Home latest ಕೂಲ್ ಕೂಲ್ ಕೊಡಗಿನಲ್ಲಿ ಕಾವ್ ಕಾವ್ ಕೋಳಿ- ಮೊಟ್ಟೆ ಜಗಳ, ಮಡಿಕೇರಿಯಲ್ಲಿ ಪಥಸಂಚಲನ ನಡೆಸಿ ಧೂಳೆಬ್ಬಿಸಿದ...

ಕೂಲ್ ಕೂಲ್ ಕೊಡಗಿನಲ್ಲಿ ಕಾವ್ ಕಾವ್ ಕೋಳಿ- ಮೊಟ್ಟೆ ಜಗಳ, ಮಡಿಕೇರಿಯಲ್ಲಿ ಪಥಸಂಚಲನ ನಡೆಸಿ ಧೂಳೆಬ್ಬಿಸಿದ ಖಾಕಿ ಪಡೆ !

Hindu neighbor gifts plot of land

Hindu neighbour gifts land to Muslim journalist

ಕೊಡಗಿನಲ್ಲಿ ಮೊಟ್ಟೆಯ ಕಾವು ಆರುತ್ತಿಲ್ಲ. ನಿಷೇಧಾಜ್ಞೆ ಜಾರಿ ಮಾಡಲಾಗಿದ್ದು, ಇಂದು ಎಡಿಜಿಪಿ ಅಲೋಕ್ ಕುಮಾರ್​ ನೇತೃತ್ವದಲ್ಲಿ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ಬೀದಿಗಳಲ್ಲಿ ಪೊಲೀಸರು ಪಥ ಸಂಚಲನ‌ ಮಾಡಿ ಜನರಿಗೆ ಧೈರ್ಯ ತುಂಬಿದರು. ಮತ್ತು ಅದರ ಜತೆಗೇ ಒಂದು ಖಡಕ್ ಸಂದೇಶ ಕೂಡಾ ಸೈಲೆಂಟಾಗಿ ರವಾನೆ ಮಾಡಿದ್ದಾರೆ.

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆತದ ಬಳಿಕ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳು ಒಳಗೊಳಗೆ ಜಗಳ ಕಾರುತ್ತಿವೆ. ಅವುಗಳ ಮದ್ಯೆ ಜಗಳಕ್ಕೆ ನಾಟಿ ಕೋಳಿ ಎಂಟ್ರಿ ಆಗಿದೆ. ಅದು ಅದಾಗಲೇ ಬಿಸಿಯೇರಿದ್ದ ಮೊಟ್ಟೆಗೆ ಇನ್ನಷ್ಟು ಕಾವು ನೀಡಿದೆ. ಅದರ ಪರಿಣಾಮವಾಗಿಯೇ ಕಾವ್ ಕಾವ್ ಎನ್ನುತ್ತಾ ಎರಡು ಪಕ್ಷಗಳು ಮತ್ತು ಮೂರನೆಯ ಜೆಡಿಸ್ ವಾಕ್ಸಮರ ನಡೆಸುತ್ತಿವೆ.

ಭೌಗೊಳಿಕವಾಗಿ ಸದಾ ತಂಪಾಗಿರುವ ಕೊಡಗು ಜಿಲ್ಲೆಯ ಜನರ ಹಿತದೃಷ್ಟಿಯಿಂದ ಎರಡು ಪಕ್ಷಗಳ ಗಲಾಟೆಗೆ ಬ್ರೇಕ್ ಹಾಕಿರುವ ಜಿಲ್ಲಾಡಳಿತ ಸೆಕ್ಷನ್ 144 ಜಾರಿ ಮಾಡಿದೆ. ಸಭೆ, ಸಮಾರಂಭ, ಪ್ರತಿಭಟನೆ ನಡೆಯದಂತೆ ಮೂರು ದಿನಗಳ ಕಾಲ ನಿರ್ಬಂಧ ಹೇರಲಾಗಿದೆ. ಈ ಸಭೆ ಎಡಿಜಿಪಿ ಅಲೋಕ್ ಕುಮಾರ್​ ನೇತೃತ್ವದಲ್ಲಿ ಮಡಿಕೇರಿಯ ಪ್ರಮುಖ ನಗರಗಳಲ್ಲಿ ಪೊಲೀಸರು ಪಥ ಸಂಚಲನ‌ ನಡೆಸಿದರು. ಕುಶಾಲನಗರ, ವಿರಾಜಪೇಟೆ, ಸೋಮವಾರ ಪೇಟೆ, ಪೋನ್ನಪೇಟೆ ಭಾಗದಲ್ಲಿ ಕೂಡ ಪಥಸಂಚಲನ ಮಾಡಿ ನಿಮ್ಮ ಜೊತೆ ನಾವಿದ್ದೇವೆ. ಭಯ ಪಡುವ ಅಗತ್ಯ ಇಲ್ಲ ಎಂದು ಸಾರ್ವಜನಿಕರಿಗೆ ಧೈರ್ಯ ತುಂಬಿದರು.

ಮುಂದಕ್ಕೆ ಜಿಲ್ಲೆಯಲ್ಲಿ ಒಟ್ಟು 20 ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಮಡಿಕೇರಿಯಲ್ಲೇ 16 ಚೆಕ್ ಪೋಸ್ಟ್ ನಿರ್ಮಿಸಲಾಗಿದೆ. ಕಿಡಿಗೇಡಿಗಳಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಈಗಾಗಲೇ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.