Home Crime Shocking news: 24 ವರ್ಷದಿಂದ ಮಗಳ ಮೇಲೆ ಅಪ್ಪನಿಂದ ನಿರಂತರ ಅತ್ಯಾಚಾರ – ಕಾಮುಕ...

Shocking news: 24 ವರ್ಷದಿಂದ ಮಗಳ ಮೇಲೆ ಅಪ್ಪನಿಂದ ನಿರಂತರ ಅತ್ಯಾಚಾರ – ಕಾಮುಕ ತಂದೆಯ ಕ್ರೌರ್ಯಕ್ಕೆ 7 ಮಕ್ಕಳು ಹೆತ್ತ ಮಗಳು !! ಯಪ್ಪಾ.. ಬೆಚ್ಚಿಬೀಳಿಸುತ್ತೆ ಪ್ರಕರಣ

Shocking news

Hindu neighbor gifts plot of land

Hindu neighbour gifts land to Muslim journalist

Shocking news: ಅಪ್ಪನಿಗೆ ಹೆಣ್ಣು ಮಕ್ಕಳೆಂದರೆ ಬಲು ಪ್ರೀತಿ, ಅಕ್ಕರೆ. ಆಕೆಗೆ ಏನೇ ಆದರೂ ಮನಸ್ಸು ತಂದೆಯ ಮನಸ್ಸು ಮಿಡಿಯುತ್ತದೆ. ಆಕೆಗೆ ಒಂಚೂರೂ ತೊಂದರೆಯಾಗದಂತೆ ಸದಾ ರಕ್ಷಕನಾಗಿರುತ್ತಾನೆ. ಆದರೆ ಇಲ್ಲಿ ಬೇಲಿಯೇ ಎದ್ದು ಹೊಲ ಮೆಯ್ದಂತಹ ಪ್ರಕರಣ ಬೆಳಕಿಗೆ ಬಂದಿದ್ದು ಇಡೀ ಘಟನೆಯ ವಿವರ ನಿಮ್ಮನ್ನು ಬೆಚ್ಚಿ ಬೀಳಿಸುತ್ತೆ.

ಹೌದು, ಆಸ್ಟ್ರಿಯಾದ ಆಮ್‌ಸ್ಟೆಟನ್‌ನ ಜೋಸೆಫ್ ಫ್ರಿಟ್ಜ್ಲ್ ತಂದೆಯೊಬ್ಬನ ಹೇಯಕೃತ್ಯ ಎದೆ ನಡುಗಿಸುತ್ತೆ. ತನ್ನ ಸ್ವಂತ ಮಗಳು ಎಲಿಸಬೆತ್ ಫ್ರಿಟ್ಜ್ಲ್ ಅನ್ನು ಒಟ್ಟು 24 ವರ್ಷಗಳ ಕಾಲ ಜೈಲಿನಲ್ಲಿ ಬಂಧಿಸಿ ಅತ್ಯಾಚಾರ (Rape) ಎಸಗಿದ್ದ. ಇಷ್ಟೇ ಅಲ್ಲದೆ ಏಳು ಮಕ್ಕಳಿಗೆ ಆಕೆ ಜನ್ಮ ನೀಡುವಂತೆ ಮಾಡಿದ್ದ ಪಿಶಾಚಿ ಈ ಜೋಸೆಫ್. ಆತ ತನ್ನ ಮಗಳಿಗೆ ಮಾಡಿದ ಕೆಲಸ ಕೇಳಿದ್ರೆ ನೀವು ಶಾಕ್ ಆಗ್ತಿರಿ.

ಇದನ್ನೂ ಓದಿ: Flight: ವಿಮಾನ ಟೇಕ್ ಆಫ್ ಆದಾಗ ಶೌಚಾಲಯಕ್ಕೆ ತೆರಳಿದ ಪ್ರಯಾಣಿಕ; ಬಾಗಿಲು ತೆರೆಯಲಾಗದೇ ಪರದಾಟ: ಮುಂದೇನಾಯ್ತು?!

ಏನಿದು ಪ್ರಕರಣ?

ಎಲಿಜಬೆತ್ (Elizabeth) 11 ವರ್ಷದವಳಿದ್ದಾಗಲೇ ಜೋಸೆಫ್’ಗೆ ತನ್ನ ಮಗಳ ಮೇಲೆ ಕಣ್ಣಿತ್ತು. ಆಗಿಂದಲೇ ಆಕೆ ತನ್ನ ಅಪ್ಪನಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಳು. ಇದೇ ಕಾರಣಕ್ಕೆ ಆಗ ಮನೆಯಿಂದ ಒಮ್ಮೆ ಓಡಿ ಹೋಗಿದ್ದಳು. ಇದ್ರಿಂದ ಮತ್ತಷ್ಟು ಕೋಪಗೊಂಡಿದ್ದ ಜೋಸೆಫ್, ನೆಲಮಾಳಿಗೆಯೊಂದನ್ನು ಸಿದ್ಧಪಡಿಸಿ ಎಲಿಜಬೆತ್ ಗೆ ಹದಿನೆಂಟು ವರ್ಷ ಆಗ್ತಿದ್ದಂತೆ, ನೆಲಮಾಳಿಗೆ ಬಾಗಿಲು ಜೋಡಿಸುವ ನೆಪದಲ್ಲಿ ಆಕೆಯನ್ನು ಅಲ್ಲಿಗೆ ಕರೆದುಕೊಂಡು ಹೋಖಿ ಬಾಯಿಗೆ ಬಟ್ಟೆ ತುಂಬಿ ನೆಲ ಮಾಳಿಗೆಯಲ್ಲಿ ಕೂಡಿ ಹಾಕಿದ್ದಾನೆ. ಅಲ್ಲಿಂದ ಇಪ್ಪನ್ನಾಲ್ಕು ವರ್ಷ ಎಲಿಜಬೆತ್ ಮೇಲೆ ನಿರಂತರ ಅತ್ಯಾಚಾರ ಎಸಗಿದ್ದಾನೆ. ಇದರಿಂದ ಎಲಿಜಬೆತ್ ಪಡಬಾರದ ಕಷ್ಟಪಟ್ಟಿದ್ದಾಳೆ.

ಎಲಿಜಬೆತ್ ಳನ್ನು ಕೂಡಿಹಾಕಿದ ಜೋಸೆಫ್, ಆಕೆ ಮನೆ ಬಿಟ್ಟು ಓಡಿ ಹೋಗಿದ್ದಾಳೆಂದು ಸುಳ್ಳು ಹೇಳಿ ಆಕೆ ಕೈನಿಂದ ಪತ್ರ ಬರೆಸಿದ್ದ. ಎಲ್ಲರೂ ನಂಬಿದ ಬಳಿಕ ಪ್ರತಿ ದಿನ ಮಗಳ ಮೇಲೆ ಜೋಸೆಫ್ ಅತ್ಯಾಚಾರ ಎಸಗಿದ್ದಾನೆ. ದಿನದಲ್ಲಿ ಮೂರ್ನಾಲ್ಕು ಬಾರಿಯೂ ಆಕೆಯ ಮೇಲೆರಗುತ್ತಿದ್ದ ಈ ಪಾಪಿ ಅಪ್ಪ. ತಂದೆ ಈ ಕ್ರೌರ್ಯಕ್ಕೆ ಎಲಿಜಬೆತ್ ಏಳು ಮಕ್ಕಳಿಗೆ ಜನ್ಮ ನೀಡಿದ್ದಳು. ಅದ್ರಲ್ಲಿ ಒಂದು ಮಗು ಹುಟ್ಟುತ್ತಲೇ ಸಾವನ್ನಪ್ಪಿತ್ತು. ಇನ್ನು ಮೂವರನ್ನು ಎಲಿಜಬೆತ್ ರೂಮಿನಲ್ಲಿಯೇ ಬಂಧಿ ಮಾಡಿದ್ದ. ಮತ್ತೆ ಮೂವರು ಮಕ್ಕಳನ್ನು ತನ್ನ ಹೆಂಡತಿಗೆ ನೀಡಿ ಮನೆ ಮುಂದೆ ಯಾರೋ ಈ ಮಕ್ಕಳನ್ನು ಬಿಟ್ಟು ಹೋಗಿದ್ದಾರೆಂದು ಸುಳ್ಳು ಹೇಳಿದ್ದ. ಈ ಜೋಸೆಫ್ ಎಷ್ಟ ವಿಕೃತಿ ಮೆರೆದಿದ್ದ ಅಂದರೆ ಎಲಿಜಬೆತ್ ಮಕ್ಕಳ ಮುಂದೆಯೇ ಮಗಳ ಮೇಲೆ ಜೋಸೆಫ್ ಅತ್ಯಾಚಾರ ಮಾಡುತ್ತಿದ್ದ.

ಪ್ರಕರಣ ಬೆಳಕಿಗೆ ಬಂದಿದ್ದೇಗೆ? 

2009 ರಲ್ಲಿ ಎಲಿಜಬೆತ್ಗೆ 42 ವರ್ಷ ಇರುವಾಗ ಆತನ ಕೃತ್ಯ ಬಯಲಾಗಿದೆ. ತಾನು ಮಗಳಿಗೆ ಅತ್ಯಾಚಾರ ಮಾಡಿ ಜನನಕ್ಕೆ ಕಾರಣವಾದ 19 ವರ್ಷದ ಮಗಳಿಗೆ ಗಂಭೀರ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ವೇಳೆ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಆಗ ಅನುಮಾನಗೊಂಡ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಪೊಲೀಸರು ಅನಾರೋಗ್ಯಕ್ಕೊಳಗಾದ ಹುಡುಗಿಯ ತಾಯಿಯನ್ನು ನೋಡಬೇಕೆಂದು ತಾಕೀತು ಮಾಡಿದ್ದಾರೆ. ಆಗ ಜೋಸೆಫ್ ನೆಲಮಾಳಿಗೆಯಲ್ಲಿ ಕೂಡಿಹಾಕಿದ್ದ ಮಗಳನ್ನು ಹೊರಗೆ ಕರೆ ತಂದಿದ್ದಾನೆ. ಆಗ ಎಲಿಜಬೆತ್ ಎಲ್ಲವನ್ನು ಹೇಳಿದ್ದು, ವಿಚಾರ ಕೇಳಿದ ಪೊಲೀಸರೇ ದಂಗಾಗಿ ಹೋಗಿದ್ದಾರೆ. ಬಳಿಕ ಪ್ರಕರಣ ದಾಖಲಿಸಿಕೊಂಡು ಜೋಸೆಫ್ ನನ್ನು ಪೊಲೀಸರು ಬಂಧಿಸಿದ್ದರು. ಎಲಿಜಬೆತ್, ಮಕ್ಕಳ ಜೊತೆ ಯಾರಿಗೂ ತಿಳಿಯದ ಹಳ್ಳಿಯೊಂದರಲ್ಲಿ ವಾಸ ಮಾಡ್ತಿದ್ದಾಳೆ