Home Crime Bengaluru Crime News: ಉಜ್ಬೇಕಿಸ್ತಾನ್ ಮಹಿಳೆಯ ಹತ್ಯೆ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು : ಹೋಟೆಲ್...

Bengaluru Crime News: ಉಜ್ಬೇಕಿಸ್ತಾನ್ ಮಹಿಳೆಯ ಹತ್ಯೆ ಪ್ರಕರಣ ಭೇದಿಸಿದ ಬೆಂಗಳೂರು ಪೊಲೀಸರು : ಹೋಟೆಲ್ ಸಿಬ್ಬಂದಿಯಿಂದಲೇ ಕುಕೃತ್ಯ

Bengaluru Crime News

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ಸ್ಯಾಂಕಿ ರಸ್ತೆಯಲ್ಲಿರುವ ಜಗದೀಶ್ ಹೋಟೆಲ್ನಲ್ಲಿ 27 ವರ್ಷದ ಉಜ್ಬೇಕಿಸ್ತಾನ್ ಮಹಿಳೆಯೊಬ್ಬಳು ತನ್ನ ಕೋಣೆಯೊಳಗೆ ಸಾವನ್ನಪ್ಪಿದ ಪ್ರಕರಣವನ್ನು ಬೆನ್ನು ಹತ್ತಿದ್ದ ಬೆಂಗಳೂರು ಪೊಲೀಸರು ಇದೀಗ ದುಷ್ಕರ್ಮಿಗಳನ್ನ ಪತ್ತೆ ಹಚ್ಚಿದ್ದಾರೆ.

ಇದನ್ನೂ ಓದಿ: Fire Incident: ಕೆನಡಾದಲ್ಲಿ ಭಾರತೀಯ ಮೂಲದ ದಂಪತಿ, ಮಗಳು ಸೇರಿ ಮೂವರು ಸಜೀವ ದಹನ

ಮಹಿಳೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಹೋಟೆಲ್ನ ಇಬ್ಬರು ಹೌಸ್ ಕೀಪಿಂಗ್ ಸಿಬ್ಬಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: 5-Day Banking: ಬ್ಯಾಂಕ್‌ಗಳಲ್ಲಿ 5 ದಿನ ಕೆಲಸ: ಹಣಕಾಸು ಸಚಿವರಿಂದ ಮಹತ್ವದ ಹೇಳಿಕೆ; ವದಂತಿಗಳಿಗೆ ಗಮನ ಕೊಡಬೇಡಿ

ಜರೀನಾ ಉತ್ಕಿರೋವ್ನಾ ಎಂದು ಗುರುತಿಸಲಾದ ವಿದೇಶಿ ಮಹಿಳೆ ಸಾಕಷ್ಟು ಹಣವನ್ನು ಹೊಂದಿದ್ದು, ಅವಳನ್ನು ದರೋಡೆ ಮಾಡುವುದರಿಂದ ತಾನು ತಕ್ಷಣವೇ ಶ್ರೀಮಂತರಾಗಬಹುದು ಎಂದು ಆರೋಪಿಗಳು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಹೋಟೆಲ್ ರೂಮ್ನಲ್ಲಿ ಜರೀನಾ , ಮಾರ್ಚ್ 13ರ ರಾತ್ರಿ ಮುಖದ ಮೇಲೆ ಗಾಯಗಳು ಮತ್ತು ಮೂಗಿನಿಂದ ರಕ್ತಸ್ರಾವದೊಂದಿಗೆ ಶವವಾಗಿ ಪತ್ತೆಯಾಗಿದ್ದರು . ಈ ವೇಳೆ ಆಕೆಯ ಐಫೋನ್ ಮತ್ತು ಹಣ ರೂಮ್ ನಿಂದ ನಾಪತ್ತೆಯಾಗಿದ್ದವು.

ತನಿಖೆಯ ನಂತರ , ನಗರ ಪೊಲೀಸರು 22 ವರ್ಷದ ಅಮೃತ್ ಸೋನಾ ಮತ್ತು 26 ವರ್ಷದ ರಾಬರ್ಟ್ ಎಂಬುವರನ್ನು ಬಂಧಿಸಿದ್ದಾರೆ. ಇಬ್ಬರೂ ಅಸ್ಸಾಂ ಮೂಲದವರಾಗಿದ್ದು ಸುಮಾರು ಒಂದು ವರ್ಷದಿಂದ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಂದ ಕಳವು ಮಾಡಿದ ಫೋನ್ ಮತ್ತು 20,000 ರು. ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ .

ಇಬ್ಬರು ಆರೋಪಿಗಳು ನಗರದಿಂದ ಪರಾರಿಯಾಗುವ ಮೊದಲೇ ಅವರನ್ನು ಬಂಧಿಸಲಾಗಿದೆ ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.