Home daily horoscope ಬಂಟ್ವಾಳ | ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಗರಿಸಿದ ಕಳ್ಳರು

ಬಂಟ್ವಾಳ | ಅಡ್ರೆಸ್ ಕೇಳುವ ನೆಪದಲ್ಲಿ ಮಹಿಳೆಯ ಕುತ್ತಿಗೆಯಿಂದ ಕರಿಮಣಿ ಸರ ಎಗರಿಸಿದ ಕಳ್ಳರು

Hindu neighbor gifts plot of land

Hindu neighbour gifts land to Muslim journalist

ಬಂಟ್ವಾಳ:ಇತ್ತೀಚಿಗೆ ಕಳ್ಳರ ಹಾವಳಿ ಅಧಿಕವಾಗಿದ್ದು ಒಬ್ಬಂಟಿಯಾಗಿ ಓಡಾಡೋದು ಕಷ್ಟ-ಕರವಾಗಿದೆ.ಹೀಗಿಯೇ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ದಾರಿ ಕೇಳುವ ನೆಪದಲ್ಲಿ ಮಹಿಳೆಯನ್ನು ಪುಸಲಾಯಿಸಿ ಬಳಿಕ ಮಾಂಗಲ್ಯ ಸರ ಅಪಹರಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಸೆ.9 ರಂದು ಬಂಟ್ವಾಳದ ಸಜಿಪಮೂಡ ಗ್ರಾಮದ ಮಾರ್ನಬೈಲು ಸಮೀಪ ಈ ಘಟನೆ ನಡೆದಿದ್ದು,ವತ್ಸಲಾ ನಾರಾಯಣ ಎಂಬುವವರು ಮೋಸದ ಕೃತ್ಯಕ್ಕೆ ಒಳಗಾಗಿದ್ದವರಾಗಿದ್ದಾರೆ.

ಬೈಕ್ ನಲ್ಲಿ ಬಂದ ಇಬ್ಬರು ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ಎಂಬ ಮಹಿಳೆಯನ್ನು ನಿಲ್ಲಿಸಿ ದಾರಿ ಕೇಳಿದ್ದಾರೆ. ಬಳಿಕ ಮಹಿಳೆ ವಿಳಾಸ ಹೇಳುವ ಸಂದರ್ಭ ಕರಿಮಣಿ ಸರವನ್ನು ಎಳೆದು ಪರಾರಿಯಾಗಿದ್ದಾರೆ.

ಮಾರ್ನಬೈಲು ಬೊಳ್ಳಾಯಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವತ್ಸಲಾ ನಾರಾಯಣ ಎಂಬವರ ಬಳಿ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಈ ಕೃತ್ಯವೆಸಗಿದ್ದು, ಸುಮಾರು 12 ತೂಕದ ಕರಿಮಣಿ ಸರ ಕದ್ದೊಯ್ದಿದ್ದಾರೆ.

ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.