Home Breaking Entertainment News Kannada ‘ರಾಕಿ ಭಾಯ್’ ಜೊತೆ ಸಂಜನಾ ಫುಲ್ ಪಾರ್ಟಿ | ಮನೆಯಲ್ಲಿಯೇ ಜೊತೆಯಾಗಿ ‘ಆಪ್ಟರ್ ಪಾರ್ಟಿ’ ನಡೆಸಿ...

‘ರಾಕಿ ಭಾಯ್’ ಜೊತೆ ಸಂಜನಾ ಫುಲ್ ಪಾರ್ಟಿ | ಮನೆಯಲ್ಲಿಯೇ ಜೊತೆಯಾಗಿ ‘ಆಪ್ಟರ್ ಪಾರ್ಟಿ’ ನಡೆಸಿ ಡ್ರಗ್ಸ್ ಸೇವಿಸಿದ ನಟಿ !!

Hindu neighbor gifts plot of land

Hindu neighbour gifts land to Muslim journalist

ಬೆಂಗಳೂರು: ನಟಿ ಸಂಜನಾ ಗಲ್ರಾಣಿಯವರ ಮುಖವಾಡ ಕಳಚಿ ಬಿದ್ದಿದ್ದು, ಇವರು ‘ರಾಕಿ ಭಾಯಿ’ಎಂಬುವವರನ್ನು ಹಲವು ಬಾರಿ ಮನೆಗೆ ಆಹ್ವಾನಿಸಿ ಜೊತೆಯಲ್ಲೇ ‘ಆಪ್ಟರ್ ಪಾರ್ಟಿ’ ಆಚರಿಸಿ ಡ್ರಗ್ಸ್ ಸೇವಿಸಿದ್ದಳು’ ಎಂಬ ವಿಷಯ ಈಗ ಸಿಸಿಬಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.

ಅಷ್ಟಕ್ಕೂ ಆಕೆಯ ‘ರಾಕಿ ಭಾಯಿ’ಯಾರೆಂಬುದು ಎಲ್ಲರಿಗೂ ಕುತೂಹಲ ಮೂಡಿಸಿದೆ. ಈತ ಬೇರೆ ಯಾರು ಅಲ್ಲ,ವಿದೇಶಗಳಲ್ಲಿರುವ ಕ್ಯಾಸಿನೊ ಮತ್ತು ಕ್ಲಬ್‌ಗಳಿಗೆ ಗ್ರಾಹಕರನ್ನು ಕರೆದೊಯ್ಯುವ ಮಧ್ಯವರ್ತಿಯಾಗಿದ್ದ ಆರೋಪಿ ರಾಹುಲ್ ತೋನ್ಸೆ.

ಈತ ಮದುವೆ ನೆಪದಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಡ್ರಗ್ಸ್ ಜಾಲಕ್ಕೆ ದೂಡುತ್ತಿದ್ದ.
ಅಷ್ಟೇ ಅಲ್ಲದೆ ಮಾದಕ ವಸ್ತು ಸೇವಿಸಲು ಹಾಗೂ ಮಾರಾಟದಿಂದ ಹಣಗಳಿಸಲು ಸಂಘಟಿತರಾಗಿದ್ದ ಅಂತರರಾಷ್ಟ್ರೀಯ ಡ್ರಗ್ಸ್ ಪ್ರಕರಣದ ಆರೋಪಿಗಳು, ಯುವಜನರನ್ನು ತೆಕ್ಕೆಗೆ ಬೀಳಿಸಿಕೊಂಡು ನಶೆ ಏರಿಸಿಕೊಳ್ಳಲು ಪ್ರಚೋದಿಸುತ್ತಿದ್ದ.

ಈ ‘ಆಪ್ಟರ್ ಪಾರ್ಟಿ’ಎಂಬುದು ಆಪ್ತರನ್ನಷ್ಟೇ ಸೇರಿಸಿಕೊಂಡು ಮಾಡುತ್ತಿದ್ದ ಪಾರ್ಟಿ ಆಗಿದ್ದು, ಸಂಜನಾ ಇದರಲ್ಲಿ ಹೈ ಎಕ್ಸ್ಪರ್ಟ್ ಆಗಿದ್ದರು.ಇದೀಗ ಪ್ರಕರಣದಲ್ಲಿ 25 ಆರೋಪಿಗಳ ಪಾತ್ರ ಕುರಿತು ಸಿಸಿಬಿ ಪೊಲೀಸರು, ದೋಷಾರೋಪ ಪಟ್ಟಿಯಲ್ಲಿ ದಾಖಲೆ ಸಮೇತ ಉಲ್ಲೇಖಿಸಿದ್ದಾರೆ.

ಸಂಜನಾ ಈತನನ್ನು ರಾಕಿ ಭಾಯಿ ಎಂದು ಕರೆಯುತ್ತಿದ್ದಳು. ಇಷ್ಟಕ್ಕೂ ಈತನ ರಾಕಿಂಗ್ ವಿಷಯ ತಿಳಿದರೆ ದಂಗಾಗೋದು ಅಂತೂ ಗ್ಯಾರಂಟಿ. ಹೌದು ಈತ ಸುಂದರ ಯುವತಿಯರನ್ನು ಪರಿಚಯಿಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದ,ಅವರನ್ನು ಪಾರ್ಟಿಗಳಿಗೆ ಆಹ್ವಾನಿಸಿ ಡ್ರಗ್ಸ್ ಸೇವಿಸುವಂತೆ ಮಾಡುತ್ತಿದ್ದ.

ಆತನ ಮೊಬೈಲ್‌ನಲ್ಲಿ ಕಾಗದದಲ್ಲಿ ಗಾಂಜಾ ಸುತ್ತಿ ಗೆಳತಿಯ ಜೊತೆ ಸೇವಿಸುತ್ತಿದ್ದ ಫೋಟೊಗಳು ಲಭ್ಯವಾಗಿವೆ ಎಂಬ ವಿಷಯ ದೋಷಾರೋಪ ಪಟ್ಟಿಯಲ್ಲಿದೆ.

‘ಪ್ರಕರಣದ 14ನೇ ಆರೋಪಿ ಆಗಿರುವ ಅರ್ಚನಾ ಮನೋಹರ್ ಗಾನಿ ಅಲಿಯಾಸ್ ಸಂಜನಾ ಗಲ್ರಾಣಿ, ಇಂದಿರಾನಗರದ ದೂಪನಹಳ್ಳಿಯ ಸಾಯಿ ತೇಜ್ ಶೈನ್ ವಸತಿ ಸಮುಚ್ಚಯದ ಫ್ಲ್ಯಾಟ್‌ನಲ್ಲಿ ವಾಸವಿದ್ದಳು. ರಾಹುಲ್ ತೋನ್ಸೆ ಹಾಗೂ ನಿಯಾಸ್ ಅಹಮ್ಮದ್‌ನನ್ನು ಹಲವು ಬಾರಿ ಮನೆಗೆ ಕರೆಸಿದ್ದ ಸಂಜನಾ, ಡ್ರಗ್ಸ್
ಸಮೇತ ‘ಆಪ್ಟರ್ ಪಾರ್ಟಿ’ ಮಾಡಿರುವುದು ದೃಢಪಟ್ಟಿದೆ.

‘ನೈಜೀರಿಯಾ ಪ್ರಜೆ ಜಾನ್ ಅಲಿಯಾಸ್ ಬೆನಾಲ್ಡ್ ಉಡೇನ್ನಾ ಎಂಬಾತನೇ ಆರೋಪಿಗಳಿಗೆ ಕೊಕೇನ್, ಎಂಡಿಎಂಎ ಹಾಗೂ ಗಾಂಜಾ ಪೂರೈಕೆ ಮಾಡಿದ್ದ. ಪಕ್ಕದ ಮನೆಯ ನಿವಾಸಿಯೊಬ್ಬರನ್ನು ನೈಜೀರಿಯಾ ಪ್ರಜೆ ಬಳಿ ಕಳುಹಿಸಿದ್ದ ಸಂಜನಾ, ಅವರ ಮೂಲಕ ಡ್ರಗ್ಸ್ ತರಿಸಿದ್ದಳು. ಇದೇ ವಿಚಾರವಾಗಿ ನಿವಾಸಿಯ ಪತ್ನಿಯು
ಸಂಜನಾ ಜೊತೆ ಗಲಾಟೆ ಸಹ ಮಾಡಿದ್ದರು’ ಎಂಬ ಮಾಹಿತಿ ದೋಷಾರೋಪ ಪಟ್ಟಿಯಲ್ಲಿದೆ.

ಸಿಗರೇಟ್ ಪ್ಯಾಕ್‌ನಲ್ಲಿ ಕೊಕೇನ್ ಬಚ್ಚಿಟ್ಟು ಸಂಜನಾ ಮನೆಗೆ ಕಳುಹಿಸಲಾಗುತ್ತಿತ್ತು.ಅದನ್ನು ಪಡೆಯುತ್ತಿದ್ದ ಸಂಜನಾ, ಪ್ಲೇಟ್‌ನಲ್ಲಿ ಕೊಕೇನ್ ಸುರಿದುಕೊಂಡು ಮೂಗಿನಿಂದ ಎಳೆದು ನಶೆ ಏರಿಸಿಕೊಳ್ಳುತ್ತಿದ್ದಳು’
ಎಂಬ ಅಂಶವನ್ನೂ ಪಟ್ಟಿಯಲ್ಲಿ ತಿಳಿಸಲಾಗಿದೆ.

‘2019ರ ಅಕ್ಟೋಬರ್ 9 ರಂದು ನ್ಯೂ ಬಿಇಎಲ್ ರಸ್ತೆಯಲ್ಲಿರುವ ‘ಹಾಫ್ ವೇ ಹೌಸ್’ ರೆಸ್ಟೋರೆಂಟ್‌ನಲ್ಲಿ ಸಂಜನಾ ಗಲ್ರಾಣಿ ಹುಟ್ಟುಹಬ್ಬ ಪಾರ್ಟಿ ಆಯೋಜಿಸಲಾಗಿತ್ತು. ಅಲ್ಲಿಯೂ ಡ್ರಗ್ಸ್
ಸೇವನೆ ಹಾಗೂ ಮಾರಾಟ ನಡೆದಿತ್ತು. 2017ರ ಅಕ್ಟೋಬರ್‌ನಲ್ಲಿ ಕೋರಮಂಗಲದ ವಾಲ್‌ಸ್ಟ್ರೀಟ್ ಕ್ಲಬ್‌ನಲ್ಲೂ ಆಯೋಜಿಸಿದ್ದ ಪಾರ್ಟಿಯಲ್ಲೂ ಡ್ರಗ್ಸ್ ದಂಧೆ ಜೋರಾಗಿತ್ತು.

‘2018ರ ಫೆಬ್ರುವರಿ 14 ರಂದು ‘ಪ್ರೇಮಿಗಳ ದಿನಾಚರಣೆ’
ಹೆಸರಿನಲ್ಲಿ ಜೆಡಬ್ಲ್ಯು ಮ್ಯಾರಿಯೇಟ್ ಹೋಟೆಲ್‌ನಲ್ಲಿ ಆರೋಪಿ ವೈಭವ್ ಕುಮಾರ್ ಜೈನ್ ಪಾರ್ಟಿ ಆಯೋಜಿಸಿದ್ದ. ಅದೇ ಪಾರ್ಟಿಗೆ ಹೋಗಿದ್ದ ಸಂಜನಾಳ ಬಾಯಿಗೆ ಆರೋಪಿ ವೈಭವ್ ಡ್ರಗ್ಸ್ ಮಾತ್ರೆಗಳನ್ನು ಹಾಕಿದ್ದ. ಸ್ನೇಹಿತರೊಬ್ಬರು ನೀರು ಕುಡಿಸಿದ್ದರು. ಪಾರ್ಟಿಯಲ್ಲಿ ಪಾಲ್ಗೊಂಡಿದ್ದವರು ಡ್ರಗ್ಸ್ ಸೇವಿಸಿ,
ಅದರ ಮತ್ತಿನಲ್ಲೇ ತೇಲಾಡಿದ್ದರು’ ಎಂಬ ಮಾಹಿತಿಯೂ
ಪಟ್ಟಿಯಲ್ಲಿದೆ.

ಫ್ಯಾಷನ್ ಷೋ ಆಯೋಜಕನ ಮನೆಯಲ್ಲಿ ಡ್ರಗ್ಸ್
‘ಪ್ರಕರಣದ 13ನೇ ಆರೋಪಿ ಆಗಿರುವ ನಿಯಾಸ್ ಅಹ್ಮದ್,ಸಂಜನಾ ಜೊತೆ ಒಡನಾಟ ಹೊಂದಿದ್ದ. ಆಕೆಯ ಮನೆಯಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳಲ್ಲಿ ಪಾಲ್ಗೊಂಡು ಡ್ರಗ್ಸ್ ಸೇವಿಸುತ್ತಿದ್ದ. ಫ್ಯಾಷನ್ ಶೋ ಆಯೋಜಕನಾಗಿದ್ದ ಆತನ ಮನೆ ಮೇಲೆ ದಾಳಿ ಮಾಡಿದಾಗ, 4 ಗ್ರಾಂ ಗಾಂಜಾ ಹಾಗೂ ಕಪ್ಪು
ಬಣ್ಣದ ಚಿಲುಮೆ ಪತ್ತೆಯಾಗಿತ್ತು’ ಎಂಬ ಅಂಶವನ್ನೂ ಪಟ್ಟಿಯಲ್ಲಿ ತಿಳಿಸಲಾಗಿದೆ.