Home Crime Shimoga: ರಸ್ತೆ ದಾಟುವ ಸಂದರ್ಭ ಅಪಘಾತ; ಪರೀಕ್ಷೆ ಬರೆಯಬೇಕಾಗಿದ್ದ SSLC ವಿದ್ಯಾರ್ಥಿನಿ ಸಾವು

Shimoga: ರಸ್ತೆ ದಾಟುವ ಸಂದರ್ಭ ಅಪಘಾತ; ಪರೀಕ್ಷೆ ಬರೆಯಬೇಕಾಗಿದ್ದ SSLC ವಿದ್ಯಾರ್ಥಿನಿ ಸಾವು

Shimoga

Hindu neighbor gifts plot of land

Hindu neighbour gifts land to Muslim journalist

Shimoga: ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿಯೋರ್ವರು ಅಪಘಾತದಲ್ಲಿ ಸಾವನ್ನಪ್ಪಿದ ಘಟನೆಯ ನಡೆದಿದೆ. ಈ ಘಟನೆ ಶಿವಮೊಗ್ಗ ತಾಲೂಕಿನ ಮೂಡಲವಿಠಲಾಪುರದಲ್ಲಿ ನಡೆದಿದೆ.

ಇದನ್ನೂ ಓದಿ: Parliment Election: ಟಿಕೆಟ್ ಮಿಸ್ ಆಗಿದ್ದಕ್ಕೆ ತಮಿಳುನಾಡು ಸಂಸದ ವಿಷ ಕುಡಿದು ಆತ್ಮಹತ್ಯೆಗೆ ಯತ್ನ!!

ಜಂಬರಘಟ್ಟ ಗ್ರಾಮದ ನಿವಾಸಿ ಉಮ್ಮೆಕೂಲ್ಸುಂ (14) ಎಂಬ ವಿದ್ಯಾರ್ಥಿನಿಯೇ ಸಾವಿಗೀಡಾಗಿದ್ದಾಕೆ. ಈಕೆ ರಸ್ತೆ ದಾಟುವ ಸಂದರ್ಭದಲ್ಲಿ ಇನೋವಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವಿಗೀಡಾಗಿದ್ದಾಳೆ. ಈ ಘಟನೆ ಹೊಳೆಹೊನ್ನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Death News: ಹೊಲಕ್ಕೆ ಬಿದ್ದ ಬೆಂಕಿ ನಂದಿಸಲು ಹೋಗಿ ಮಹಿಳೆ ಆಗ್ನಿಗಾಹುತಿ

ಇನ್ನೊಂದು ಪ್ರತ್ಯೇಕ ಘಟನೆಯಲ್ಲಿ ಸಾಗರ ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಪರಶುರಾಮ್‌ (17) ಎಂಬ ಬಾಲಕ ಆನಂದಪುರದ ಸರಕಾರಿ ಪಬ್ಲಿಕ್‌ ಶಾಲೆಯಲ್ಲಿ ಓದುತ್ತಿದ್ದು, ನೇಣಿಗೆ ಶರಣಾಗಿದ್ದಾನೆ. ಈತ ತನ್ನ ಮನೆಯ ಹಿಂಭಾಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕಾರಣವೇನೆಂದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.