೀಗ ಅಂಥಹವರಿಗೆ ಅಂತಿಮ ಎಚ್ಚರಿಕೆಯನ್ನು ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಜಿಲ್ಲೆಯಲ್ಲಿ ಕಳೆದ 6 ತಿಂಗಳಿಂದ ಸತತವಾಗಿ 7568 ಮಂದಿ ಪಡಿತರ ಪದಾರ್ಥಗಳನ್ನು ಪಡೆಯದಿರಲು ಕಾರಣಗಳೇನು ಎಂಬುದು ತಿಳಿದುಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಪಡಿತರ ಚೀಟಿದಾರರು ಮರಣ ಹೊಂದಿದ್ದಾರೆಯೇ?? ಈ ಮಾಹಿತಿಗಳನ್ನು ಕಲೆ ಹಾಕಿ, ರಾಜ್ಯ ಮಟ್ಟಕ್ಕೆ ಕಳುಹಿಸಲಾಗುತ್ತದೆ. ಸೂಕ್ತ ಮಾಹಿತಿ ಆಧರಿಸಿ ಯಾವ್ಯಾವ ಪಡಿತರ ಚೀಟಿಗಳನ್ನು ರದ್ದು ಮಾಡಬೇಕು ಎಂದು ತೀರ್ಮಾನ ಕೈಗೊಳ್ಳಲಾಗುತ್ತದೆ. ಮುಂದಿನ ತಿಂಗಳು ಪಡಿತರ ಪದಾರ್ಥ ಪಡೆಯದಿದ್ದರೆ ಇಂತಹವರ ರೇಷನ್‌ ಕಾರ್ಡ್‌ ರದ್ದುಗೊಳ್ಳಲಿದ್ದು, ಪಡಿತರ ಪದಾರ್ಥವಷ್ಟೇ ಅಲ್ಲದೇ, ರೇಷನ್‌ ಕಾರ್ಡ್‌ ಮೂಲಕ ದೊರೆಯುವ ಸರಕಾರದ ಇನ್ನೂ ಯಾವುದೇ ಸೌಲಭ್ಯ ದೊರೆಯುವುದಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: Harrasment Case: ಹೋಟೆಲ್’ನ 4ನೇ ಮಹಡಿಯಲ್ಲಿ ತಂಗಿದ್ದ ಹುಡುಗಿ- ಪೈಪ್ ಮೂಲಕ ಮೇಲೇರಿ ‘ನನ್ನೊಂದಿಗೆ ಮಲಗು’ ಎಂದು ಪೀಡಿಸಿದ ಕಾಮುಕ

Leave A Reply

Your email address will not be published.