Home Crime Bengaluru: ದೊಡ್ಡಬಳ್ಳಾಪುರದ ವಸತಿ ನಿಲಯದಲ್ಲಿ ಬಿ-ಟೆಕ್ ವಿದ್ಯಾರ್ಥಿ ಶವ ಪತ್ತೆ

Bengaluru: ದೊಡ್ಡಬಳ್ಳಾಪುರದ ವಸತಿ ನಿಲಯದಲ್ಲಿ ಬಿ-ಟೆಕ್ ವಿದ್ಯಾರ್ಥಿ ಶವ ಪತ್ತೆ

Bengaluru

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು : ದೊಡ್ಡಬಳ್ಳಾಪುರದ ಡೀಮ್ಡ್ ವಿಶ್ವವಿದ್ಯಾಲಯದ ವಸತಿ ನಿಲಯದ ಆವರಣದಲ್ಲಿ ದಾಸರಿ ಬ್ರಹ್ಮ ಸಾಯಿ ರೆಡ್ಡಿ ಎಂಬ ಬಿ-ಟೆಕ್ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.

ಇದನ್ನೂ ಓದಿ: Parliament Election: ದೇಶದ ಮಹಿಳೆಯರಿಗೆ 5 ಹೊಸ ‘ಗ್ಯಾರಂಟಿ’ ಘೋಷಿಸಿದ ಕಾಂಗ್ರೆಸ್ !!

ಮಂಗಳವಾರ ವಿದ್ಯಾರ್ಥಿಯ ಸಾವಿನ ನಂತರ, ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷದ ಆರೋಪದ ಮೇಲೆ 304ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ . ವಿದ್ಯಾರ್ಥಿಯು ಆಂಧ್ರಪ್ರದೇಶದ ನಂದ್ಯಾಲ ಮೂಲದರೆಂದು ತಿಳಿದು ಬಂದಿದೆ. ಮಂಗಳವಾರ ಸಂಜೆ 7:30ರ ಸುಮಾರಿಗೆ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ.

ಇದನ್ನೂ ಓದಿ: Delhi: ಅಂಗಡಿಗಳಿಗೆ ಕಾರು ಡಿಕ್ಕಿ : ಓರ್ವ ಮಹಿಳೆ ಸಾವು, 6 ಜನರಿಗೆ ಗಂಭೀರ ಗಾಯ : ಚಾಲಕನ ಮೇಲೆ ಸ್ಥಳೀಯರ ಹಲ್ಲೆ

ಮೃತ ಯುವಕ ಮೊದಲ ವರ್ಷದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಯಾಗಿದ್ದು, ಕ್ಯಾಂಪಸ್ನಲ್ಲಿರುವ ವಿಶ್ವವಿದ್ಯಾಲಯದ ವಸತಿ ನಿಲಯದಲ್ಲಿಯೇ ವಾಸವಾಗಿದ್ದು, ಇದೀಗ ನಿರ್ಮಾಣ ಕಾರ್ಯ ನಡೆಯುತ್ತಿದ್ದ ಕಟ್ಟಡದ ಆರನೇ ಮಹಡಿಯಿಂದ ಬಿದ್ದು ಸಾವನಪ್ಪಿದ್ದಾನೆ.

ಸಾವಿನ ಬಗ್ಗೆ ಇದುವರೆಗೂ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ವಿದ್ಯಾರ್ಥಿಯ ಲ್ಯಾಪ್ಟಾಪ್ ಅನ್ನು ವಶಪಡಿಸಿಕೊಂಡಿದ್ದು, ವಿದ್ಯಾರ್ಥಿಯ ಮೊಬೈಲ್ ಫೋನ್ ಆತನ ಜೇಬಿನಲ್ಲಿದ್ದ ಕಾರಣ ಅದು ಸಂಪೂರ್ಣವಾಗಿ ಹಾನಿಗೊಳಗಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗದ್ದಲದ ಸದ್ದು ಕೇಳಿದ ತಕ್ಷಣ ವಿದ್ಯಾರ್ಥಿಗಳು ತಮ್ಮ ವಸತಿ ನಿಲಯದ ಹೊರಗೆ ಬಂದಿದ್ದಾರೆ. ಇದೇ ವೇಳೆ ವಾರ್ಡನ್ ಮತ್ತು ಸೆಕ್ಯುರಿಟಿ ಗಾರ್ಡ್ ಅವರು ಸಹ ಹೊರ ಬಂದಿದ್ದು ವಿದ್ಯಾರ್ಥಿ ಸ್ಥಳದಲ್ಲೇ ಸತ್ತಿದ್ದನ್ನು ಕಂಡದ್ದಾಗಿ ತಿಳಿಸಿದ್ದಾರೆ.

ಸಾವಿನ ನಿಖರ ಕಾರಣವನ್ನು ಕಂಡುಹಿಡಿಯಲು ಪೊಲೀಸರು ಎಫ್ ಎಸ್ ಎಲ್ ವರದಿಗಾಗಿ ಕಾಯುತ್ತಿದ್ದಾರೆ. ಶವವನ್ನು ದೊಡ್ಡಬಳ್ಳಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯ ನಂತರ ವಿದ್ಯಾರ್ಥಿ ಪೋಷಕರಿಗೆ ಹಸ್ತಾಂತರಿಸಲಾಗಿದೆ. ದೊಡ್ಡಬಲ್ಲಾಪುರ ಗ್ರಾಮೀಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.