Home Crime Hubballi: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ಮೂರು ದಿನ ಮುನವಳ್ಳಿ ಬಂದ್‌,...

Hubballi: ನೇಹಾ ಕೊಲೆಗಾರ ಫಯಾಜ್‌ಗೆ 14 ದಿನ ನ್ಯಾಯಾಂಗ ಬಂಧನ; ಮೂರು ದಿನ ಮುನವಳ್ಳಿ ಬಂದ್‌, ಮುಸ್ಲಿಂ ಸಮುದಾಯ ಸಾಥ್‌

Hubballi

Hindu neighbor gifts plot of land

Hindu neighbour gifts land to Muslim journalist

Hubballi: ಹುಬ್ಬಳ್ಳಿಯ ನೇಹಾ ಹಿರೇಮಠ ಕಾಲೇಜು ವಿದ್ಯಾರ್ಥಿನಿಯನ್ನು ಹತ್ಯೆ ಮಾಡಿದ ಆರೋಪಿ ಫಯಾಜ್‌ನನ್ನು ಪೊಲೀಸರು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಇದನ್ನೂ ಓದಿ: Udupi: ಟಿಪ್ಪರ್‌ ಮತ್ತು ಬೈಕ್‌ ನಡುವೆ ಭೀಕರ ಅಪಘಾತ; ಬೈಕ್‌ ಸವಾರ ಸಾವು

ಪ್ರಹ್ಲಾದ್‌ ಜೋಶಿ, ಬಸವರಾಜ್‌ ಬೊಮ್ಮಾಯಿ ಮುಂತಾದವರು ನೇಹಾ ಕುಟುಂಬದವರನ್ನು ಭೇಟಿ ಆಗಿದ್ದು, ಸಮಾಧಾನ ಮಾಡಿದ್ದಾರೆ.

ನೇಹಾ ಹಿರೇಮಠ ಅವರ ಊರಾದ ಸವದತ್ತಿ ತಾಲೂಕಿನ ಮುನವಳ್ಳಿ ನಗರ ಉದ್ನಿಗ್ನಗೊಂಡಿದೆ. ಹಾಗೂ ಇಂದಿನಿಂದ ಮೂರು ದಿನಗಳ ಕಾಲ ನಗರ ಬಂದ್‌ಗೆ ಬಿಜೆಪಿ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿದೆ. ಹಂತಕ ಫಯಾಜ್‌ಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಹಿಂದೂ ಸಂಘಟನೆಗಳು, ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದು, ಈ ಪ್ರತಿಭಟನೆಗೆ ಮುಸ್ಲಿಂ ಸಮಾಜ ಬಾಂಧವರೂ ಸಾಥ್‌ ನೀಡಿದ್ದಾರೆ, ಹಾಗೂ ಕಠಿಣ ಶಿಕ್ಷೆ ವಿಧಿಸಬೇಕು ಎಂದ ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: Coffee Board Recruitment 2024: ಭಾರತೀಯ ಕಾಫಿ ಮಂಡಳಿಯಲ್ಲಿ ಉದ್ಯೋಗಕ್ಕೆ ಆಹ್ವಾನ, ಈಗಲೇ ಅರ್ಜಿ ಸಲ್ಲಿಸಿ

ಇತ್ತ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮತಾನಾಡುತ್ತಾ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ್‌ ಪ್ರತಿಕ್ರಿಯೆ ನೀಡಿದ್ದು, “ಕಾರ್ಪೋರೇಟರ್‌ ಮಗಳು ನೇಹಾ ಹತ್ಯೆ ಪ್ರಕರಣಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ. ಕೊಲೆಯಾದ ನೇಹಾ ಹಾಗೂ ಆರೋಪಿ ಫಯಾಜ್‌ ಪರಸ್ಪರ ಪ್ರೀತಿಸುತ್ತಿದ್ದರು. ನಂತರ ನೇಹಾ ಫಯಾಜ್‌ನಿಂದ ದೂರವಾಗಲು ಯತ್ನಿಸಿದ್ದಾಳೆ. ಇದರಿಂದ ಕೋಪಗೊಂಡ ಫಯಾಜ್‌ ಕೊಲೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಈ ಘಟನೆ ನಡೆದ ಸಂದರ್ಭ ಮಗಳ ಜೊತೆ ತಾಯಿ ಕೂಡಾ ಇದ್ದು, ನೇಹಾ ತಾಯಿಯನ್ನು ರಕ್ಷಣೆ ಮಾಡಲಾಗಿದೆ. ಇದರಲ್ಲಿ ಲವ್‌ ಜಿಹಾದ್‌ ಇಲ್ಲ. ನನ್ನನ್ನು ಬಿಟ್ಟು ಬೇರೆಯವನನ್ನು ಮದುವೆ ಮಾಡಿಕೊಳ್ತೀಯಾ ಅಂತ ಕೋಪದಲ್ಲಿ ಫಯಾಜ್‌ ಕೊಲೆ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುಲಾಗುತ್ತದೆ ಎಂದರು.