Home Crime Belagavi: ಹುಟ್ಟಿದ ನಾಲ್ಕನೇ ಮಗುವೂ ಹೆಣ್ಣು: ಕತ್ತು ಹಿಸುಕಿ ಕೊಂದೇ ಬಿಟ್ಟ ತಾಯಿ!

Belagavi: ಹುಟ್ಟಿದ ನಾಲ್ಕನೇ ಮಗುವೂ ಹೆಣ್ಣು: ಕತ್ತು ಹಿಸುಕಿ ಕೊಂದೇ ಬಿಟ್ಟ ತಾಯಿ!

Hindu neighbor gifts plot of land

Hindu neighbour gifts land to Muslim journalist

Belagavi: ಜನಿಸಿದ ನಾಲ್ಕನೇ ಮಗು ಕೂಡ ಹೆಣ್ಣಾಯಿತು (Girl) ಎಂದು ತಾಯಿಯೊಬ್ಬಳು ನೀಚ ಕೃತ್ಯ ಎಸಗಿದ ಘಟನೆ ಬೆಳಗಾವಿ (Belagavi) ಜಿಲ್ಲೆಯ ರಾಮದುರ್ಗ (Ramdurg) ತಾಲೂಕಿನ ಹಿರೇಮುಲಂಗಿ ಗ್ರಾಮದಲ್ಲಿ ನಡೆದಿದೆ.

ಆರೋಪಿಯನ್ನು ಅಶ್ವಿನಿ ಹಳಕಟ್ಟಿ ಎಂದು ಗುರುತಿಸಲಾಗಿದೆ. ಈಕೆ ಹೆಣ್ಣುಮಗು ಜನಿಸಿದ್ದಕ್ಕೆ ಕತ್ತು ಹಿಸುಕಿ 3 ದಿನದ ಹಸುಗೂಸನ್ನು ಕ್ರೂರವಾಗಿ ಕೊಲೆ ಮಾಡಿದ್ದಾಳೆ.

ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಹಿರೇಮುಲಂಗಿ ಮೂಲದ ಅಶ್ವಿನಿ ಹಳಕಟ್ಟಿಗೆ ಈಗಾಗಲೇ ಮೂವರು ಹೆಣ್ಣುಮಕ್ಕಳಿದ್ದು ಗಂಡು ಮಗುವಿನ ನಿರೀಕ್ಷೆಯಲ್ಲಿದ್ದರು. ಆದರೆ ನ.23 ರಂದು ಮುದಕವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಶ್ವಿನಿ ಮತ್ತೆ ಹೆಣ್ಣು ಮಗುವಿಗೆ ಜನ್ಮನೀಡಿದ್ದಾಳೆ.ಮಗು ಜನಿಸಿದ ಮಾರನೇ ದಿನ ಅಶ್ವಿನಿ ತವರುಮನೆ ಹಿರೇಮುಲಂಗಿಗೆ ಬಂದಿದ್ದಾಳೆ. ಇಂದು ಬೆಳಗ್ಗೆ ತಾಯಿ ಹೊರ ಹೋದಾಗ ಹಸುಗೂಸಿನ ಕತ್ತು ಹಿಸುಕಿ ಅಶ್ವಿನಿ ಹತ್ಯೆ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಮಗು ಉಸಿರಾಡುತ್ತಿಲ್ಲ ಅಂತಾ ಹೈಡ್ರಾಮಾ ಸೃಷ್ಟಿಸಿದ್ದಾಳೆ. ಇದರಿಂದ ಗಾಬರಿಗೊಂಡ ಮನೆಮಂದಿ ಕೂಡಲೇ ಮಗುವನ್ನು ರಾಮದುರ್ಗ ತಾಲೂಕು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ವೈದ್ಯರು, ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಈ ವೇಳೆ ಅಶ್ವಿನಿಯ ನಾಟಕ ಬಯಲಾಗಿದೆ. ಇನ್ನು ಸ್ಥಳಕ್ಕೆ ರಾಮದುರ್ಗ ಡಿವೈಎಸ್‌ಪಿ ಚಿದಂಬರ ಮಡಿವಾಳ‌ರ್ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸುರೇಬಾನ ಪೊಲೀಸ್‌ ಠಾಣೆಯಲ್ಲಿ ತಾಯಿ ವಿರುದ್ಧ ಕೊಲೆ ಕೇಸ್‌ ದಾಖಲಾಗಿದ್ದು, ಬಂಧಿಸಿದ್ದಾರೆ.