Home Crime Gang Rape: ರಸ್ತೆ ಬದಿ ನಿಂತಿದ್ದ 16 ವರ್ಷದ ಬಾಲಕಿ ಅಪಹರಣ: ಸಾಮೂಹಿಕ ಅತ್ಯಾಚಾರ

Gang Rape: ರಸ್ತೆ ಬದಿ ನಿಂತಿದ್ದ 16 ವರ್ಷದ ಬಾಲಕಿ ಅಪಹರಣ: ಸಾಮೂಹಿಕ ಅತ್ಯಾಚಾರ

Hindu neighbor gifts plot of land

Hindu neighbour gifts land to Muslim journalist

Gang Rape: ಉತ್ತರ ಪ್ರದೇಶದ(UP) ಮುಜಾಫರ್‌ನಗರದಲ್ಲಿ 16 ವರ್ಷದ ಬಾಲಕಿಯನ್ನು ಇಬ್ಬರು ಸೇರಿ ಅಪಹರಿಸಿ ಅತ್ಯಾಚಾರ(b ಎಸಗಿ, ಅದರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 1ರಂದು ಸಂತ್ರಸ್ತೆ ರಸ್ತೆ ಬದಿ ತನ್ನ ತಾಯಿಗಾಗಿ ಕಾಯುತ್ತಿದ್ದಾಗ, ಇಬ್ಬರು ಯುವಕರು ಕಾರಿನಲ್ಲಿ(Car) ಬಂದು ಅವಳನ್ನು ಬಲವಂತವಾಗಿ ಕಾರಿನೊಳಗೆ ಹತ್ತಿಸಿ, ಹೋಟೆಲ್‌ಗೆ(Hotel) ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಷ್ಟು ಮಾತ್ರವಲ್ಲದೆ ಈ ಕೃತ್ಯದ ವಿಡಿಯೋ ಚಿತ್ರಿಕರಣ ಮಾಡಿಕೊಂಡಿರುವ ಪಾಪಿಗಳು, ಹುಡುಗಿಗೆ ಬೆದರಿಕೆ ಒಡ್ಡಿದ್ದು, ಎಲ್ಲಾದರೂ ಬಾಯಿ ಬಿಟ್ಟರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆದಿದೆ ಎಂದು ವೃತ್ತ ಪೊಲೀಸ್‌ ಅಧಿಕಾರಿ ತಿಳಿಸಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.