Home Interesting “ಧನ್ಯವಾದ” ಹೇಳಿ ಡಿಸ್ಕೌಂಟ್ ಪಡೆಯಿರಿ !! | ಈ ರೆಸ್ಟೋರೆಂಟ್ ನಿಮಗಾಗಿ ನೀಡುತ್ತಿದೆ‌ ವಿಶೇಷ ಆಫರ್

“ಧನ್ಯವಾದ” ಹೇಳಿ ಡಿಸ್ಕೌಂಟ್ ಪಡೆಯಿರಿ !! | ಈ ರೆಸ್ಟೋರೆಂಟ್ ನಿಮಗಾಗಿ ನೀಡುತ್ತಿದೆ‌ ವಿಶೇಷ ಆಫರ್

Hindu neighbor gifts plot of land

Hindu neighbour gifts land to Muslim journalist

ಅದೆಷ್ಟೇ ಆಡಂಬರ, ಅದ್ದೂರಿತನ ಇದ್ದರೂ ನಮ್ಮ ಮನಸ್ಸಿಗೆ ಮುದ ನೀಡುವುದೇ ಶಾಂತಿಯುತವಾದ ನೆಮ್ಮದಿಯ ವಾತಾವರಣ.ಹೀಗಾಗಿ ಅತೀ ಹೆಚ್ಚು ಪ್ರಶಾಂತತೆ ನೀಡೋ ಜಾಗಕ್ಕೆ ಅಧಿಕ ಜನ ತೆರಳುತ್ತಾರೆ.ಇದೇ ರೀತಿಯ ತೆಲಂಗಾಣದಲ್ಲಿರೋ ವಿಶಿಷ್ಟ ರೆಸ್ಟೋರೆಂಟ್‌ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ.ಅದೇಗೆ ಗೊತ್ತಾ?

ಹೌದು.ಈ ರೆಸ್ಟೋರೆಂಟ್‌ ಹೆಸರು ದಕ್ಷಿಣ್‌ -5. ಇದು ಖಾಜಗುಡ ಏರಿಯಾದಲ್ಲಿದ್ದು,ಇಲ್ಲಿ ನೀವು ಎಷ್ಟು ಸೌಜನ್ಯಯುತವಾಗಿ ನಡೆದುಕೊಳ್ತಿರೋ ಅಷ್ಟು ನಿಮಗೆ ಡಿಸ್ಕೌಂಟ್‌ ಸಿಗುತ್ತೆ.ಪ್ಲೀಸ್ ಎಂದು ಹೇಳಿದರು ನಿಮಗಿದೆ ಆಫರ್!!

ಇಲ್ಲಿ ಒಂದು ವೆಜ್‌ ಥಾಲಿಯ ಬೆಲೆ 165 ರೂಪಾಯಿ, ಪ್ಲಸ್‌ ಟ್ಯಾಕ್ಸ್‌.ಆದ್ರೆ ನೀವು ಥಾಲಿ ಪ್ಲೀಸ್‌, ಥ್ಯಾಂಕ್ಸ್ಅಂ ತ ಕೇಳಿದ್ರೆ ನೀವು ಜಸ್ಟ್‌ 150 ರೂಪಾಯಿ ಪಾವತಿಸಬೇಕು. ಸಿಬ್ಬಂದಿಗೆ ಗುಡ್‌ ಆಫ್ಟರ್‌ ನೂನ್‌ ಎಂದು ವಿಶ್‌ ಮಾಡಿದ್ರೆ, ನಿಮ್ಮ ಬಿಲ್‌ ನಲ್ಲಿ 30 ರೂಪಾಯಿ ರಿಯಾಯಿತಿ ಸಿಗುತ್ತದೆ.ರೆಸ್ಟೋರೆಂಟ್‌ ನ ಮಾಂಸಾಹಾರಿ ಖಾದ್ಯಗಳಿಗೂ ಈ ಡಿಸ್ಕೌಂಟ್‌ ಅನ್ವಯವಾಗುತ್ತದೆ.ವೃದ್ಧರಿಗೆ ಇಲ್ಲಿ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ ವಿಶೇಷ ತಿನಿಸುಗಳು ಇಲ್ಲಿ ಸಿಗುತ್ತವೆ.

ಈ ರೀತಿ ಮಾಡುವುದರಿಂದ ಗ್ರಾಹಕರು ಶಾಂತ ರೀತಿಯಿಂದ ವರ್ತಿಸುತ್ತಾರೆ.ಜೊತೆಗೆ ಅವರನ್ನು ಖುಷಿ ಪಡಿಸಬಹುದು ಅನ್ನೋದು ರೆಸ್ಟೋರೆಂಟ್‌ ನ ಮ್ಯಾನೇಜಿಂಗ್‌ ಪಾರ್ಟನರ್‌ ಗಳಾದ ಸಂಜೀವ್‌ ಕುಮಾರ್‌ ಹಾಗೂ ಎ.ಕೆ. ಸೋಲಂಕಿ ಅವರ ಅಭಿಪ್ರಾಯ.ಇವರದ್ದೇ ಒಡೆತನದ ಇನ್ನೊಂದು ರೆಸ್ಟೋರೆಂಟ್‌ ದಿ ವೋಕ್‌ ನೇಶನ್‌ ನಲ್ಲಿ ಡೆಲಿವರಿ ಬಾಯ್ಸ್‌ ಗೆ ಸನ್ಮಾನ ಮಾಡಿರೋದು ವಿಶೇಷ.