Home daily horoscope Year 2024 Baba Vanga Predictions: ಅಬ್ಬಬ್ಬಾ.. 2024ರಲ್ಲಿ ಇಷ್ಟೆಲ್ಲಾ ಅವಘಡಗಳು ಸಂಭವಿಸುತ್ತಾ ?! ಇಲ್ಲಿದೆ...

Year 2024 Baba Vanga Predictions: ಅಬ್ಬಬ್ಬಾ.. 2024ರಲ್ಲಿ ಇಷ್ಟೆಲ್ಲಾ ಅವಘಡಗಳು ಸಂಭವಿಸುತ್ತಾ ?! ಇಲ್ಲಿದೆ ನೋಡಿ ಬಾಬಾ ವಂಗಾ ನುಡಿದ 7 ಬೆಚ್ಚಿಬೀಳಿಸುವ ಭವಿಷ್ಯವಾಣಿಗಳು!

Year 2024 Predictions
Image source: Samaa tv

Hindu neighbor gifts plot of land

Hindu neighbour gifts land to Muslim journalist

Year 2024 Predictions: ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ (Baba Vanga)ನುಡಿದಿರುವ ಭವಿಷ್ಯಗಳು ಭಾರೀ ಚರ್ಚೆಗೆ ಕಾರಣವಾಗಿದೆ. ಇಡೀ ಜಗತ್ತಿನ ನೂರಾರು ವರ್ಷಗಳ ಆಗು ಹೋಗುಗಳ ಬಗ್ಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ (Baba Vanga Prediction)ಪ್ರಕಾರ, 2023ರಲ್ಲಿ ಭೂಮಿಯ ಕಕ್ಷೆಯು ಬದಲಾಗಲಿದ್ದು, 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರಂತೆ.ಯುರೋಪ್ ನಲ್ಲಿ 2043 ರಲ್ಲಿ ಮುಸ್ಲಿಮರು ಆಡಳಿತ ನಡೆಸುತ್ತಾರೆ. 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ.

ಹೊಸ ವರ್ಷ ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಇದೀಗ ಹೊಸ ವರ್ಷದಲ್ಲಿ ಏನೆಲ್ಲ ಬದಲಾವಣೆ ಆಗಲಿದೆ ಎಂಬ ಬಾಬಾ ವಂಗ ಅವರ ಭವಿಷ್ಯವಾಣಿ( Year 2024 Predictions) ಚರ್ಚೆಗೆ ಕಾರಣವಾಗಿದೆ.
* ಹವಾಮಾನ ವಿಪತ್ತು
ಬಾಬಾ ವಂಗಾ ಅವರು ಮುಂಬರುವ ವರ್ಷಗಳಲ್ಲಿ ನೈಸರ್ಗಿಕ ವಿಕೋಪ ಹೆಚ್ಚಾಗುವ ಸಾಧ್ಯತೆ ಬಗ್ಗೆ ಮಾತನಾಡಿದ್ದಾರೆ. ಹವಾಮಾನದ ಜೊತೆಗೆ ವಿಕಿರಣದ ಮಟ್ಟ ಕೂಡ ಹೆಚ್ಚಾಗುತ್ತದೆ.
* ಯುರೋಪ್ನ ಭಯೋತ್ಪಾದನೆ
ಬಾಬಾ ವಂಗ ಯುರೋಪಿನಾದ್ಯಂತ ಭಯೋತ್ಪಾದನೆಯ ಹೆಚ್ಚಳದ ಕುರಿತು ಭವಿಷ್ಯ ನುಡಿದಿದ್ದಾರೆ. ಮುಂಬರುವ ವರ್ಷದಲ್ಲಿ “ಪ್ರಮುಖ ದೇಶ” ಜೈವಿಕ ಶಸ್ತ್ರಾಸ್ತ್ರಗಳ ಪರೀಕ್ಷೆ ನಡೆಸಬಹುದು ಇಲ್ಲವೇ ದಾಳಿಯನ್ನು ಎದುರಿಸಬಹುದು ಎಂದು ತಿಳಿಸಿದ್ದಾರೆ.

* ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ
ಬಾಬಾ ವಂಗಾ ಅವರು ತಮ್ಮ ಭವಿಷ್ಯವಾಣಿ ಅನುಸಾರ, ಕ್ಯಾನ್ಸರ್ ಮತ್ತು ಆಲ್ಝೈಮರ್ನ ಕಾಯಿಲೆಗೆ ಚಿಕಿತ್ಸೆಗಳ ಆವಿಷ್ಕಾರ ನಡೆಯಲಿದೆ.

* ಪುಟಿನ್ ಹತ್ಯೆ
2024 ರಲ್ಲಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಸಾವಿಗೆ ರಷ್ಯಾದ ಪ್ರಜೆ ಹೊಣೆಗಾರರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

* ಆರ್ಥಿಕ ಬಿಕ್ಕಟ್ಟು
ಬಾಬಾ ವಾಂಗಾ ಅವರ ಭವಿಷ್ಯವಾಣಿಗಳು ಹೆಚ್ಚುತ್ತಿರುವ ಸಾಲ, ಹೆಚ್ಚುತ್ತಿರುವ ಜಾಗತಿಕ ಉದ್ವಿಗ್ನತೆ ಮತ್ತು ಪಶ್ಚಿಮದಿಂದ ಪೂರ್ವಕ್ಕೆ ಅಧಿಕಾರದ ಬದಲಾವಣೆಯಿಂದಾಗಿ ಆರ್ಥಿಕ ಬಿಕ್ಕಟ್ಟು ಹೆಚ್ಚಾಗಲಿದೆ.

* ಸೈಬರ್ ದಾಳಿಗಳು
ಹ್ಯಾಕರ್‌ಗಳು ಪವರ್ ಗ್ರಿಡ್‌ಗಳು ಮತ್ತು ನೀರಿನ ಸಂಸ್ಕರಣಾ ಸೌಲಭ್ಯಗಳಲ್ಲಿ ನಿರ್ಣಾಯಕ ಮೂಲಸೌಕರ್ಯಗಳನ್ನು ಹೆಚ್ಚು ಗುರಿಯಾಗಿಸಲಿದ್ದು,ಇದು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನು ಹೆಚ್ಚಿಸುವ ಬಗ್ಗೆ ಭವಿಷ್ಯ ನುಡಿದಿದ್ದಾರೆ.

* ತಾಂತ್ರಿಕ ಕ್ರಾಂತಿ
ಕ್ವಾಂಟಮ್ ಕಂಪ್ಯೂಟಿಂಗ್‌ನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಿದ್ದು, ಸಾಂಪ್ರದಾಯಿಕ ಕಂಪ್ಯೂಟರ್‌ಗಳಿಗಿಂತ ವೇಗವಾಗಿ ಮಾಹಿತಿಯನ್ನು ಸಕ್ರಿಯಗೊಳಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಇದರ ಜೊತೆಗೆ AI ಬಳಕೆ ಹೆಚ್ಚಾಗುವುದರ ಕುರಿತು ಭವಿಷ್ಯ ನುಡಿದಿದ್ದಾರೆ.

ಇದನ್ನೂ ಓದಿ: BMTC: ಈ ಭಾಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ – ಬಸ್ ಪಾಸ್ ವಿಚಾರದಲ್ಲಿ ಹೊಸ ಘೋಷಣೆ ಹೊರಡಿಸಿದ ಸಾರಿಗೆ ಸಂಸ್ಥೆ